Food
ಮಹಾರಾಷ್ಟ್ರದ ಖ್ಯಾತ ಖಾದ್ಯ ಜವಸನ್ನು, ಹುರಿದ ಅಗಸೆ ಬೀಜಗಳಿಂದ ತಯಾರಿಸಲಾಗುತ್ತದೆ. ಇದು ಊಟಕ್ಕೆ ವಿಶಿಷ್ಟವಾದ ರುಚಿಯನ್ನು ನೀಡುತ್ತದೆ
ಜವಸ್ ಒಂದು ಮಹಾರಾಷ್ಟ್ರದ ಸಾಂಪ್ರದಾಯಿಕ ಆಹಾರವಾಗಿದ್ದು,ಹುರಿದ ಅಗಸೆ ಬೀಜಗಳಿಂದ ತಯಾರಿಸಲಾಗುತ್ತದೆ. ಇದು ಆರೋಗ್ಯದ ಜೊತೆ ಒಳ್ಳೆಯ ರುಚಿ ನೀಡುವ ಸೈಡ್‌ಡಿಶ್ ಆಗಿದ್ದು, ಅನ್ನ ರೊಟ್ಟಿಯ ಜೊತೆ ಸೇವಿಸಬಹುದು.
ಅಗಸೆ ಬೀಜಗಳು - 1 ಕಪ್,ಒಣ ಕೆಂಪು ಮೆಣಸಿನಕಾಯಿ - 3-4, ಬೆಳ್ಳುಳ್ಳಿ - 4-5 ಎಸಳುಗಳು, ಹುರಿದ ಕಡಲೆಕಾಯಿ - 2 ಚಮಚ, ಹುಣಸೆಹಣ್ಣು - ಸ್ವಲ್ಪ, ಜೀರಿಗೆ - 1 ಚಮಚ, ಉಪ್ಪು ರುಚಿಗೆ ತಕ್ಕಷ್ಟು.
ಜವಸ್ ತಯಾರಿಸಲು ಒಣ ಪಾತ್ರೆಯನ್ನು ಮಧ್ಯಮ ಉರಿಯಲ್ಲಿ ಬಿಸಿ ಮಾಡಿ ಮತ್ತು ಅದರಲ್ಲಿ ಅಗಸೆ ಬೀಜಗಳನ್ನು ಹಾಕಿ. ಅವುಗಳು ಸಿಡಿಯಲು ಪ್ರಾರಂಭಿಸುವವರೆಗೆ ಹುರಿಯಿರಿ. ನಂತರ ತಣ್ಣಗಾಗಲು ಬಿಡಿ.
ನಂತರ ಅದೇ ಪಾತ್ರೆಯಲ್ಲಿ ಒಣ ಮೆಣಸಿನಕಾಯಿ ಹಾಕಿ ತಿಳಿ ಕಂದು ಬಣ್ಣ ಬರುವವರೆಗೆ ಹುರಿಯಿರಿ, ನಂತರ ಬೆಳ್ಳುಳ್ಳಿ ಎಸಳುಗಳನ್ನು ಹಾಕಿ ತಿಳಿ ಕಂದು ಬಣ್ಣ ಬರುವವರೆಗೆ ಹುರಿಯಿರಿ.
ಒಂದು ಮಿಕ್ಸಿ ಅಥವಾ ಸಾಣೆಕಲ್ಲಿನಲ್ಲಿ ಹುರಿದ ಅಗಸೆ ಬೀಜಗಳು, ಕೆಂಪು ಮೆಣಸಿನಕಾಯಿ, ಬೆಳ್ಳುಳ್ಳಿ, ಹುರಿದ ಕಡಲೆಕಾಯಿ, ಹುಣಸೆಹಣ್ಣು, ಜೀರಿಗೆ ಮತ್ತು ಉಪ್ಪನ್ನು ಹಾಕಿ ಕುಟ್ಟಿ ಪುಡಿ ಮಾಡಿ.
ನಿಮಗೆ ಯಾವ ರೀತಿ ಬೇಕು ಆ ರೀತಿ ಈ ಮಿಶ್ರಣವನ್ನ ದಪ್ಪ ಅಥವಾ ನುಣ್ಣಗೆ ಪುಡಿ ಮಾಡಿ.
ಈಗ ತಯಾರಾದ ಜವಸ್ ಚಟ್ನಿಯನ್ನು ಜೋಳದ ಭಾಕರಿ, ಅನ್ನ, ದಾಲ್ ಜೊತೆ ಬಡಿಸಿ. ಇದನ್ನು ಬೇಯಿಸಿದ ತರಕಾರಿಗಳ ಮೇಲೆ ಚಿಮುಕಿಸಿ ಅಥವಾ ಮೊಸರಿನೊಂದಿಗೆ ಬೆರೆಸಬಹುದು, ಸಲಾಡ್ ಅಥವಾ ಸೂಪ್‌ನಲ್ಲಿಯೂ ಸೇರಿಸಬಹುದು.
ಜವಸ್ ಅನ್ನು ಗಾಳಿಯಾಡದ ಡಬ್ಬಿಯಲ್ಲಿ ಹಾಕಿ. ಇದನ್ನು ಕೋಣೆಯ ಉಷ್ಣಾಂಶದಲ್ಲಿ ಒಂದು ವಾರ ಅಥವಾ ರೆಫ್ರಿಜರೇಟರ್‌ನಲ್ಲಿ 1 ತಿಂಗಳವರೆಗೆ ಹಾಳಾಗದಂತೆ ಸಂಗ್ರಹಿಸಿಡಬಹುದು.