Food

ಹಸಿರು ಏಲಕ್ಕಿ, ಬಿಳಿ ಎಲಕ್ಕಿಗೆ ಏನು ವ್ಯತ್ಯಾಸ?

ನಾವು ಬಳಸೋದು ಹಸಿರು ಏಲಕ್ಕಿ. ಆದರೆ ಕಪ್ಪು ಏಲಕ್ಕಿಯನ್ನು ಎಲ್ಲಿ ಬಳಸುತ್ತಾರೆ?

Image credits: others

ಸಣ್ಣದೋ ದೊಡ್ಡದೋ ಯಾವ ಏಲಕ್ಕಿ ಹೆಚ್ಚು ಪ್ರಯೋಜನಕಾರಿ

ನಮ್ಮಲ್ಲಿ ಹಸಿರು ಏಲಕ್ಕಿಯನ್ನೇ ಬಳಸೋದು. ಆದರೆ, ಕಪ್ಪು ಏಳಕ್ಕಿ ಬಳಸೋರು ಯಾರು?

ಹಸಿರು ಏಲಕ್ಕಿ ಸ್ವಾದ ಮತ್ತು ಸುವಾಸನೆ

ಹಸಿರು ಏಲಕ್ಕಿ ಸಿಹಿ ಮತ್ತು ಸ್ವಲ್ಪ ಮಸಾಲೆಯುಕ್ತ ಪರಿಮಳ ಹೊಂದಿರುತ್ತದೆ. ಇದನ್ನು ಸಾಮಾನ್ಯವಾಗಿ ಸಿಹಿ ತಿಂಡಿ, ಚಹಾ ಮತ್ತು ಭಕ್ಷ್ಯಗಳಲ್ಲಿ ಬಳಸಲಾಗುತ್ತದೆ.

ಕಪ್ಪು ಏಲಕ್ಕಿ ಸ್ವಾದ ಮತ್ತು ಸುವಾಸನೆ

ಕಪ್ಪು ಏಲಕ್ಕಿ ಲವಂಗ ಮಿಶ್ರಿತ ಸಿಹಿ ಪರಿಮಳ ಮತ್ತುತಾಜಾ ಸ್ವಾದವನ್ನು ಹೊಂದಿರುತ್ತದೆ. ಇದನ್ನು ಕರಿ, ಸ್ಟ್ಯೂ ಮತ್ತು ಬಿರಿಯಾನಿಗೆ ಹೆಚ್ಚು ಬಳಸುತ್ತಾರೆ. 

ಸಣ್ಣ ಏಲಕ್ಕಿಯಲ್ಲಿರುವ ಪೋಷಕಾಂಶಗಳು

ಹಸಿರು ಅಥವಾ ಸಣ್ಣ ಏಲಕ್ಕಿ ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾಗಿದೆ. ಇದು ಆಹಾರದ ನಾರಿನಂಶ, ಕ್ಯಾಲ್ಸಿಯಂ, ಕಬ್ಬಿಣ, ವಿಟಮಿನ್ ಸಿ, ಪೊಟ್ಯಾಷಿಯಮ್, ಕಾರ್ಬೋಹೈಡ್ರೇಟ್ ಮತ್ತು ಮೆಗ್ನೀಸಿಯಮ್ ಹೆಚ್ಚಿರುತ್ತದೆ.

ದೊಡ್ಡ ಏಲಕ್ಕಿಯ ಪೋಷಕಾಂಶಗಳು

ದೊಡ್ಡ ಏಲಕ್ಕಿ ಕೂಡ ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾಗಿದೆ. ಇದು ನಾರಿನಂಶ, ವಿಟಮಿನ್ ಸಿ ಮತ್ತು ಪೊಟ್ಯಾಷಿಯಮ್  ಹೊಂದಿರುತ್ತದೆ.

ಹಸಿರು ಏಲಕ್ಕಿ ಪ್ರಯೋಜನಗಳು

ಹಸಿರು ಏಲಕ್ಕಿ ರಕ್ತ ಪರಿಚಲನೆಯನ್ನು ಸುಧಾರಿಸುತ್ತದೆ, ಒತ್ತಡ ನಿವಾರಿಸುತ್ತದೆ. ಬಾಯಿ ಸ್ವಚ್ಛಗೊಳಿಸಬಲ್ಲದು. 

ದೊಡ್ಡ ಏಲಯ ಲಾಭ

ದೊಡ್ಡ ಏಲಕ್ಕಿ ಮಲಬದ್ಧತೆ ನಿವಾರಿಸುತ್ತದೆ. ಆಸ್ತಮಾ ಸಂಬಂಧಿ ಸಮಸ್ಯೆಯಲ್ಲಿ ದೊಡ್ಡ ಏಲಕ್ಕಿಯನ್ನು ಬಳಸಲಾಗುತ್ತದೆ. ಪ್ರತಿದಿನ ಇದನ್ನು ಬಳಸುವುದರಿಂದ ಕ್ಯಾನ್ಸರ್ ಅಪಾಯ ಕಡಿಮೆ ಮಾಡಬಹುದು.

ಸಣ್ಣ ಮತ್ತು ದೊಡ್ಡ ಏಲಕ್ಕಿ ಗುಣಲಕ್ಷಣಗಳು

ಸಣ್ಣ ಏಲಕ್ಕಿ ತಂಪಾದ ಸ್ವಭಾವವನ್ನು ಹೊಂದಿರುತ್ತದೆ, ಆದ್ದರಿಂದ ಇದನ್ನು ಬೇಸಿಗೆಯಲ್ಲಿ ಸೇವಿಸಬೇಕು. ದೊಡ್ಡ ಏಲಕ್ಕಿ ಉಷ್ಣ ಸ್ವಭಾವವನ್ನು ಹೊಂದಿರುತ್ತದೆ, ಆದ್ದರಿಂದ ಇದನ್ನು ಚಳಿಗಾಲದಲ್ಲಿ ಹೆಚ್ಚು ಸೇವಿಸಬೇಕು.

ಯಾವ ಏಲಕ್ಕಿ ತಿನ್ನುವುದು ಪ್ರಯೋಜನಕಾರಿ

ನಿಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲುದೊಡ್ಡ ಏಲಕ್ಕಿ ಸೇವನೆ ಒಳ್ಳೇಯದು. ಅದೇ ಸಮಯದಲ್ಲಿ, ನಿದ್ರಾಹೀನತೆ, ಒತ್ತಡ ನಿವಾರಿಸಲು ಸಣ್ಣ ಏಲಕ್ಕಿ ಪ್ರಯೋಜನಕಾರಿ.

Find Next One