ಬ್ಯಾಚುಲರ್ಸ್‌ಗೆ ಅಥವಾ ಬೇಗ ಅಡುಗೆ ಮಾಡಬೇಕು ಎಂದವರಿಗೆ ಮಾವಿನಕಾಯಿ ಸೀಸನ್ ಟೈಮ್‌ನಲ್ಲಿ ಅಪ್ಪೇಹುಳಿ ಮಾಡೋದು ಬೆಸ್ಟ್!
ಹವ್ಯಕರ ಸಿಗ್ನೇಚರ್ ಅಡುಗೆ ಎಂದು ಕರೆಸಿಕೊಳ್ಳೋ ಅಪ್ಪೇಹುಳಿ ಮಾಡಲು ಜಾಸ್ತಿ ಟೈಮ್ ಬೇಕಾಗಿಲ್ಲ.
ಒಂದು ಮಾವಿನಕಾಯಿಯನ್ನು ಫುಲ್ ಬೇಯಿಸಿ, ಅದನ್ನು ನೀವು ಸಿಪ್ಪೆ ಬಿಡಿಸಿ, ತಿರುಳನ್ನು ತೆಗೆದುಕೊಂಡು Smash ಮಾಡಿರಿ, ಆಮೇಲೆ ಗೊರಟೆಯನ್ನು ಎಸೆಯಿರಿ.
ನಿಮಗೆ ಎಷ್ಟು ಹುಳಿ ಬೇಕು ಎನ್ನೋದನ್ನು ಅಂದಾಜಿಸಿ, ನೀವು ತೆಗೆದಿಟ್ಟುಕೊಂಡ ತಿರುಳಿಗೆ ತಕ್ಕಷ್ಟು ನೀರು ಹಾಕಿ. ಒಂದು ಮಾವಿನಕಾಯಿಗೆ ಒಂದು ಅಥವಾ ಒಂದೂವರೆ ಗ್ಲಾಸ್ ನೀರು ಹಾಕಬಹುದು.
ಆಮೇಲೆ ರುಚಿಗೆ ತಕ್ಕಷ್ಟು ಉಪ್ಪು ಹಾಕಿ, ಉದ್ದಿನಬೇಳೆ, ಸಾಸಿವೆ, ಹಸಿಮೆಣಸು, ಇಂಗು ಹಾಕಿ ಒಂದು ಒಗ್ಗರಣೆ ಕೊಟ್ಟರೆ ನಿಮ್ಮ ಅಪ್ಪೇಹುಳಿ ಊಟಕ್ಕೆ ರೆಡಿ.
ಅನ್ನದ ಜೊತೆ ಕಲೆಸಿಕೊಂಡು ಕೂಡ ಅಪ್ಪೇಹುಳಿ ಸವಿಯಬಹುದು. ಅಥವಾ ಹಾಗೆಯೇ ಅದನ್ನು ಕುಡಿಯಬಹುದು. ಅಪ್ಪೇಹುಳಿ ತಿಂದವರಿಗೆ ಯದ್ವಾ ತದ್ವಾ ನಿದ್ದೆ ಬರೋದಂತೂ ಪಕ್ಕಾ.
ತಲೆಗೂದಲು ಬೆಳೆಯಲು ಈ ಆಹಾರ ತಿನ್ನುವ ಅಭ್ಯಾಸ ಮಾಡಿಕೊಳ್ಳಿ!
ಒಂದು ತಿಂಗಳು ಸಕ್ಕರೆ ತಿನ್ನಬೇಡಿ, ಅದ್ಭುತ ಬದಲಾವಣೆಗಳನ್ನು ನೋಡಿ!
ಹಾಲಿಗಿಂತ ಹೆಚ್ಚು ಕ್ಯಾಲ್ಸಿಯಂ ಹೊಂದಿರುವ 10 ಆಹಾರಗಳಿವು!
ಅಡುಗೆ ಮನೆಯಲ್ಲಿ ಈ 6 ಆಹಾರಗಳನ್ನು ಇಡಬೇಡಿ: ಕಾರಣ ಇಲ್ಲಿದೆ!