ಸ್ತನ ಕ್ಯಾನ್ಸರ್ ಅಂದ್ರೆ ಗಡ್ಡೆ ಮಾತ್ರವಲ್ಲ, ಇತರ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.
ಮಹಿಳೆಯರಲ್ಲಿ ಸಾಮಾನ್ಯವಾಗಿ ಕಂಡುಬರುವ ಕ್ಯಾನ್ಸರ್‌ಗಳಲ್ಲಿ ಸ್ತನ ಕ್ಯಾನ್ಸರ್ ಒಂದು. ಹಲವು ಕಾರಣಗಳು ಸ್ತನ ಕ್ಯಾನ್ಸರ್‌ಗೆ ಕಾರಣವಾಗಬಹುದು.
ಸ್ತನ ಕ್ಯಾನ್ಸರ್‌ನ ಪ್ರಮುಖ ಲಕ್ಷಣಗಳ ಬಗ್ಗೆ ಇಲ್ಲಿ ತಿಳಿಸಲಾಗಿದೆ.
ಸ್ತನಗಳು ಗಟ್ಟಿಯಾಗುವುದು, ಕೆಂಪು ಬಣ್ಣಕ್ಕೆ ತಿರುಗುವುದು ಅಥವಾ ಅಸಾಮಾನ್ಯ ಶಾಖ ಇವು ಸ್ತನ ಕ್ಯಾನ್ಸರ್‌ನ ಲಕ್ಷಣಗಳಾಗಿವೆ.
ಮೊಲೆತೊಟ್ಟುಗಳಲ್ಲಿನ ಬದಲಾವಣೆಗಳನ್ನು ಗಮನಿಸಬೇಕು. ಮೊಲೆತೊಟ್ಟುಗಳು ಒಳಮುಖವಾಗುವುದು, ಚಪ್ಪಟೆಯಾಗುವುದು, ಸ್ರಾವ ಬರುವುದು ಇವು ಇತರ ಲಕ್ಷಣಗಳಾಗಿವೆ.
ಸ್ತನಗಳಲ್ಲಿ ನಿರಂತರ ತುರಿಕೆ ಅಥವಾ ಗಾಯ ಕಾಣಿಸಿಕೊಳ್ಳುವುದು ಮತ್ತೊಂದು ಲಕ್ಷಣ.
ಸ್ತನ ಗಾತ್ರದಲ್ಲಿನ ಬದಲಾವಣೆಗಳು ಸ್ತನ ಕ್ಯಾನ್ಸರ್‌ನ ಲಕ್ಷಣವಾಗಿರಬಹುದು. ಯಾವುದೇ ಸ್ಪಷ್ಟ ಕಾರಣವಿಲ್ಲದೆ ಒಂದು ಸ್ತನದ ಗಾತ್ರ ಹೆಚ್ಚಾಗುವುದು ಅಥವಾ ವಿಚಿತ್ರ ಆಕಾರ ಪಡೆಯುವುದು.
ಸ್ತನ ಅಥವಾ ಕಂಕುಳಿನಲ್ಲಿ ನೋವು ಮತ್ತೊಂದು ಲಕ್ಷಣ ಎಂದು ಹೇಳಲಾಗುತ್ತದೆ.
ವರ್ಕ್ ಫ್ರಂ ಹೋಂನಿಂದ ಆಗುವ ಆರೋಗ್ಯ ಸಮಸ್ಯೆಗಳು ಒಂದೆರಡಲ್ಲ!
ಮಳೆಗಾಲದಲ್ಲಿ ಮಕ್ಕಳ ಆರೈಕೆಗೆ ಸಲಹೆಗಳು
ಪ್ರತಿದಿನ ಮೊಟ್ಟೆ ತಿನ್ನುವುದು ಒಳ್ಳೆಯದೇ?
ಅತೀಯಾಗಿ ಕೋಲ್ಡ್ ಡ್ರಿಂಕ್ಸ್ ಕುಡಿತೀರಾ? ಅಪಾಯ ಗ್ಯಾರಂಟಿ