Food
ಬೀಟ್ರೂಟ್ ನಮ್ಮ ಆರೋಗ್ಯಕ್ಕೆ ಬಹಳ ಉಪಯುಕ್ತವಾದ ಪೋಷಕಾಂಶಗಳ ಆಗರ. ಇದನ್ನು ಸೇವಿಸುವುದರಿಂದ ಹಲವಾರು ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು.
ಪ್ರತಿದಿನ ಬೀಟ್ರೂಟ್ ಸೇವಿಸುವ ಅಭ್ಯಾಸ ಮಾಡಿಕೊಂಡರೆ ನಿಮ್ಮ ಲಿವರ್ ಆರೋಗ್ಯವಾಗಿರುತ್ತದೆ. ಈ ತರಕಾರಿ ನಿಮ್ಮ ಲಿವರ್ ನಲ್ಲಿ ಕೊಬ್ಬು ಸಂಗ್ರಹವಾಗದಂತೆ ತಡೆಯುತ್ತದೆ.
ಬಿಪಿ ರೋಗಿಗಳಿಗೆ ಬೀಟ್ರೂಟ್ ಒಂದು ದಿವ್ಯ ಔಷಧಿಯಂತೆ ಕೆಲಸ ಮಾಡುತ್ತದೆ. ಇದರಲ್ಲಿರುವ ಪೊಟ್ಯಾಶಿಯಂ ಬಿಪಿ ಕಡಿಮೆ ಮಾಡಿ ಹೃದಯವನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ.
ಬೀಟ್ರೂಟ್ ಮಧುಮೇಹಿಗಳಿಗೆ ಉತ್ತಮ ಔಷಧಿಯಾಗಿ ಕೆಲಸ ಮಾಡುತ್ತದೆ. ಇದರಲ್ಲಿ ಕಾರ್ಬೋಹೈಡ್ರೇಟ್ ಕಡಿಮೆ ಮತ್ತು ನಾರಿನಾಂಶ ಹೆಚ್ಚು. ಇದನ್ನು ಸೇವಿಸಿದರೆ ಸಕ್ಕರೆ ಮಟ್ಟ ನಿಯಂತ್ರಣದಲ್ಲಿರುತ್ತದೆ.
ಬೀಟ್ರೂಟ್ ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಒಂದು ಕಪ್ ಬೀಟ್ರೂಟ್ ನಲ್ಲಿ 3.4 ಗ್ರಾಂ ನಾರಿನಾಂಶವಿದೆ. ಇದು ಜೀರ್ಣ ಸಮಸ್ಯೆಗಳಿಂದ ರಕ್ಷಿಸುತ್ತದೆ.
ರಕ್ತ ಹೆಚ್ಚಿಸಲು ಕೂಡ ಬೀಟ್ರೂಟ್ ಸಹಾಯ ಮಾಡುತ್ತದೆ. ಈ ತರಕಾರಿಯಲ್ಲಿ ಕಬ್ಬಿಣಾಂಶ ಹೇರಳವಾಗಿದೆ. ರಕ್ತ ಕಡಿಮೆಯಿರುವವರು ಬೀಟ್ರೂಟ್ ಸೇವಿಸಿದರೆ ರಕ್ತ ಹೆಚ್ಚುತ್ತದೆ.
ತೂಕ ಇಳಿಸಿಕೊಳ್ಳಲು ಬಯಸುವವರಿಗೂ ಬೀಟ್ರೂಟ್ ಸಹಾಯಕಾರಿ. ಇದರಲ್ಲಿ ಕೊಬ್ಬು ಮತ್ತು ಕ್ಯಾಲೋರಿ ಕಡಿಮೆ ಇದೆ. ಇದನ್ನು ಸೇವಿಸಿದರೆ ನೀವು ಸುಲಭವಾಗಿ ತೂಕ ಇಳಿಸಿಕೊಳ್ಳಬಹುದು.
ಬೀಟ್ರೂಟ್ ಚರ್ಮವನ್ನು ಆರೋಗ್ಯಕರವಾಗಿ ಮತ್ತು ಯೌವ್ವನದಿಂದ ಕಾಣುವಂತೆ ಮಾಡಲು ಸಹಾಯ ಮಾಡುತ್ತದೆ. ಇದರಲ್ಲಿ ವಿಟಮಿನ್ ಗಳು ಮತ್ತು ಉತ್ಕರ್ಷಣ ನಿರೋಧಕಗಳು ಹೇರಳವಾಗಿವೆ. ಇವು ಚರ್ಮವನ್ನು ಆರೋಗ್ಯವಾಗಿರಿಸುತ್ತವೆ.