ಒಂದು ಮಾವಿನಕಾಯಿ, ಮೊಸರು ಬಳಸಿ ಬೂತ್ಗೊಜ್ಜು ಮಾಡೋದು ಬಹಳ ಸರಳ. ಒಗ್ಗರಣೆ ಸಾಮಗ್ರಿಗಳು ಬೇಕು.
ಮೊದಲೇ ಮಾವಿನಕಾಯಿಯನ್ನು ಬೇಯಿಸಿಕೊಂಡು ಉಪ್ಪು ನೀರಿನಲ್ಲಿ ಶೇಖರಿಸಿಕೊಂಡರೆ ವರ್ಷ ಕಳೆದರೂ ಹಾಳಾಗೋದಿಲ್ಲ. ಅದನ್ನು ಬೇಕಾದಾಗ ವಿವಿಧ ರೀತಿ ಅಡುಗೆ ಮಾಡಬಹುದು.
ಒಂದು ಮಾವಿನಕಾಯಿಯನ್ನು ಸಂಪೂರ್ಣವಾಗಿ ಬೇಯಿಸಿಕೊಳ್ಳಿ. ಬೇಯಿಸಿದ ಮಾವಿನಕಾಯಿ ಸಿಪ್ಪೆ ತೆಗೆದು, ತಿರುಳನ್ನು ಸೈಡ್‌ಗೆ ಇಟ್ಕೊಳ್ಳಿ, ಗೊರಟೆಯನ್ನು ಎಸೆಯಿರಿ.
ಆ ತಿರುಳಿಗೆ ಸಾಕಾಗುವಷ್ಟು ಮೊಸರು ಹಾಕಿ. ನಿಮಗೆ ಎಷ್ಟು ಹುಳಿ ಬೇಕು ಎನ್ನೋದು ಗಮನದಲ್ಲಿರಲಿ.
ಆಮೇಲೆ ಉದ್ದಿನಬೇಳೆ, ಸಾಸಿವೆ, ಇಂಗು ಹಾಕಿ ಒಂದು ಒಗ್ಗರಣೆ ಕೊಡಬೇಕು. ಅದರಲ್ಲಿ ಜಜ್ಜಿದ ಬೆಳ್ಳುಳ್ಳಿ, ಗಾಂಧಾರಿ ಮೆಣಸು ಅಥವಾ ಹಸಿಮೆಣಸು ಹಾಕಿದ್ದರೆ ಚೆನ್ನಾಗಿರುತ್ತದೆ.
ಉಪ್ಪು, ಹುಳಿ, ಖಾರ ಹದವಾಗಿದ್ದರೆ ಅನ್ನದ ಜೊತೆ ಬಾಯಿ ಚಪ್ಪರಿಸಿಕೊಂಡು ಬೂತ್ಗೊಜ್ಜು ಸವಿಯಬಹುದು.
1 ಮಾವಿನಕಾಯಿ ಬಳಸಿ, 2 ನಿಮಿಷದಲ್ಲಿ ಅಪ್ಪೇಹುಳಿ ಮಾಡೋದು ಹೇಗೆ?
ತಲೆಗೂದಲು ಬೆಳೆಯಲು ಈ ಆಹಾರ ತಿನ್ನುವ ಅಭ್ಯಾಸ ಮಾಡಿಕೊಳ್ಳಿ!
ಒಂದು ತಿಂಗಳು ಸಕ್ಕರೆ ತಿನ್ನಬೇಡಿ, ಅದ್ಭುತ ಬದಲಾವಣೆಗಳನ್ನು ನೋಡಿ!
ಹಾಲಿಗಿಂತ ಹೆಚ್ಚು ಕ್ಯಾಲ್ಸಿಯಂ ಹೊಂದಿರುವ 10 ಆಹಾರಗಳಿವು!