ಕೆಲವು ಆಹಾರ ಪದಾರ್ಥಗಳನ್ನು ನೀರಿನಲ್ಲಿ ನೆನೆಸಿಟ್ಟು ತಿನ್ನಬೇಕು. ಅವು ಯಾವುವು ಎಂದು ತಿಳಿಯೋಣ.
ತಿನ್ನುವ ಮೊದಲು ಮಾವನ್ನು ನೀರಿನಲ್ಲಿ ನೆನೆಸಿಡುವುದು ಒಳ್ಳೆಯದು. ಇದು ಮಾವಿನಲ್ಲಿರುವ ಉಷ್ಣವನ್ನು ಕಡಿಮೆ ಮಾಡುತ್ತದೆ.
ಓಟ್ಸ್ ಅನ್ನು ನೀರಿನಲ್ಲಿ ನೆನೆಸಿದರೆ ಅದರಲ್ಲಿರುವ ಪಿಷ್ಟಗಳು ಕಡಿಮೆಯಾಗುತ್ತವೆ. ಜೊತೆಗೆ ಇದು ಸಕ್ಕರೆಯ ಪ್ರಮಾಣವನ್ನು ಕಡಿಮೆ ಮಾಡಿ ಸುಲಭವಾಗಿ ಜೀರ್ಣವಾಗುವಂತೆ ಮಾಡುತ್ತದೆ.
ಅಕ್ಕಿಯನ್ನು ಸ್ವಲ್ಪ ಹೊತ್ತು ನೀರಿನಲ್ಲಿ ನೆನೆಸಿಡುವುದರಿಂದ ಅಡುಗೆ ಸುಲಭವಾಗುತ್ತದೆ. ಅಲ್ಲದೆ, ಅನಗತ್ಯ ಪಿಷ್ಟಗಳನ್ನು ತೆಗೆದುಹಾಕುತ್ತದೆ.
ರಾತ್ರಿಯಿಡೀ ಸೋಯಾಬೀನ್ ಅನ್ನು ನೀರಿನಲ್ಲಿ ನೆನೆಸಿಟ್ಟರೆ ಫೈಟಿಕ್ ಆಮ್ಲ ಕಡಿಮೆಯಾಗಿ ಸುಲಭವಾಗಿ ಜೀರ್ಣವಾಗುತ್ತದೆ.
ಬಾದಾಮಿಯನ್ನು ನೀರಿನಲ್ಲಿ ನೆನೆಸಿಟ್ಟು ತಿನ್ನುವುದರಿಂದ ಸುಲಭವಾಗಿ ಜೀರ್ಣವಾಗುತ್ತದೆ. ಜೊತೆಗೆ ಪೋಷಕಾಂಶಗಳು ಚೆನ್ನಾಗಿ ದೊರೆಯುತ್ತವೆ.
ಪೋಷಕಾಂಶಗಳು ಚೆನ್ನಾಗಿ ದೊರೆಯಲು ಒಣದ್ರಾಕ್ಷಿಯನ್ನು ತಿನ್ನುವ ಮೊದಲು ನೆನೆಸಿಡುವುದು ಒಳ್ಳೆಯದು. ಇದು ತೂಕ ಇಳಿಸಲು ಸಹಾಯ ಮಾಡುತ್ತದೆ.
ಚಿಯಾ ಬೀಜಗಳನ್ನು ನೀರಿನಲ್ಲಿ ನೆನೆಸಿಟ್ಟರೆ ಹೆಚ್ಚು ನೀರನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ.
ಬಳಸಿದ ಹಳೆ ಎಣ್ಣೆಯಿಂದ ಅಡುಗೆ ಮಾಡ್ತಿರಾ: ಈ 7 ವಿಚಾರಗಳು ಗಮನದಲ್ಲಿರಲಿ
ಲಿವರ್ ಆರೋಗ್ಯಕ್ಕೆ ವರದಾನವಾದ 7 ಆಹಾರ
ಸ್ತನ ಕ್ಯಾನ್ಸರ್ : ಗಡ್ಡೆ ಮಾತ್ರವಲ್ಲ, ಇತರೆ ಲಕ್ಷಣಗಳೂ ಇವೆ
ವರ್ಕ್ ಫ್ರಂ ಹೋಂನಿಂದ ಆಗುವ ಆರೋಗ್ಯ ಸಮಸ್ಯೆಗಳು ಒಂದೆರಡಲ್ಲ!