Kannada

ಕೇವಲ 5 ನಿಮಿಷದಲ್ಲಿ ರೆಡಿಯಾಗುವ ನ್ಯೂಜೆನ್ ಬ್ರೇಕ್‌ಫಾಸ್ಟ್; ವೈರಲ್ ರೆಸಿಪಿಗಳಿವು

ಹೆಚ್ಚು ಸಮಯ ವ್ಯರ್ಥ ಮಾಡದೆ ಕೇವಲ 5 ನಿಮಿಷಗಳಲ್ಲಿ ತಯಾರಿಸಬಹುದಾದ ಈ ಬ್ರೇಕ್‌ಫಾಸ್ಟ್ ರೆಸಿಪಿಗಳನ್ನು ಇಂದಿನ ಯುವಜನತೆ ಹೆಚ್ಚು ಇಷ್ಟಪಡುತ್ತಾರೆ. ಇವೀಗ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಟ್ರೆಂಡ್ ಆಗಿವೆ.

Kannada

ಅವಕಾಡೊ ಟೋಸ್ಟ್

ಟೋಸ್ಟ್ ಮಾಡಿದ ಬ್ರೆಡ್ ಮೇಲೆ ಮ್ಯಾಶ್ ಮಾಡಿದ ಅವಕಾಡೊ ಹಚ್ಚಿ, ಸ್ವಲ್ಪ ಚಿಲ್ಲಿ ಫ್ಲೇಕ್ಸ್ ಮತ್ತು ನಿಂಬೆ ರಸ ಸೇರಿಸಿದರೆ ರುಚಿಯಾದ ಬ್ರೇಕ್‌ಫಾಸ್ಟ್ ರೆಡಿ. ಇದು ಜೆನ್-ಜಿ (Gen Z) ಯುವಜನತೆಯ ಫೇವರಿಟ್.

Image credits: Getty
Kannada

ಓವರ್‌ನೈಟ್ ಓಟ್ಸ್

ರಾತ್ರಿ ಹೊತ್ತೇ ಓಟ್ಸ್ ಅನ್ನು ಹಾಲು ಅಥವಾ ಮೊಸರಿನಲ್ಲಿ ನೆನೆಸಿಡಿ. ಬೆಳಗ್ಗೆ ಎದ್ದು ಅದಕ್ಕೆ ಹಣ್ಣುಗಳು ಮತ್ತು ಜೇನುತುಪ್ಪ ಸೇರಿಸಿ ತಿಂದರೆ ಸಮಯವೂ ಉಳಿಯುತ್ತೆ, ಆರೋಗ್ಯಕ್ಕೂ ಒಳ್ಳೇದು.

Image credits: Getty
Kannada

ಸ್ಮೂತಿ ಬೌಲ್

ಹಣ್ಣುಗಳು ಮತ್ತು ಹಾಲು ಸೇರಿಸಿ ಗಟ್ಟಿಯಾಗಿ ರುಬ್ಬಿಕೊಂಡ ಸ್ಮೂತಿ ಮೇಲೆ ಜೇನುತುಪ್ಪ, ನಟ್ಸ್ ಮತ್ತು ಹಣ್ಣುಗಳನ್ನು ಜೋಡಿಸಿ ಸವಿಯುವುದು ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಟ್ರೆಂಡ್.

Image credits: Getty
Kannada

ಎಗ್ ಇನ್ ಎ ಹೋಲ್

ಬ್ರೆಡ್ ಮಧ್ಯದಲ್ಲಿ ರಂಧ್ರ ಮಾಡಿ, ಅದರಲ್ಲಿ ಮೊಟ್ಟೆ ಒಡೆದು ಹಾಕಿ ಟೋಸ್ಟ್ ಮಾಡುವ ಈ ರೆಸಿಪಿ ನೋಡಲು ಎಷ್ಟು ಸುಂದರವೋ, ತಿನ್ನಲು ಅಷ್ಟೇ ರುಚಿಕರ.

Image credits: Getty
Kannada

ಪೀನಟ್ ಬಟರ್ ಆಪಲ್ ಸ್ಲೈಸ್

ಸೇಬು ಹಣ್ಣನ್ನು ತುಂಡುಗಳಾಗಿ ಕತ್ತರಿಸಿ, ಅದರ ಮೇಲೆ ಪೀನಟ್ ಬಟರ್ ಮತ್ತು ಚಿಯಾ ಸೀಡ್ಸ್ ಸೇರಿಸಿ ತಿನ್ನುವುದು ಪ್ರೋಟೀನ್ ಭರಿತ ಕ್ವಿಕ್ ಬ್ರೇಕ್‌ಫಾಸ್ಟ್ ಆಯ್ಕೆಯಾಗಿದೆ.

Image credits: Getty

ಇವು ಸಹಜವಾಗಿ ಹಿಮೋಗ್ಲೋಬಿನ್ ಹೆಚ್ಚಿಸುತ್ತವೆ, ಕೃತಕ ಮಾತ್ರೆ ನುಂಗೋದು ತಪ್ಪುತ್ತೆ!

ಮಸಾಲೆ ರುಬ್ಬದೇ 10 ನಿಮಿಷದಲ್ಲಿ ಮಾಡಿ ಹೋಟೆಲ್ ಶೈಲಿಯ ರುಚಿಯಾದ ಚಿಕನ್ ಗ್ರೇವಿ!

Curd Benefits: ದಿನಾ ಮೊಸರು ತಿಂದ್ರೆ ಸಿಗುವ ಆರೋಗ್ಯ ಪ್ರಯೋಜನಗಳಿವು

ಮಜ್ಜಿಗೆ ಹುಳಿ ಸಂಜೆಯಾದ್ರೂ ಹುಳಿಯಾಗಬಾರದೆಂದರೆ ಇಷ್ಟು ಮಾಡಿ ಸಾಕು