ಕಿಡ್ನಿಗೆ ತೊಂದರೆಯಾದ್ರೆ ಕಾಣಿಸಿಕೊಳ್ಳುವ ಆರಂಭಿಕ ಲಕ್ಷಣಗಳಿವು
ಮಾನವ ದೇಹದಲ್ಲಿನ ತ್ಯಾಜ್ಯವನ್ನು ಹೊರಹಾಕುವ ಅಂಗವೆಂದರೆ ಕಿಡ್ನಿ. ಹಲವು ಕಾರಣಗಳಿಂದ ಕಿಡ್ನಿಗಳು ಹಾನಿಗೊಳಗಾಗಬಹುದು. ಕಿಡ್ನಿಗೆ ತೊಂದರೆಯಾದರೆ ಕಾಣಿಸಿಕೊಳ್ಳುವ ಕೆಲವು ಲಕ್ಷಣಗಳು ಯಾವುವು ಎಂದು ನೋಡೋಣ.
Kannada
ಮೂತ್ರ ವಿಸರ್ಜನೆಯಲ್ಲಿ ಬದಲಾವಣೆಗಳು
ರಾತ್ರಿ ವೇಳೆ ಪದೇ ಪದೇ ಮೂತ್ರ ವಿಸರ್ಜನೆ, ಮೂತ್ರದ ಪ್ರಮಾಣ ಕಡಿಮೆಯಾಗುವುದು, ಮೂತ್ರದಲ್ಲಿ ಗಾಢ ಬಣ್ಣ ಇವು ಕಿಡ್ನಿಗೆ ತೊಂದರೆಯಾಗಿರುವ ಸೂಚನೆಗಳಾಗಿರಬಹುದು.
Kannada
ಕೈ-ಕಾಲುಗಳಲ್ಲಿ ಊತ
ಕಿಡ್ನಿಯ ಕಾರ್ಯಚಟುವಟಿಕೆ ನಿಧಾನವಾಗುವುದರಿಂದ ಕಾಲುಗಳಲ್ಲಿ, ಕೈಗಳಲ್ಲಿ, ಕಣ್ಣಿನ ಕೆಳಗೆ ಮತ್ತು ಮುಖದಲ್ಲಿ ಊತ ಕಾಣಿಸಿಕೊಳ್ಳಬಹುದು.
Kannada
ಒಣ ಚರ್ಮ, ಚರ್ಮದ ತುರಿಕೆ
ಕಿಡ್ನಿಗಳು ಹಾನಿಗೊಳಗಾದಾಗ ದೇಹದ ತ್ಯಾಜ್ಯ ಮತ್ತು ಲವಣಗಳು ರಕ್ತದಲ್ಲಿ ಸಂಗ್ರಹವಾಗುತ್ತವೆ. ಇದರಿಂದ ಒಣ ಚರ್ಮ, ಚರ್ಮದ ತುರಿಕೆ ಉಂಟಾಗಬಹುದು.
Kannada
ಆಯಾಸ ಮತ್ತು ದಣಿವು
ಆಯಾಸ ಮತ್ತು ದಣಿವು ಹಲವು ಕಾರಣಗಳಿಂದ ಉಂಟಾಗಬಹುದು. ಆದರೆ ಕಿಡ್ನಿಗೆ ಸಂಬಂಧಿಸಿದ ಸಮಸ್ಯೆಗಳಿಂದಲೂ ಆಯಾಸ ಮತ್ತು ದಣಿವು ಉಂಟಾಗಬಹುದು.
Kannada
ಉಸಿರಾಟದ ತೊಂದರೆ
ಕೆಲವು ಸಂದರ್ಭಗಳಲ್ಲಿ, ಉಸಿರಾಟದ ತೊಂದರೆ ಕಿಡ್ನಿಯ ತೊಂದರೆಯೊಂದಿಗೆ ಸಂಬಂಧ ಹೊಂದಿರಬಹುದು.
Kannada
ಬೆನ್ನು ನೋವು
ಬೆನ್ನು ಮತ್ತು ಹೊಟ್ಟೆಯ ಪಕ್ಕದಲ್ಲಿ ನೋವು ಕೆಲವೊಮ್ಮೆ ಕಿಡ್ನಿಯ ತೊಂದರೆಯ ಲಕ್ಷಣವಾಗಿರಬಹುದು.
Kannada
ಗಮನಿಸಿ
ಮೇಲೆ ತಿಳಿಸಿದ ಲಕ್ಷಣಗಳು ಕಂಡುಬಂದಲ್ಲಿ ಸ್ವಯಂ ಚಿಕಿತ್ಸೆ ಮಾಡಿಕೊಳ್ಳದೆ ವೈದ್ಯರನ್ನು ಸಂಪರ್ಕಿಸಿ. ನಂತರ ಮಾತ್ರ ರೋಗವನ್ನು ದೃಢಪಡಿಸಿಕೊಳ್ಳಿ.