Health
ಕರುಳಿನ ಆರೋಗ್ಯಕ್ಕೆ ಸಹಾಯಕವಾದ ಪಾನೀಯಗಳು
ಕರುಳಿನ ಆರೋಗ್ಯ ಹದಗೆಡುವುದು ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ ದೇಹದ ಮೇಲಷ್ಟೇ ಗಮನಹರಿಸಿದರೆ ಸಾಲದು ಶರೀರದೊಳಗೆ ಅಂಗಗಳ ಆರೋಗ್ಯದ ಬಗ್ಗೆ ಎಚ್ಚರವಹಿಸಬೇಕು.
ಆರೋಗ್ಯಕರ ಕರುಳಿಗೆ. ನಾರಿನಂಶವಿರುವ ಸಮತೋಲಿತ ಆಹಾರ ಸೇವಿಸಬೇಕು, ಜಂಕ್ ಫುಡ್, ಆಲ್ಕೋಹಾಲ್ ಇನ್ನಿತರ ಹಾನಿ ಮಾಡಬಲ್ಲ ಆಹಾರಗಳಿಂದ ದೂರವಿರಬೇಕು
ಕರುಳಿನ ಆರೋಗ್ಯಕ್ಕಾಗಿ ಕುಡಿಯಬೇಕಾದ ಕೆಲವು ಪಾನೀಯಗಳು ಇಲ್ಲಿವೆ. ಇವು ಕುಡಿಯುವುದರಿಂದ ಕರುಳಿನ ಆರೋಗ್ಯಕ್ಕೂ ಚಯಪಚಯ ಕ್ರಿಯೆಗೆ ತುಂಬಾ ಸಹಾಯಕಾರಿಯಾಗಿವೆ ಈ ಪಾನಿಯಗಳು.
ಪ್ರತಿದಿನ ಉಪ್ಪು ಸೇರಿಸಿದ ಬಿಸಿ ನಿಂಬೆ ಪಾನಕ ಕುಡಿಯುವುದು ಕರುಳಿನ ಆರೋಗ್ಯಕ್ಕೆ ತುಂಬಾ ಒಳ್ಳೆಯದು, ನಿಂಬೆ ರಸದಲ್ಲಿ ಸಕ್ಕರೆ ಬದಲು ಉಪ್ಪು ಸೇರಿಸುವುದು ಉತ್ತಮ..
ಕತ್ತಾಳೆ ಜ್ಯೂಸ್ ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ. ಒಂದು ಲೋಟ ನೀರಿನಲ್ಲಿ 2 ಚಮಚ ಕತ್ತಾಳೆ ರಸ, 1/2 ಟೀ ಚಮಚ ನಿಂಬೆ ರಸವನ್ನು ಸೇರಿಸಿ ಕುಡಿಯಿರಿ.
ಶುಂಠಿ ಸೇವನೆಯಿಂದ ದೇಹಕ್ಕೆ ಏನೆಲ್ಲ ಆರೋಗ್ಯಕರ ಪ್ರಯೋಜನಗಳಿವೆ ಎಂಬುದನ್ನ ಪ್ರತ್ಯೇಕವಾಗಿ ಹೇಳಬೇಕಿಲ್ಲ. ಶುಂಠಿ ಚಹಾ, ಶುಂಠಿ ನೀರು ಕುಡಿಯುವುದು ಕರುಳಿನ ಆರೋಗ್ಯಕ್ಕೆ ತುಂಬಾ ಒಳ್ಳೆಯದು.
ಚಿಯಾ ಬೀಜಗಳಲ್ಲಿ ನಾರಿನಂಶವಿದೆ. ಚಿಯಾ ಬೀಜಗಳು ಆರೋಗ್ಯಕರ ಜೀರ್ಣಕ್ರಿಯೆ ಮತ್ತು ಕರುಳಿನ ಆರೋಗ್ಯಕ್ಕೆ ಸಹಾಯ ಮಾಡುತ್ತವೆ.
ನೆನೆಸಿದ ಅಗಸೆ ಬೀಜಗಳ ನೀರು ಕುಡಿಯುವುದು ಕರುಳಿನ ಕಾರ್ಯಕ್ಕೆ ಒಳ್ಳೆಯದು.