Food
ಚಿಕನ್: 500 ಗ್ರಾಂ, ಬಿರಿಯಾನಿ ಮಸಾಲೆ: 1/2 ಟೀ ಸ್ಪೂನ್, ಜೀರಿಗೆ, ಧನಿಯಾ, ಕಾಶ್ಮೀರಿ ಚಿಲ್ಲಿ, ಅಚ್ಚ ಖಾರದ ಪುಡಿ ತಲಾ 1 ಟೀ ಸ್ಪೂನ್, ಬೆಳ್ಳುಳ್ಳಿ-ಶುಂಠಿ ಪೇಸ್ಟ್:
1 ಟೀ ಸ್ಪೂನ್, ಕತ್ತರಿಸಿದ ಕೋತಂಬರಿ ಮತ್ತು ಪುದಿನಾ, ಈರುಳ್ಳಿ: 4, ಮೊಸರು: 5 ಟೀ ಸ್ಪೂನ್, ಅಕ್ಕಿ: 2 ಗ್ಲಾಸ್, ಕೇಸರಿ: 2 ಎಳೆ, ತುಪ್ಪ: 6 ಟೀ ಸ್ಪೂನ್, ಉಪ್ಪು: ರುಚಿಗೆ ತಕ್ಕಷ್ಟು, ಚಕ್ಕೆ, ಲವಂಗ, ಏಲಕ್ಕೆ 2 ರಿಂದ 3
ಪಾತ್ರೆಗೆ ಚಿಕನ್ ಹಾಕಿ, ಅದಕ್ಕೆ ಫ್ರೈ ಮಾಡಿರೋ ಈರುಳ್ಳಿ, ಧನಿಯಾ, ಖಾರದ ಪುಡಿ, ಬೆಳ್ಳುಳ್ಳಿ-ಶುಂಠಿ ಪೇಸ್ಟ್, 3 ಟೀ ಸ್ಪೂನ್ ತುಪ್ಪ, ಮೊಸರು ಹಾಕಿ ಮ್ಯಾರಿನೇಟ್ ಮಾಡಿಕೊಂಡು 15 ನಿಮಿಷ ಎತ್ತಿಟ್ಟುಕೊಳ್ಳಿ.
ಪಾತ್ರೆಗೆ 3 ಟೀ ಸ್ಪೂನ್ ತುಪ್ಪ ಹಾಕಿ, ಅದಕ್ಕೆ ಚಕ್ಕೆ, ಲವಂಗ, ಏಲಕ್ಕಿ ಹಾಕಿ. ನಂತರ ಇದಕ್ಕೆ ಮ್ಯಾರಿನೇಟ್ ಮಾಡಿರುವ ಚಿಕನ್ ಸೇರಿಸಿ. ಆ ಬಳಿಕ ಫ್ರೈ ಆಗಿರೋ ಈರುಳ್ಳಿ ಸೇರಿಸಿ.
ನಂತರ ಕೇಸರಿ, ಕೋತಂಬರಿ, ಪುದಿನಾ, ಅಕ್ಕಿ ಸೇರಿಸಿ. ನಂತರ 3 ಗ್ಲಾಸ್ ನೀರು, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ, ಮುಚ್ಚಳ ಮುಚ್ಚಿ 1 ಕೂಗು ಕೂಗಿಸಿಕೊಂಡರೆ ಬಿರಿಯಾನಿ ಸಿದ್ಧ.
ಬಿಸಿ ಬಿಸಿ ಬಿರಿಯಾನಿಗೆ ನಿಂಬೆ ಹಣ್ಣಿನ ರಸ ಅಥವಾ ಕೋಸಂಬರಿ ಸೇರಿಸಿ ಸವಿಯಬಹುದು.