ಕೂದಲಿನ ಆರೋಗ್ಯಕ್ಕಾಗಿ ಬಯೋಟಿನ್ ಭರಿತ ಆಹಾರಗಳನ್ನು ಸೇವಿಸಿ
ವಿಟಮಿನ್ ಬಿ 7 ಎಂದೂ ಕರೆಯಲ್ಪಡುವ ಬಯೋಟಿನ್ ನೀರಿನಲ್ಲಿ ಕರಗುವ ವಿಟಮಿನ್ ಆಗಿದೆ. ಇದು ಕೂದಲು, ಚರ್ಮ ಮತ್ತು ಉಗುರುಗಳ ಆರೋಗ್ಯಕ್ಕೆ ಸಹಾಯ ಮಾಡುತ್ತದೆ.
ಕೂದಲು ಉದುರುವಿಕೆಯನ್ನು ತಡೆಯಲು ಬಯೋಟಿನ್ ಪ್ರಮುಖ ಪೋಷಕಾಂಶವಾಗಿದೆ. ಬಯೋಟಿನ್ ಕೊರತೆಯು ಕೂದಲು ಉದುರುವಿಕೆಗೆ ಕಾರಣವಾಗಬಹುದು.
ಮೊಟ್ಟೆಯ ಹಳದಿ ಲೋಳೆ ಮತ್ತು ಬಿಳಿಭಾಗ ಎರಡರಲ್ಲೂ ಬಯೋಟಿನ್ ಇದೆ. ಆರೋಗ್ಯಕರ ಕೂದಲಿನ ಉತ್ಪಾದನೆಗೆ ಮೊಟ್ಟೆ ಸಹಾಯಕವಾಗಿದೆ.
ಬಯೋಟಿನ್ ಹೊಂದಿರುವ ಮತ್ತೊಂದು ಆಹಾರವೆಂದರೆ ಬೀಜಗಳು. ಬಾದಾಮಿ, ವಾಲ್ನಟ್, ಸೂರ್ಯಕಾಂತಿ ಬೀಜಗಳು ಮತ್ತು ಅಗಸೆ ಬೀಜಗಳಲ್ಲಿ ಬಯೋಟಿನ್ ಹೇರಳವಾಗಿದೆ.
ಗೆಣಸಿನಲ್ಲಿ ಬಯೋಟಿನ್ ಮಾತ್ರವಲ್ಲದೆ ಬೀಟಾ ಕ್ಯಾರೋಟಿನ್ ಕೂಡ ಇದೆ. ಇದನ್ನು ದೇಹವು ವಿಟಮಿನ್ ಎ ಆಗಿ ಪರಿವರ್ತಿಸುತ್ತದೆ.
ಬಯೋಟಿನ್, ಕಬ್ಬಿಣ, ಫೋಲೇಟ್, ವಿಟಮಿನ್ ಎ ಮತ್ತು ಸಿ ಸೇರಿದಂತೆ ಪೋಷಕಾಂಶಗಳ ಆಗರವಾಗಿದೆ ಪಾಲಕ್ ಸೊಪ್ಪು. ಇವೆಲ್ಲವೂ ಕೂದಲಿನ ಆರೋಗ್ಯಕ್ಕೆ ಸಹಾಯ ಮಾಡುತ್ತವೆ.
ಆವಕಾಡೊದಲ್ಲಿ ಬಯೋಟಿನ್, ಆರೋಗ್ಯಕರ ಕೊಬ್ಬುಗಳು, ವಿಟಮಿನ್ ಇ ಮತ್ತು ಸಿ ಇದ್ದು, ಇದು ಕೂದಲಿನ ಬೆಳವಣಿಗೆಗೆ ಸಹಾಯ ಮಾಡುತ್ತದೆ.
ಬೆಲ್ಲ-ಹುರಿಗಡಲೆ ಮುಂದೆ ಯಾವ ಸೂಪರ್ ಫುಡ್ ಇಲ್ಲ, ಈ ಕಾರಣಕ್ಕೆ ದಿನಾ ತಿನ್ನಬೇಕು!
ಮಕ್ಕಳ ಉತ್ತಮ ಸ್ಮರಣ ಶಕ್ತಿ & ಮೆದುಳಿನ ಆರೋಗ್ಯಕ್ಕೆ ಉತ್ತಮ ಆಹಾರಗಳು
ನುಗ್ಗೆಕಾಯಿಯಷ್ಟೇ ಅಲ್ಲ... ಸೊಪ್ಪಿನಲ್ಲಿಯೂ ಅಡಗಿದೆ ನಾನಾ ಚಮತ್ಕಾರ!
ಸಕ್ಕರೆಗಿಂತ ಬೆಲ್ಲ ಆರೋಗ್ಯಕರ ಆಯ್ಕೆನಾ? ಮಧುಮೇಹ ತಜ್ಞ ಬಿಚ್ಚಿಟ್ಟ ರಹಸ್ಯ