ಕೂದಲು ಉದುರುವಿಕೆ ತಡೆದು, ದಟ್ಟವಾಗಿ ಬೆಳೆಯಲು ಅಗಸೆ ಬೀಜಗಳು (Flaxseeds) ಬೆಸ್ಟ್ ಮನೆಮದ್ದು. ಇದರ ಅದ್ಭುತ ರಿಸಲ್ಟ್ ಇಲ್ಲಿದೆ.
ಕೂದಲು ಬೆಳೆಯಲು ಅಗಸೆ ಬೀಜಗಳು ಬೆಸ್ಟ್ ಆಪ್ಷನ್. ಇದರಲ್ಲಿರುವ ಒಮೆಗಾ-3 ಫ್ಯಾಟಿ ಆಸಿಡ್ ಹಾಗೂ ಆ್ಯಂಟಿಆಕ್ಸಿಡೆಂಟ್‌ಗಳು ಕೂದಲನ್ನು ಬುಡದಿಂದಲೇ ಸ್ಟ್ರಾಂಗ್ ಮಾಡುತ್ತವೆ.
2 ಟೇಬಲ್ ಚಮಚ ಅಗಸೆ ಬೀಜಗಳನ್ನು 2 ಕಪ್ ನೀರಿನಲ್ಲಿ ಬೆರೆಸಿ. ಇದಕ್ಕೆ 2 ಟೇಬಲ್ ಚಮಚ ಕೊಬ್ಬರಿ ಎಣ್ಣೆ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ.
ಈ ಮಾಸ್ಕ್ ಅನ್ನು ಕೂದಲಿಗೆ ಹಚ್ಚಿ 2 ಗಂಟೆಗಳ ಕಾಲ ಬಿಡಿ. ನಂತರ ಮೈಲ್ಡ್ ಶಾಂಪೂವಿನಿಂದ ತಲೆಸ್ನಾನ ಮಾಡಿ. ಇದರಿಂದ ಕೂದಲು ಮೃದುವಾಗಿ ಹೊಳೆಯುತ್ತದೆ.
ಒಂದು ಪಾತ್ರೆಯಲ್ಲಿ 2 ಕಪ್ ನೀರು ಹಾಕಿ ಕುದಿಸಿ. ನೀರು ಕುದಿಯುವಾಗ ಅದಕ್ಕೆ ಅಗಸೆ ಬೀಜಗಳನ್ನು ಹಾಕಿ. 10 ರಿಂದ 15 ನಿಮಿಷಗಳ ಕಾಲ ಹಾಗೆಯೇ ಕುದಿಯಲು ಬಿಡಿ.
ಕುದಿಯುವಾಗ ಮಧ್ಯಮಧ್ಯದಲ್ಲಿ ಸೌಟ್‌ನಿಂದ ತಿರುಗಿಸುತ್ತಿರಿ. ಈ ಮಿಶ್ರಣವು ಜೆಲ್‌ನಂತೆ ದಪ್ಪಗಾದ ಮೇಲೆ ಗ್ಯಾಸ್ ಆಫ್ ಮಾಡಿ.
ಬೀಜಗಳಿಂದ ಜೆಲ್ ಅನ್ನು ಬೇರ್ಪಡಿಸಿ. ಒಂದು ಸ್ಟ್ರೈನರ್ ಅಥವಾ ಕಾಟನ್ ಬಟ್ಟೆ ಬಳಸಿ ಜೆಲ್ ಅನ್ನು ಮತ್ತೊಂದು ಪಾತ್ರೆಗೆ ಸೋಸಿಕೊಂಡು ತಣ್ಣಗಾಗಲು ಬಿಡಿ.
ತಣ್ಣಗಾದ ಜೆಲ್‌ಗೆ ಅಲೋವೆರಾ, ವಿಟಮಿನ್ ಇ ಕ್ಯಾಪ್ಸುಲ್ ಮತ್ತು ಬಾದಾಮಿ ಎಣ್ಣೆ ಸೇರಿಸಿ ಮಿಕ್ಸ್ ಮಾಡಿ. ಇದನ್ನು ತಲೆಗೆ ಹಚ್ಚಿದರೆ ಕೆಲವೇ ದಿನಗಳಲ್ಲಿ ಬೆಸ್ಟ್ ರಿಸಲ್ಟ್ ಸಿಗುತ್ತದೆ.
Fennel Seeds: ಊಟದ ಬಳಿಕ ಸ್ವಲ್ಪ ಸೋಂಪು ಕಾಳು ತಿಂದ್ರೆ ಬೆಟರ್ ಅನ್ಸುತ್ತೆ!
Kids Brain Food: ಮಕ್ಕಳ ಬುದ್ಧಿಶಕ್ತಿ ಹೆಚ್ಚಿಸಲು ಈ 7 ಆಹಾರಗಳನ್ನು ತಪ್ಪದೇ ಕೊಡಿ
ಕಣ್ಣಿನ ಆರೋಗ್ಯ ಕಾಪಾಡಲು ಈ 6 ಆಹಾರಗಳನ್ನು ತಿನ್ನಿ!
ಮಾನಸಿಕ ಆರೋಗ್ಯ ಸುಧಾರಿಸಲು ಈ ಆಹಾರಗಳನ್ನು ಸೇವಿಸಿ