ಚಮಕ್ ನಟಿ ರಶ್ಮಿಕಾ ಮಂದಣ್ಣ ಫಿಟ್ನೆಸ್ ಸೀಕ್ರೆಟ್: ಹೀಗಿದೆ ಅವರ ಡಯಟ್ ಪ್ಲ್ಯಾನ್!
ನಟಿ ರಶ್ಮಿಕಾ ಮಂದಣ್ಣ ತಮ್ಮ ಫಿಟ್ನೆಸ್ ಹಾಗೂ ತ್ವಚೆಯ ಆರೈಕೆಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಾರೆ. ತಮ್ಮ ವರ್ಕೌಟ್ ವಿಡಿಯೋಗಳನ್ನು ಆಗಾಗ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾರೆ.
health-life Mar 22 2026
Author: Govindaraj S Image Credits:X
Kannada
ದಿನದ ಆರಂಭ ನೀರು ಕುಡಿಯುವುದರಿಂದ
ರಶ್ಮಿಕಾ ಮಂದಣ್ಣ ತಮ್ಮ ದಿನವನ್ನು ನೀರು ಕುಡಿಯುವ ಮೂಲಕ ಆರಂಭಿಸುತ್ತಾರೆ. ಇದು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ ಮತ್ತು ಮೆಟಬಾಲಿಸಂ ಸುಧಾರಿಸುತ್ತದೆ.
Image credits: Our own
Kannada
ರಶ್ಮಿಕಾಗೆ ಸಸ್ಯಾಹಾರಿ ಊಟವೇ ಹೆಚ್ಚು ಇಷ್ಟ
ರಶ್ಮಿಕಾ ಮಂದಣ್ಣನವರಿಗೆ ಸಸ್ಯಾಹಾರಿ ಆಹಾರಗಳೆಂದರೆ ಹೆಚ್ಚು ಇಷ್ಟ. ಬೆಳಗಿನ ಉಪಾಹಾರಕ್ಕೆ ಅವಕಾಡೊ ಟೋಸ್ಟ್ ತಿನ್ನುತ್ತಾರೆ ಎಂದು ರಶ್ಮಿಕಾ ಹೇಳಿದ್ದಾರೆ.
Image credits: Our own
Kannada
ಗೆಣಸು ರಶ್ಮಿಕಾರ ಫೇವರಿಟ್ ಸ್ನ್ಯಾಕ್
ಲಘು ಆಹಾರವಾಗಿ ಗೆಣಸು ತಿನ್ನಲು ರಶ್ಮಿಕಾ ಇಷ್ಟಪಡುತ್ತಾರೆ. ಅದರ ಮೇಲೆ ಚಕ್ಕೆ ಪುಡಿ ಉದುರಿಸಿ ತಿನ್ನುವುದು ಅವರ ನೆಚ್ಚಿನ ಸ್ನ್ಯಾಕ್ ಅಂತೆ.
Image credits: Our own
Kannada
ಸಿಹಿ ತಿಂಡಿಗಳೆಂದರೆ ರಶ್ಮಿಕಾಗೆ ಸಿಕ್ಕಾಪಟ್ಟೆ ಇಷ್ಟ
ರಶ್ಮಿಕಾ ಮಂದಣ್ಣಗೆ ಸಿಹಿ ತಿಂಡಿಗಳೆಂದರೆ ಬಹಳ ಇಷ್ಟ. ತಮ್ಮ 'ಚೀಟ್ ಡೇ' ದಿನದಂದು ಡೆಸರ್ಟ್‌ಗಳನ್ನು ತಿನ್ನಲು ಹೆಚ್ಚು ಇಷ್ಟಪಡುತ್ತೇನೆ ಎಂದು ಅವರು ಇತ್ತೀಚೆಗೆ ಹೇಳಿಕೊಂಡಿದ್ದರು.
Image credits: rashmika mandanna instagram
Kannada
ಕೆಲವು ತರಕಾರಿಗಳಿಗೆ ಅಲರ್ಜಿ ಇದೆಯಂತೆ
ಟೊಮೆಟೊ, ಆಲೂಗಡ್ಡೆ ಮತ್ತು ಕ್ಯಾಪ್ಸಿಕಂನಂತಹ ಕೆಲವು ತರಕಾರಿಗಳು ತನಗೆ ಅಲರ್ಜಿ ಎಂದು ರಶ್ಮಿಕಾ ಇತ್ತೀಚೆಗೆ ಬಹಿರಂಗಪಡಿಸಿದ್ದರು. ಹಾಗಾಗಿ ಇವನ್ನು ಡಯಟ್‌ನಲ್ಲಿ ಸೇರಿಸುವುದಿಲ್ಲ. & ನಿಯಮಿತವಾಗಿ ವರ್ಕೌಟ್ ಮಾಡುತ್ತಾರೆ.
Image credits: instagram
Kannada
ಬೆಳಗ್ಗೆ ಎದ್ದ ತಕ್ಷಣ ಮುಖವನ್ನು ಚೆನ್ನಾಗಿ ತೊಳೆಯುತ್ತಾರೆ
ತ್ವಚೆಯ ಆರೈಕೆಗಾಗಿ ರಶ್ಮಿಕಾ ತುಂಬಾ ಸರಳವಾದ ವಿಧಾನಗಳನ್ನು ಅನುಸರಿಸುತ್ತಾರೆ. ಪ್ರತಿದಿನ ಬೆಳಗ್ಗೆ ಎದ್ದ ತಕ್ಷಣ ಮುಖವನ್ನು ಚೆನ್ನಾಗಿ ತೊಳೆದುಕೊಳ್ಳುತ್ತಾರೆ.
Image credits: instagram
Kannada
ಮಾಯಿಶ್ಚರೈಸರ್ ಮತ್ತು ಸನ್‌ಸ್ಕ್ರೀನ್ ಕಡ್ಡಾಯ
ಮುಖ ತೊಳೆದ ನಂತರ ಮಾಯಿಶ್ಚರೈಸರ್ ಹಚ್ಚುತ್ತಾರೆ. ಮನೆಯಿಂದ ಹೊರಗೆ ಹೋಗುವ ಮುನ್ನ ಸನ್‌ಸ್ಕ್ರೀನ್ ಹಚ್ಚುವುದನ್ನು ಎಂದಿಗೂ ಮರೆಯುವುದಿಲ್ಲ.