ತೂಕ ಇಳಿಸಲು ಏನು ಮಾಡಬೇಕು? ಎನ್ನುವುದು ಅನೇಕರ ಪ್ರಶ್ನೆ. ತೂಕ ಇಳಿಸಿಕೊಳ್ಳುವ ಪ್ರಯತ್ನದಲ್ಲಿ ಹಲವರು ತಪ್ಪು ಮಾಡುತ್ತಾರೆ. ಯಾವ ಆಹಾರ ಸೇವಿಸಬೇಕು ಯಾವ ಆಹಾರ ಕಡಿಮೆ ಮಾಡಬೇಕು ಎಂಬುದನ್ನು ನೋಡೋಣ.
Image credits: Getty
ಪಾಲಕ್ ಸೂಪ್
ನಾರಿನಂಶ ಹೆಚ್ಚಾಗಿರು, ಕ್ಯಾಲೋರಿಗಳು ಕಡಿಮೆ ಇರುವ ಪಾಲಕ್ ಸೂಪ್ ಕುಡಿದರೆ ತೂಕ ಇಳಿಸುವುದು ಸುಲಭ. ಮಧ್ಯಾಹ್ನ ಅನ್ನಕ್ಕೆ ಬದಲು ರಾಗಿ ಮುದ್ದೆ ತಿನ್ನಬಹುದು.
Image credits: Getty
ಕಾಲಿಫ್ಲವರ್ ರೈಸ್
ಕ್ಯಾಲೋರಿಗಳು, ಕಾರ್ಬೋಹೈಡ್ರೇಟ್‌ಗಳು ಕಡಿಮೆ ಇರುವ ಕಾಲಿಫ್ಲವರ್ ರೈಸ್ ತೂಕ ಇಳಿಸಿಕೊಳ್ಳಲು ಬಯಸುವವರು ಮಧ್ಯಾಹ್ನ ತಿನ್ನಬಹುದು.
Image credits: Getty
ಬ್ರೌನ್ ರೈಸ್
ನಾರಿನಂಶ ಹೆಚ್ಚಾಗಿರುವುದರಿಂದ ಬ್ರೌನ್ ರೈಸ್ ಹಸಿವನ್ನು ಕಡಿಮೆ ಮಾಡುತ್ತದೆ. ಇದರಿಂದ ತೂಕ ಇಳಿಸಿಕೊಳ್ಳಲು ಸಹಾಯವಾಗುತ್ತದೆ.
Image credits: Getty
ಬಾರ್ಲಿ
ಅಕ್ಕಿಗಿಂತ ಬಾರ್ಲಿಯಲ್ಲಿ ಪ್ರೋಟೀನ್, ನಾರಿನಂಶ ಹೆಚ್ಚು. ನಾರಿನಂಶ ಹೆಚ್ಚಾಗಿರುವುದರಿಂದ ಹಸಿವು ಬೇಗನೆ ಕಡಿಮೆಯಾಗುತ್ತದೆ.
Image credits: Getty
ಓಟ್ಸ್
ಒಂದು ಕಪ್ ಓಟ್ಸ್‌ನಲ್ಲಿ 7.5 ಗ್ರಾಂ ನಾರಿನಂಶ ಇರುತ್ತದೆ. ಜೀವಸತ್ವಗಳು, ಖನಿಜಗಳು, ಉತ್ಕರ್ಷಣ ನಿರೋಧಕಗಳ ಜೊತೆಗೆ ಪ್ರೋಟೀನ್ ಕೂಡ ಹೆಚ್ಚಾಗಿರುತ್ತದೆ.
Image credits: Getty
ಉಪ್ಮಾ
ನಾರಿನಂಶ ಹೆಚ್ಚಾಗಿ, ಕೊಬ್ಬು ಕಡಿಮೆ ಇರುವುದರಿಂದ ಉಪ್ಮಾ ತಿಂದರೂ ತೂಕ ಇಳಿಯುತ್ತದೆ.
Image credits: Getty
ನಟ್ಸ್
ನಾರಿನಂಶ ಹೆಚ್ಚಾಗಿರುವ ನಟ್ಸ್ ಬೇಗನೆ ಹೊಟ್ಟೆ ತುಂಬಿಸುತ್ತವೆ, ತೂಕ, ಹೊಟ್ಟೆ ಕರಗಿಸುತ್ತವೆ.
Image credits: Getty
ಗಮನಿಸಿ:
ಗಮನಿಸಿ: ಆರೋಗ್ಯ ತಜ್ಞರ ಅಥವಾ ಪೌಷ್ಟಿಕತಜ್ಞರ ಸಲಹೆ ಪಡೆದ ನಂತರವೇ ಆಹಾರದಲ್ಲಿ ಬದಲಾವಣೆಗಳನ್ನು ಮಾಡಿ.