ಮಲ್ಲಿಗೆ ಹೂವು ಅಂದಾಕ್ಷಣ ಅದರ ಸುಮಧುರವಾದ ವಾಸನೆ ನೆನಪಾಗುತ್ತದೆ. ಹೆಣ್ಣುಮಕ್ಕಳು ಇಷ್ಟಪಟ್ಟು ಮುಡಿಯುವ ಈ ಹೂವು ಕೇವಲ ಅಂದಕ್ಕಷ್ಟೇ ಅಲ್ಲ, ಆರೋಗ್ಯಕ್ಕೂ ತುಂಬಾ ಒಳ್ಳೆಯದು.
health-life Mar 29 2026
Author: Ashwini HR Image Credits:Instagram
Kannada
ರಾತ್ರಿ ಸಮಯದಲ್ಲಿ
ವಿಶೇಷವಾಗಿ ರಾತ್ರಿ ಸಮಯದಲ್ಲಿ ಇದರ ಘಮ ಮನಸ್ಸಿಗೆ ಒಂದು ರೀತಿಯ ನೆಮ್ಮದಿ ನೀಡುತ್ತದೆ. ಮಲ್ಲಿಗೆಯಿಂದ ಏನೆಲ್ಲಾ ಪ್ರಯೋಜನಗಳಿವೆ ಎಂದು ಇಲ್ಲಿ ಸುಲಭವಾಗಿ ತಿಳಿಯೋಣ.
Image credits: Instagram
Kannada
ಒತ್ತಡ ಕಡಿಮೆ ಮಾಡುತ್ತೆ
ದಿನವಿಡೀ ಕೆಲಸ ಮಾಡಿ ಸುಸ್ತಾದಾಗ ಮಲ್ಲಿಗೆ ಹೂವಿನ ವಾಸನೆ ಆಘ್ರಾಣಿಸಿದರೆ ಅಥವಾ ಮುಡಿದರೆ ಮನಸ್ಸಿನ ಆತಂಕ ಮತ್ತು ಒತ್ತಡ ಕಡಿಮೆಯಾಗುತ್ತದೆ. ಇದು ಹಿತವಾದ ನಿದ್ರೆ ಬರಲು ಸಹಾಯ ಮಾಡುತ್ತದೆ.
Image credits: Instagram
Kannada
ಮಧುಮೇಹಕ್ಕೆ
ಮಲ್ಲಿಗೆ ಹೂವಿನಿಂದ ಮಾಡಿದ ಚಹಾ (Jasmine Tea) ಕುಡಿಯುವುದರಿಂದ ರಕ್ತದಲ್ಲಿನ ಸಕ್ಕರೆ ಅಂಶ ನಿಯಂತ್ರಣಕ್ಕೆ ಬರುತ್ತದೆ. ಅದಕ್ಕಾಗಿಯೇ ಆರೋಗ್ಯದ ಮೇಲೆ ಕಾಳಜಿ ಇರುವವರು ಇದನ್ನು ಹೆಚ್ಚಾಗಿ ಬಳಸುತ್ತಾರೆ.
Image credits: Instagram
Kannada
ಚರ್ಮದ ಸಮಸ್ಯೆಗಳಿಗೆ
ನಿಮಗೆ ಚರ್ಮದ ತುರಿಕೆ ಅಥವಾ ಇನ್ಯಾವುದೇ ಸಮಸ್ಯೆ ಇದ್ದರೆ, ಮಲ್ಲಿಗೆ ಹೂವು ನೆನೆಸಿದ ನೀರನ್ನು ವಾರಕ್ಕೆ ಎರಡು ಬಾರಿ ಚರ್ಮಕ್ಕೆ ಹಚ್ಚಿ. ಇದರಿಂದ ಮೊಡವೆಗಳು ಕಡಿಮೆಯಾಗಿ ಮುಖ ಕಾಂತಿಯುತವಾಗುತ್ತದೆ.
Image credits: Instagram
Kannada
ತಲೆನೋವಿನಿಂದ ಮುಕ್ತಿ
ವಿಪರೀತ ತಲೆನೋವು ಕಾಡುತ್ತಿದ್ದರೆ, ಮಲ್ಲಿಗೆ ಹೂವನ್ನು ಮೆತ್ತಗೆ ಅರೆದು ಹಣೆ ಅಥವಾ ಕಣ್ಣಿನ ಹತ್ತಿರ ಹಚ್ಚಿಕೊಂಡರೆ ನೋವು ಬೇಗನೆ ಕಡಿಮೆಯಾಗುತ್ತದೆ.
Image credits: instagram
Kannada
ಮಹಿಳೆಯರಿಗೆ ಉತ್ತಮ
ಮಲ್ಲಿಗೆ ಹೂವು ಮಹಿಳೆಯರ ಆರೋಗ್ಯಕ್ಕೆ ಮತ್ತು ಸೌಂದರ್ಯಕ್ಕೆ ತುಂಬಾ ಪೂರಕವಾಗಿದೆ.