ಟೊಮ್ಯಾಟೊ - 2 ಒಣ ಕೆಂಪು ಮೆಣಸಿನಕಾಯಿ - 2 ಬೆಳ್ಳುಳ್ಳಿ ಎಸಳು - 3-4 ,ಉಪ್ಪು ಮತ್ತು ಎಣ್ಣೆ - ರುಚಿಗೆ ತಕ್ಕಷ್ಟು
Kannada
ಎಲೆಕೋಸಿನ ಎಲೆಗಳನ್ನು ಸಿದ್ಧಪಡಿಸಿ
ಎಲೆಕೋಸಿನ ಎಲೆಗಳನ್ನು ಎಚ್ಚರಿಕೆಯಿಂದ ಬೇರ್ಪಡಿಸಿ. ಕುದಿಯುವ ನೀರಿನಲ್ಲಿ 1-2 ನಿಮಿಷಗಳ ಕಾಲ ಆವಿಯಲ್ಲಿ ಬೇಯಿಸಿ, ಇದರಿಂದ ಅವು ಮೃದುವಾಗುತ್ತವೆ. ತಣ್ಣಗಾಗಲು ಬದಿಗಿರಿಸಿ.
Kannada
ಒಳ ತುಂಬುವಿಕೆಯನ್ನು ಸಿದ್ಧಪಡಿಸಿ
ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಬಿಸಿ ಮಾಡಿ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹುರಿಯಿರಿ. ನಂತರ ತುರಿದ ಕ್ಯಾರೆಟ್ ಎಲೆಕೋಸು ಸೇರಿಸಿ 2-3 ನಿಮಿಷ ಹುರಿಯಿರಿ. ಸೋಯಾ ಸಾಸ್, ಕರಿಮೆಣಸು ಉಪ್ಪು ಸೇರಿಸಿ ಮಿಶ್ರ ಮಾಡಿ.
Kannada
ಎಲೆಕೋಸಿನಲ್ಲಿ ತುಂಬಿಸಿ ಆವಿಯಲ್ಲಿ ಬೇಯಿಸಿ
ಈಗ ಎಲೆಕೋಸಿನ ಎಲೆಗಳ ಮಧ್ಯದಲ್ಲಿ 1-2 ಚಮಚ ಈ ಸ್ಟಪ್ ಅನ್ನು ಇರಿಸಿ. ಅದನ್ನು ಮಡಚಿ ಮೋಮೊ ಆಕಾರ ನೀಡಿ. ಸಿದ್ಧಪಡಿಸಿದ ಮೋಮೊಗಳನ್ನು ಸ್ಟೀಮರ್‌ನಲ್ಲಿ ಇರಿಸಿ ಮತ್ತು 10ರಿಂದ12 ನಿಮಿಷ ಆವಿಯಲ್ಲಿ ಬೇಯಿಸಿ.
Kannada
ಡಿಪ್ ತಯಾರಿಸಿ
ಟೊಮ್ಯಾಟೊ,ಕೆಂಪು ಒಣ ಮೆಣಸಿನಕಾಯಿ ಮತ್ತು ಬೆಳ್ಳುಳ್ಳಿಯನ್ನು ಹುರಿದು ಮಿಕ್ಸರ್‌ನಲ್ಲಿ ರುಬ್ಬಿಕೊಳ್ಳಿ. ಇದಕ್ಕೆ ಸ್ವಲ್ಪ ಎಣ್ಣೆ ಮತ್ತು ಉಪ್ಪು ಸೇರಿಸಿ ಡಿಪ್ ತಯಾರಿಸಿ.