Health
ಅನುಷ್ಕಾ ಶರ್ಮಾ ಫಿಟ್ನೆಸ್ ಮತ್ತು ಆರೋಗ್ಯಕರ ಜೀವನಶೈಲಿಯನ್ನು ಕಾಪಾಡಿಕೊಳ್ಳಲು ಹೆಸರುವಾಸಿಯಾಗಿದ್ದಾರೆ. ಆಕೆಯ ಫಿಟ್‌ನೆಸ್ ರಹಸ್ಯಗಳು ಮತ್ತು ದೈನಂದಿನ ದಿನಚರಿಯ ಕೆಲವು ಒಳನೋಟಗಳು ಇಲ್ಲಿ ತಿಳಿದುಕೊಳ್ಳೋಣ.
2017 ರಲ್ಲಿ ವಿರಾಟ್ ಕೊಹ್ಲಿ ಜೊತೆ ಮದುವೆಯ ನಂತರ ಸಿನಿಮಾಗಳಿಗೆ ಸಂಪೂರ್ಣವಾಗಿ ಬ್ರೇಕ್ ನೀಡಿದ ನಟಿ ಅನುಷ್ಕಾ ಶರ್ಮ. ಆದರೆ ಇನ್ನೂ ಜಾಹೀರಾತುಗಳಲ್ಲಿ ನಟಿಸುತ್ತಿದ್ದಾರೆ.
ಪ್ರಸ್ತುತ ಇಬ್ಬರು ಮಕ್ಕಳ ತಾಯಿ ಅನುಷ್ಕಾ. ಇಂದಿಗೂ ಅವರ ಫಿಟ್ನೆಸ್ ಎಲ್ಲರನ್ನೂ ಆಕರ್ಷಿಸುತ್ತದೆ. ಅನುಷ್ಕಾ ಸೌಂದರ್ಯ ಮತ್ತು ಫಿಟ್ನೆಸ್ ರಹಸ್ಯವೇನು?
ಅನುಷ್ಕಾ ಶರ್ಮ ತಮ್ಮ ದಿನವನ್ನು ಹಣ್ಣಿನ ಜ್ಯೂಸ್‌ನೊಂದಿಗೆ ಪ್ರಾರಂಭಿಸುತ್ತಾರೆ. ಉಪಾಹಾರದಲ್ಲಿ ಚಿಯಾ ಸೀಡ್ ಪುಡ್ಡಿಂಗ್ ಮತ್ತು ತಾಜಾ ಹಣ್ಣುಗಳನ್ನು ಸೇರಿಸಿಕೊಳ್ಳುತ್ತಾರೆ.
ಅನುಷ್ಕಾ ಶರ್ಮ ಊಟದಲ್ಲಿ ಅನ್ನ ಸಾರು ಇರುವಂತೆ ನೋಡಿಕೊಳ್ಳುತ್ತಾರೆ. ರೊಟ್ಟಿ ಮತ್ತು ತರಕಾರಿಗಳನ್ನು ಸಹ ಸೇವಿಸುತ್ತಾರೆ ಎಂದು ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ.
ಅನುಷ್ಕಾ ಶರ್ಮ ಸಂಜೆ 6.30 ಗಂಟೆಗೆ ಭೋಜನ ಮುಗಿಸುತ್ತಾರೆ. ರಾತ್ರಿ ಮಲಗುವ ಮುನ್ನ ಒಂದು ಲೋಟ ಹಾಲು ಕುಡಿಯುತ್ತಾರೆ.
ಅನುಷ್ಕಾ ಶರ್ಮ ತಮ್ಮ ದಿನಚರಿಯಲ್ಲಿ ವ್ಯಾಯಾಮಕ್ಕೆ ಖಂಡಿತವಾಗಿಯೂ ಸಮಯ ಮೀಸಲಿಡುತ್ತಾರೆ. ಪ್ರತಿದಿನ ಯೋಗ ಮಾಡುತ್ತಾರೆ ಎಂದು ಹಲವು ಸಂದರ್ಶನಗಳಲ್ಲಿ ತಿಳಿಸಿದ್ದಾರೆ.
ಅನುಷ್ಕಾ ತಮ್ಮ ನಿಯಮಿತ ವರ್ಕೌಟ್‌ಗಳಲ್ಲಿ ಯೋಗ, ಕಾರ್ಡಿಯೋ, ವೇಯ್ಟ್ ಟ್ರೈನಿಂಗ್, ಧ್ಯಾನ ಮತ್ತು ಹೊರಾಂಗಣ ಚಟುವಟಿಕೆಗಳನ್ನು ಖಂಡಿತವಾಗಿಯೂ ಸೇರಿಸಿಕೊಳ್ಳುತ್ತಾರೆ.
ಅನುಷ್ಕಾ ಶರ್ಮ ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ಆರೋಗ್ಯಕ್ಕೂ ಪ್ರಾಮುಖ್ಯತೆ ನೀಡುತ್ತಾರೆ. ಮಲಗುವ ಮುನ್ನ ಧ್ಯಾನ ಮಾಡುತ್ತಾರೆ.