ಹಣ್ಣುಗಳು ಆರೋಗ್ಯಕ್ಕೆ ಒಳ್ಳೆಯದೇ. ಆದರೆ, ತಜ್ಞರ ಪ್ರಕಾರ ಕೆಲವು ಹಣ್ಣುಗಳನ್ನು ರಾತ್ರಿ ಹೊತ್ತು ತಿನ್ನಬಾರದು. ಯಾವ ಹಣ್ಣುಗಳನ್ನು ರಾತ್ರಿ ತಿಂದರೆ ಏನಾಗುತ್ತದೆ ಎಂದು ತಿಳಿಯೋಣ.
ರಾತ್ರಿ ಹೊತ್ತು ಬಾಳೆಹಣ್ಣು ತಿಂದರೆ ಗ್ಯಾಸ್ಟ್ರಿಕ್ ಸಮಸ್ಯೆ ಕಾಡಬಹುದು. ಜೊತೆಗೆ ಸುಸ್ತು ಎನಿಸಬಹುದು ಮತ್ತು ಜೀರ್ಣಕ್ರಿಯೆ ನಿಧಾನವಾಗಬಹುದು.
ದ್ರಾಕ್ಷಿಯಲ್ಲಿ ಸಕ್ಕರೆ ಅಂಶ ಹೆಚ್ಚಾಗಿರುತ್ತದೆ. ಇದನ್ನು ರಾತ್ರಿ ಹೊತ್ತು ತಿಂದರೆ ರಕ್ತದಲ್ಲಿನ ಸಕ್ಕರೆ ಮಟ್ಟ (ಬ್ಲಡ್ ಶುಗರ್) ದಿಢೀರ್ ಏರಿಕೆಯಾಗುವ ಸಾಧ್ಯತೆ ಇರುತ್ತದೆ.
ಸೀಬೆಕಾಯಿಯಲ್ಲಿ ಫೈಬರ್ (ನಾರಿನಂಶ) ಹೇರಳವಾಗಿರುತ್ತದೆ. ಇದನ್ನು ರಾತ್ರಿ ಹೊತ್ತು ತಿಂದರೆ ಹೊಟ್ಟೆಯಲ್ಲಿ ಕಿರಿಕಿರಿ ಅಥವಾ ಜೀರ್ಣಕ್ರಿಯೆ ಸಮಸ್ಯೆ ಉಂಟಾಗಬಹುದು.
ಕಿತ್ತಳೆ ಹಣ್ಣನ್ನು ರಾತ್ರಿ ಹೊತ್ತು ತಿನ್ನಬಾರದು. ಇದೊಂದು ಸಿಟ್ರಸ್ ಹಣ್ಣಾಗಿರುವುದರಿಂದ, ರಾತ್ರಿ ತಿಂದರೆ ಅಸಿಡಿಟಿ ಮತ್ತು ಎದೆಯುರಿ ಸಮಸ್ಯೆ ಹೆಚ್ಚಾಗುವ ಅಪಾಯವಿದೆ.
ರಾತ್ರಿ ಹೊತ್ತು ಮಾವಿನಹಣ್ಣು ತಿಂದರೆ ದೇಹದಲ್ಲಿ ಉಷ್ಣಾಂಶ ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಅಷ್ಟೇ ಅಲ್ಲ, ಇದು ತೂಕ ಹೆಚ್ಚಾಗಲು ಕೂಡ ಕಾರಣವಾಗಬಹುದು.
ಮಾವಿನಹಣ್ಣು ತಿನ್ನಿ.. ಆರೋಗ್ಯದಲ್ಲಿ ಈ 7 ಅದ್ಭುತ ಪವಾಡ ಪಡೆಯಿರಿ!
ನಿಮ್ಮ ಹೃದಯ ಚೆನ್ನಾಗಿರಬೇಕೇ? ಮೆಗ್ನೀಸಿಯಮ್ ಭರಿತ ಈ ಹಣ್ಣುಗಳು ಸೇವಿಸಿ!
ನುಗ್ಗೆ ಸೊಪ್ಪಿನ ಪಲ್ಯ, ಪರೋಟ ತಿಂದಿದ್ದೀರಾ? ಈ ಬಾರಿ ಮಾಡಿ ರುಚಿಯಾದ ಹಲ್ವಾ!
ಶುಗರ್ ಕಡಿಮೆ ಆಗಬೇಕಾ? ಪ್ರತಿದಿನ ಈ 5 ಪಾನೀಯಗಳನ್ನು ಕುಡಿಯಬೇಡಿ!