Kannada

ರಾತ್ರಿ ಪಪ್ಪಾಯಿ ತಿಂದ್ರೆ ಏನಾಗುತ್ತೆ ಗೊತ್ತಾ?

ಪಪ್ಪಾಯಿ ಹಣ್ಣು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಆದರೆ ರಾತ್ರಿ ವೇಳೆ ಇದನ್ನು ತಿನ್ನುವುದು ಸರಿನಾ, ತಪ್ಪಾ ಎಂಬ ಪ್ರಶ್ನೆ ಅನೇಕರನ್ನು ಕಾಡುತ್ತದೆ. ಈ ಬಗ್ಗೆ ತಜ್ಞರು ಏನು ಹೇಳುತ್ತಾರೆಂದು ತಿಳಿಯೋಣ.
Kannada

ಜೀರ್ಣಕ್ರಿಯೆಗೆ ಸಹಕಾರಿ

ಪಪ್ಪಾಯಿಯಲ್ಲಿ 'ಪಪೈನ್' ಎಂಬ ಎಂಜೈಮ್ ಇದೆ. ಇದು ನಾವು ತಿಂದ ಆಹಾರವನ್ನು ಚೆನ್ನಾಗಿ ಜೀರ್ಣ ಮಾಡಲು ಸಹಾಯ ಮಾಡುತ್ತದೆ. ಹಾಗಾಗಿ ರಾತ್ರಿ ತಿಂದರೆ ಜೀರ್ಣಕ್ರಿಯೆಗೆ ಒಳ್ಳೆಯದು.
Image credits: Getty
Kannada

ಫೈಬರ್ ಅಂಶ ಹೆಚ್ಚು

ಪಪ್ಪಾಯಿಯಲ್ಲಿ ಫೈಬರ್ ಅಂಶ ಯಥೇಚ್ಛವಾಗಿದೆ. ಇದು ಮಲಬದ್ಧತೆ ಸಮಸ್ಯೆಯನ್ನು ನಿವಾರಿಸಲು ಸಹಾಯ ಮಾಡುತ್ತದೆ. ರಾತ್ರಿ ತಿಂದರೆ ಬೆಳಿಗ್ಗೆ ಹೊಟ್ಟೆ ಹಗುರವಾಗಿರುತ್ತದೆ.
Image credits: Getty
Kannada

ಗ್ಯಾಸ್ ಸಮಸ್ಯೆ ಆಗಬಹುದು

ಆದರೆ, ಕೆಲವರಿಗೆ ರಾತ್ರಿ ಹೊತ್ತು ಪಪ್ಪಾಯಿ ತಿಂದರೆ ಗ್ಯಾಸ್ ಅಥವಾ ಹೊಟ್ಟೆ ಉಬ್ಬರದಂತಹ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ನಿಮ್ಮ ದೇಹಕ್ಕೆ ಆಗಿಬರದಿದ್ದರೆ ತಿನ್ನಬೇಡಿ.
Image credits: Getty
Kannada

ಕಡಿಮೆ ಕ್ಯಾಲೋರಿ

ಪಪ್ಪಾಯಿಯಲ್ಲಿ ಕ್ಯಾಲೋರಿ ತುಂಬಾ ಕಡಿಮೆ ಇರುತ್ತದೆ. ಹಾಗಾಗಿ ತೂಕ ಇಳಿಸಬೇಕು ಅಂದುಕೊಂಡವರಿಗೆ ರಾತ್ರಿ ವೇಳೆ ತಿನ್ನಲು ಇದು ಒಂದು ಉತ್ತಮ ಆಯ್ಕೆಯಾಗಿದೆ.
Image credits: Getty
Kannada

ಶುಗರ್ ಇದ್ದವರು ಗಮನಿಸಿ

ಪಪ್ಪಾಯಿಯಲ್ಲಿ ನೈಸರ್ಗಿಕ ಸಕ್ಕರೆ ಅಂಶ ಇರುತ್ತದೆ. ಹೀಗಾಗಿ, ಡಯಾಬಿಟಿಸ್ ಅಥವಾ ಮಧುಮೇಹ ಇರುವವರು ಇದನ್ನು ಮಿತವಾಗಿ ಸೇವಿಸುವುದು ಬಹಳ ಮುಖ್ಯ.
Image credits: Freepik

ನಿಮಗೆ ಯೌವ್ವನ, ಫಿಟ್ ಬಾಡಿ ಬೇಕಾ? ಅನಾನಸ್ ಹಣ್ಣನ್ನು ಈ ಸಮಯದಲ್ಲಿ ತಿನ್ನಿ!

ರೇಷ್ಮೆಯಂತಹ ನುಣುಪಾದ ಕೂದಲು ಬೇಕಾ? ತೆಂಗಿನ ಎಣ್ಣೆಯಲ್ಲ, ತೆಂಗಿನ ಹಾಲನ್ನು ಬಳಸಿ!

Coconut Water: ದಿನವೂ ಎಳನೀರು ಕುಡಿದರೆ ಸಿಗುವ 5 ಅದ್ಭುತ ಪ್ರಯೋಜನಗಳಿವು!

ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡಲು ಈ 7 ಆಹಾರಗಳನ್ನು ತಪ್ಪದೇ ಸೇವಿಸಿ!