Kannada

Superfoods: ಒತ್ತಡ ಕಡಿಮೆ ಮಾಡಲು ನೀವು ತಿನ್ನಲೇಬೇಕಾದ 7 ಸೂಪರ್‌ಫುಡ್‌ಗಳು!

ಇಂದಿನ ಓಟದ ಬದುಕಿನಲ್ಲಿ ಒತ್ತಡ ಅನ್ನೋದು ಸಾಮಾನ್ಯ. ಈ ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುವ ಏಳು ಸೂಪರ್‌ಫುಡ್‌ಗಳ ಬಗ್ಗೆ ಇಲ್ಲಿದೆ ಮಾಹಿತಿ.

Kannada

ಕೊಬ್ಬಿನಾಂಶವಿರುವ ಮೀನು

ಸಾಲ್ಮನ್, ಬಂಗುಡೆ, ಬೂತಾಯಿ ಮೀನುಗಳಲ್ಲಿ ಒಮೆಗಾ-3 ಫ್ಯಾಟಿ ಆಸಿಡ್ ಮತ್ತು ವಿಟಮಿನ್ ಡಿ ಅಧಿಕವಾಗಿದೆ. ಇವು ಆತಂಕವನ್ನು ಕಡಿಮೆ ಮಾಡಿ, ಒತ್ತಡದ ಹಾರ್ಮೋನ್ ಆದ ಕಾರ್ಟಿಸೋಲ್ ಮಟ್ಟವನ್ನು ತಗ್ಗಿಸುತ್ತವೆ.

Image credits: Getty
Kannada

ಹಸಿರು ಎಲೆ ತರಕಾರಿಗಳು

ಪಾಲಕ್, ಬ್ರೊಕೊಲಿಯಂತಹ ಹಸಿರು ತರಕಾರಿಗಳಲ್ಲಿ ಮೆಗ್ನೀಸಿಯಮ್ ಹೇರಳವಾಗಿದೆ. ಇದು ಕಾರ್ಟಿಸೋಲ್ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

Image credits: Getty
Kannada

ಸಿಟ್ರಸ್ ಹಣ್ಣುಗಳು ಮತ್ತು ಬೆರ್ರಿಗಳು

ಸಿಟ್ರಸ್ ಹಣ್ಣುಗಳು ಮತ್ತು ಬೆರ್ರಿಗಳು ಕಾರ್ಟಿಸೋಲ್ ಮಟ್ಟವನ್ನು ಕಡಿಮೆ ಮಾಡುತ್ತವೆ. ಜೊತೆಗೆ, ಮೆದುಳಿನಲ್ಲಿನ ಆಕ್ಸಿಡೇಟಿವ್ ಒತ್ತಡವನ್ನು ಕಡಿಮೆ ಮಾಡಲು ನೆರವಾಗುತ್ತವೆ.

Image credits: Getty
Kannada

ನಟ್ಸ್ ಮತ್ತು ಬೀಜಗಳು

ಬಾದಾಮಿ, ವಾಲ್‌ನಟ್ ಮತ್ತು ಕುಂಬಳಕಾಯಿ ಬೀಜಗಳಲ್ಲಿ ಮೆಗ್ನೀಸಿಯಮ್ ಮತ್ತು ಸೆಲೆನಿಯಮ್ ಅಂಶಗಳಿವೆ. ಇವು ಒತ್ತಡದ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ.

Image credits: Getty
Kannada

ಗ್ರೀನ್ ಟೀ

ಗ್ರೀನ್ ಟೀಯಲ್ಲಿ ಅಮೈನೋ ಆಸಿಡ್ ಅಂಶವಿದ್ದು, ಇದು ಆತಂಕವನ್ನು ಕಡಿಮೆ ಮಾಡುತ್ತದೆ. ಅಲ್ಲದೆ, ಒತ್ತಡಕ್ಕೆ ಸಂಬಂಧಿಸಿದ ಕಾರ್ಟಿಸೋಲ್ ಮಟ್ಟವನ್ನು ತಗ್ಗಿಸಲು ನೆರವಾಗುತ್ತದೆ.

Image credits: Getty
Kannada

ಡಾರ್ಕ್ ಚಾಕೊಲೇಟ್

ಡಾರ್ಕ್ ಚಾಕೊಲೇಟ್ ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಡಾರ್ಕ್ ಚಾಕೊಲೇಟ್ ಸೇವನೆಯು ಒತ್ತಡದ ಹಾರ್ಮೋನ್ ಆದ ಕಾರ್ಟಿಸೋಲ್ ಮಟ್ಟವನ್ನು ಕಡಿಮೆ ಮಾಡುತ್ತದೆ ಎಂದು ಅಧ್ಯಯನಗಳಿಂದ ಸಾಬೀತಾಗಿದೆ.

Image credits: pexels

AC ನಿಮ್ಮ ಚರ್ಮವನ್ನು ಹಾಳು ಮಾಡುತ್ತಿದೆಯೇ? ಈ ಲಕ್ಷಣಗಳನ್ನು ನಿರ್ಲಕ್ಷ್ಯ ಮಾಡಬೇಡಿ

ಬೇಸಿಗೆಯಲ್ಲಿ ಚರ್ಮದ ರಕ್ಷಣೆ ಹೀಗೆ ಮಾಡಿ: ಸನ್‌ಬರ್ನ್-ಟ್ಯಾನಿಂಗ್‌ನಿಂದ ಪಾರಾಗಿ!

ಮುಖ ತೊಳೆಯಲು ಬಿಸಿ ನೀರು Vs ತಣ್ಣೀರು; ಚರ್ಮದ ಆರೋಗ್ಯಕ್ಕೆ ಯಾವುದು ಬೆಸ್ಟ್?

ಒತ್ತಡ ಹೆಚ್ಚಿಸುವ ಕಾರ್ಟಿಸೋಲ್ ಹಾರ್ಮೋನ್ ಕಡಿಮೆ ಮಾಡಲು ಈ 5 ಡ್ರಿಂಕ್ಸ್ ಕುಡಿಯಿರಿ