ಕೆಲವರಿಗೆ ಊಟವಾದ ಕೂಡಲೇ ಹಸಿವಾಗುತ್ತೆ ಎಷ್ಟು ತಿಂದರೂ ಹಸಿವು ಮಾತ್ರ ಕಡಿಮೆಯಾಗುವುದಿಲ್ಲ,ಹಾಗಿದ್ದಲ್ಲಿ, ಇದಕ್ಕೆ ಕೆಲವು ಕಾರಣಗಳಿರಬಹುದು
ಎಷ್ಟು ತಿಂದರೂ ಹಸಿವು ಮಾಯವಾಗದ ಕೆಲವರು ಇದ್ದಾರೆ. ಅಗತ್ಯಕ್ಕಿಂತ ಹೆಚ್ಚು ಆಹಾರ ಸೇವಿಸಿದರೂ ಕೆಲವೇ ನಿಮಿಷಗಳಲ್ಲಿ ಮತ್ತೆ ಅವರಿಗೆ ಹಸಿವಾಗುತ್ತದೆ.
ಯಾವಾಗಲೂ ಹಸಿವಾಗಲು ಕೆಲವು ಕಾರಣಗಳಿವೆ. ಅದಕ್ಕೆ ಕಾರಣಗಳೇನು ಅಂತ ತಿಳಿಯೋಣ.
ಪ್ರೋಟೀನ್, ನಾರು ಅಥವಾ ಆರೋಗ್ಯಕರ ಕೊಬ್ಬು ಕಡಿಮೆ ಇರುವ ಆಹಾರ ಸೇವಿಸುವುದರಿಂದ ಹಸಿವು ಹೆಚ್ಚಾಗುತ್ತದೆ.
ಮತ್ತೆ ಮತ್ತೆ ಹಸಿವಾಗುವುದು ನಿರ್ಜಲೀಕರಣದ ಲಕ್ಷಣವೂ ಆಗಿರಬಹುದು. ಹೀಗಾಗಿ ದೇಹಕ್ಕೆ ಅಗತ್ಯವಿರುವಷ್ಟು ನೀರು ಕುಡಿಯುವುದು ಮುಖ್ಯ.
ರಾತ್ರಿ ನಿದ್ದೆ ಕಡಿಮೆಯಾದಾಗ ಹಸಿವು ಹೆಚ್ಚಿಸುವ ಗ್ರೆಲಿನ್, ಲೆಪ್ಟಿನ್ ಹಾರ್ಮೋನುಗಳು ದೇಹದಲ್ಲಿ ಹೆಚ್ಚಾಗುತ್ತವೆ. ಇದು ಅತಿಯಾದ ಹಸಿವಿಗೆ ಕಾರಣವಾಗುತ್ತದೆ.
ಒತ್ತಡದಲ್ಲಿದ್ದಾಗ ಒತ್ತಡದ ಹಾರ್ಮೋನುಗಳಾದ ಕಾರ್ಟಿಸೋಲ್ ಮತ್ತು ಅಲ್ಡ್ರಿನಾಲಿನ್ ಉತ್ಪತ್ತಿ ಹೆಚ್ಚಾಗುತ್ತದೆ. ಇದು ಅತಿಯಾದ ಹಸಿವಿಗೆ ಕಾರಣವಾಗುತ್ತದೆ.
ತೂಕ ಇಳಿಸಲು ವ್ಯಾಯಾಮ ಮಾಡುವಾಗ ದೇಹದಿಂದ ಹೆಚ್ಚಿನ ಕ್ಯಾಲೊರಿಗಳು ಕಡಿಮೆಯಾಗುತ್ತವೆ. ಇದು ಕೂಡ ಅತಿಯಾದ ಹಸಿವಿಗೆ ಕಾರಣವಾಗುತ್ತದೆ.
ಕುಕೀಸ್, ಚಾಕೊಲೇಟ್, ಬಿಳಿ ಬ್ರೆಡ್ ನಂತಹ ಕಾರ್ಬೋಹೈಡ್ರೇಟ್ ಹೆಚ್ಚಿರುವ ಆಹಾರ ಸೇವಿಸುವುದರಿಂದಲೂ ಹಸಿವು ಹೆಚ್ಚಾಗುತ್ತದೆ.
ನಿಮ್ಮ ಪಾದಗಳೇ ಹೇಳುತ್ತವೆ ನಿಮ್ಮ ಆರೋಗ್ಯದ ಗುಟ್ಟು!
ದೇಹದಲ್ಲಿ ಕಾಣುವ ಈ ಲಕ್ಷಣಗಳು ಮಧುಮೇಹದ್ದಾಗಿರಬಹುದು ಎಚ್ಚರ
ಅರಿಶಿನ, ಕರಿಮೆಣಸು, ಜೇನುತುಪ್ಪ ಒಟ್ಟಿಗೆ ಸೇವಿಸಿದರೆ ಪ್ರಯೋಜನ ಒಂದೆರಡಲ್ಲ!
ದಟ್ಟವಾದ ಕೂದಲು ಪಡೆಯಲು ಇಲ್ಲಿದೆ ನೈಸರ್ಗಿಕ ವಿಧಾನಗಳು!