Kannada

ಮಂಗಳೂರಿಗೆ ಹೋದ್ರೆ ಈ 10 ಸ್ನ್ಯಾಕ್ಸ್ ಮಿಸ್ ಮಾಡ್ಬೇಡಿ!

Kannada

ಗೋಳಿ ಬಜೆ

ಅಕ್ಕಿ ಹಿಟ್ಟು, ಮೊಸರು ಮತ್ತು ಮಸಾಲೆಗಳಿಂದ ಮಾಡುವ ಗೋಳಿ ಬಜೆ, ಮಂಗಳೂರಿನ ಫೇಮಸ್ ಸ್ನ್ಯಾಕ್. ಹೊರಗಡೆ ಗರಿಗರಿ, ಒಳಗಡೆ ಮೃದುವಾಗಿರುವ ಇದು ಕಾಯಿ ಚಟ್ನಿ ಜೊತೆ ಸಖತ್ ಟೇಸ್ಟಿ.

Image credits: Wikipedia
Kannada

ಮಂಗಳೂರು ಬನ್ಸ್

ಮಾಗಿದ ಬಾಳೆಹಣ್ಣು ಮತ್ತು ಮೈದಾ ಹಿಟ್ಟಿನಿಂದ ಮಾಡುವ ಮಂಗಳೂರು ಬನ್ಸ್ ಸಿಹಿಯಾಗಿ, ಮೃದುವಾಗಿರುತ್ತದೆ. ಖಾರ ಚಟ್ನಿ ಜೊತೆ ಇದು ಬೆಸ್ಟ್ ಟೀ-ಟೈಮ್ ಸ್ನ್ಯಾಕ್.

Image credits: Pixabay
Kannada

ಬೇಯಿಸಿದ ಕಡುಬು

ಹಲಸಿನ ಎಲೆಯಲ್ಲಿ ಬೇಯಿಸಿದ ಕಡುಬು ಈ ಕೊಟ್ಟಿಗೆ. ಇದು ಮಂಗಳೂರಿನ ಸಾಂಪ್ರದಾಯಿಕ ಹಾಗೂ ಆರೋಗ್ಯಕರ ತಿಂಡಿ. ಕಾಯಿ ಚಟ್ನಿ ಜೊತೆ ತಿಂದರೆ ಮಸ್ತ್ ಇರುತ್ತೆ.

Image credits: Wikipedia
Kannada

ಪತ್ರೊಡೆ

ಕೇಸುವಿನ ಎಲೆ, ಅಕ್ಕಿ ಹಿಟ್ಟು ಮತ್ತು ಕಾಯಿತುರಿಯಿಂದ ಮಾಡುವ ಪತ್ರೊಡೆ ಖಾರ ಮತ್ತು ರುಚಿಯಾಗಿರುತ್ತದೆ. ಇದು ಮಂಗಳೂರಿನ ಫೇಮಸ್ ಡಿಶ್.

Image credits: Wikipedia
Kannada

ಚುರುಮುರಿ

ಮಂಡಕ್ಕಿ, ತರಕಾರಿ ಮತ್ತು ಮಸಾಲೆಗಳಿಂದ ಮಾಡುವ ಚುರುಮುರಿ, ಮಂಗಳೂರಿನ ಸ್ಟ್ರೀಟ್ ಫುಡ್‌ಗಳಲ್ಲಿ ಫೇಮಸ್. ಸಂಜೆ ಟೈಮ್‌ಗೆ ಹೇಳಿ ಮಾಡಿಸಿದ ಸ್ನ್ಯಾಕ್.

Image credits: Wikipedia
Kannada

ಗುಜ್ಜೆ ಪೋಡಿ

ದೀವಿ ಹಲಸಿನ (ಬ್ರೆಡ್ ಫ್ರೂಟ್) ಸ್ಲೈಸ್‌ಗಳಿಗೆ ಮಸಾಲೆ ಸವರಿ, ಎಣ್ಣೆಯಲ್ಲಿ ಕರಿಯುವ ಈ ಗುಜ್ಜೆ ಪೋಡಿ ಗರಿಗರಿಯಾಗಿ, ರುಚಿಯಾಗಿರುತ್ತದೆ.

Image credits: Social Media
Kannada

ಬಿಸ್ಕತ್ ರೊಟ್ಟಿ

ಮೈದಾ ಹಿಟ್ಟಿನ ಪೂರಿ ಒಳಗೆ ಮಸಾಲೆಯುಕ್ತ ರವೆ ತುಂಬಿ ಮಾಡುವ ಬಿಸ್ಕತ್ ರೊಟ್ಟಿ, ಹೊರಗಡೆ ಗರಿಗರಿ ಮತ್ತು ಒಳಗಡೆ ಮೃದುವಾಗಿರುತ್ತದೆ. ಚಟ್ನಿ ಜೊತೆ ಮಸ್ತ್ ಟೇಸ್ಟ್.

Image credits: Wikipedia
Kannada

ಸಂಜೀರ

ಬಿಸ್ಕತ್ ರೊಟ್ಟಿ ತರಾನೇ ಇರುವ ಸಂಜೀರ ಒಂದು ಸಿಹಿ ಪೂರಿ. ಮೈದಾ ಹಿಟ್ಟಿನಿಂದ ಮಾಡಿ, ಒಳಗೆ ಸಿಹಿ ಹೂರಣ ತುಂಬಿ ಎಣ್ಣೆಯಲ್ಲಿ ಕರಿಯುತ್ತಾರೆ.

Image credits: Wikipedia
Kannada

ಚಟ್ಟಂಬಡೆ

ಮಂಗಳೂರು ವಡೆ ಎಂದೇ ಕರೆಯುವ ಚಟ್ಟಂಬಡೆ ಕಡ್ಲೆಬೇಳೆ ಮತ್ತು ಮಸಾಲೆಗಳಿಂದ ಮಾಡುತ್ತಾರೆ. ಸಂಜೆ ಟೀ ಜೊತೆ ತಿನ್ನಲು ಇದು ಬೆಸ್ಟ್ ಆಪ್ಷನ್.

Image credits: Wikipedia
Kannada

ನೀರುಳ್ಳಿ ಬಜೆ

ಈರುಳ್ಳಿಯನ್ನು ಕಡಲೆ ಹಿಟ್ಟಿನ ಬ್ಯಾಟರ್‌ನಲ್ಲಿ ಅದ್ದಿ ಕರಿಯುವ ನೀರುಳ್ಳಿ ಬಜೆ ಮಳೆಗಾಲದಲ್ಲಿ ಟೀ ಜೊತೆ ತಿನ್ನಲು ಸೂಪರ್.

Image credits: Freepik

Coconut water: ಪ್ರತಿದಿನ ಎಳನೀರು ಕುಡಿಯಿರಿ, ಹದಿನೈದು ಬಳಿಕ ಮ್ಯಾಜಿಕ್ ನೋಡಿ!

ಮುಖದ ಸುಕ್ಕು ನಿವಾರಿಸಿ, ತ್ವಚೆಯ ಅಂದ ಹೆಚ್ಚಿಸಿ 'ದಂತದ ಬೊಂಬೆ'ಯಂತೆ ಕಾಣಲು ದಿನಾಲೂ ಈ ಹಣ್ಣುಗಳನ್ನು ಸೇವಿಸಿ!

Cumin Tea Benefits: ಪ್ರತಿದಿನ ಜೀರಿಗೆ ಟೀ ಕುಡಿದರೆ ಏನಾಗುತ್ತೆ ಗೊತ್ತಾ? ಹಲವರಿಗೆ ಇದರ ಪ್ರಯೋಜನದ ಅರಿವಿಲ್ಲ!

ರಾತ್ರಿ ಮಲಗುವ ಮುನ್ನ ಒಂದು ಲೋಟ ಅರಿಶಿನ ಹಾಲು ಕುಡಿದರೆ ಏನಾಗುತ್ತೆ ಗೊತ್ತಾ? ಇಲ್ಲಿದೆ ನೋಡಿ ಸೀಕ್ರೆಟ್ !