ಪುದೀನಾ ಎಲೆಗಳು ಕೇವಲ ಅಡುಗೆಯ ರುಚಿ ಹೆಚ್ಚಿಸಲು ಮಾತ್ರವಲ್ಲ, ನೈಸರ್ಗಿಕ ಆರೋಗ್ಯದ ಗಣಿಯೂ ಹೌದು. ಪ್ರತಿದಿನ ಈ ಎಲೆಗಳನ್ನು ಜಗಿಯುವುದರಿಂದ ದೇಹಕ್ಕೆ ಸಿಗುವ ಅದ್ಭುತ ಲಾಭಗಳು ಇಲ್ಲಿವೆ ನೋಡಿ.
health-life Mar 28 2026
Author: Ashwini HR Image Credits:Freepik
Kannada
ಹೊಟ್ಟೆಯ ಆರೋಗ್ಯ
ಪುದೀನಾ ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ. ಗ್ಯಾಸ್, ಅಜೀರ್ಣ ಅಥವಾ ಹೊಟ್ಟೆ ಉಬ್ಬರದಂತಹ ಸಮಸ್ಯೆ ಇರುವವರು ಪ್ರತಿದಿನ ಇದನ್ನು ಬಳಸಬಹುದು.
Image credits: Getty
Kannada
ಬಾಯಿಯ ದುರ್ವಾಸನೆಗೆ ಮುಕ್ತಿ
ಬಾಯಿಯ ವಾಸನೆಯಿಂದ ಮುಜುಗುರ ಪಡುವವರು ಪುದೀನಾ ಎಲೆಗಳನ್ನು ಜಗಿಯಬಹುದು. ಇದು ಬಾಯಿಯಲ್ಲಿ ತಾಜಾತನ ಮೂಡಿಸಿ, ಒಸಡುಗಳನ್ನು ಸದೃಢಗೊಳಿಸುತ್ತದೆ.
Image credits: Freepik
Kannada
ಮಾನಸಿಕ ಒತ್ತಡ ಕಡಿಮೆಯಾಗುತ್ತೆ
ಪುದೀನಾ ಸೇವನೆಯಿಂದ ಮನಸ್ಸು ಪ್ರಶಾಂತವಾಗುತ್ತದೆ. ಇದು ಮಾನಸಿಕ ಒತ್ತಡ (Stress) ಕಡಿಮೆ ಮಾಡಲು ಮತ್ತು ಪದೇ ಪದೇ ಬರುವ ತಲೆನೋವಿನಿಂದ ಮುಕ್ತಿ ನೀಡಲು ಸಹಕಾರಿ.
Image credits: Freepik
Kannada
ಬೇಸಿಗೆಗೆ ಉತ್ತಮ
ಪುದೀನಾ ತಂಪು ಗುಣವನ್ನು ಹೊಂದಿದೆ. ಇದು ಬೇಸಿಗೆಯಲ್ಲಿ ದೇಹದ ಉಷ್ಣತೆಯನ್ನು ಕಡಿಮೆ ಮಾಡಿ ನಿಮ್ಮನ್ನು ಹುರುಪಿನಿಂದ ಇಡುತ್ತದೆ.
Image credits: pixabay
Kannada
ಹೇಗೆ ಸೇವಿಸಬೇಕು?
ಹೆಚ್ಚಿನ ಲಾಭ ಪಡೆಯಲು ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ 3-4 ತಾಜಾ ಪುದೀನಾ ಎಲೆಗಳನ್ನು ಜಗಿದು ತಿನ್ನುವುದು ತುಂಬಾ ಒಳ್ಳೆಯದು.