ಅಧಿಕ ಕೊಲೆಸ್ಟ್ರಾಲ್ ಹೃದಯ ಸಂಬಂಧಿತ ವಿವಿಧ ತೊಡಕುಗಳನ್ನು ಉಂಟುಮಾಡುತ್ತದೆ ಮತ್ತು ಒಟ್ಟಾರೆ ಆರೋಗ್ಯವನ್ನು ಹದಗೆಡಿಸುತ್ತದೆ.
ಜೀವನಶೈಲಿ ಮತ್ತು ನಾವು ಸೇವಿಸುವ ಆಹಾರವು ಕೊಲೆಸ್ಟ್ರಾಲ್ ಮಟ್ಟವನ್ನು ಬಹಳಷ್ಟು ಪ್ರಭಾವಿಸುತ್ತದೆ.
ಅಧಿಕ ಕೊಲೆಸ್ಟ್ರಾಲ್ ಹೆಚ್ಚಿಸುವಲ್ಲಿ ಕೆಲವು ಆಹಾರಗಳು ಪ್ರಮುಖ ಪಾತ್ರ ವಹಿಸುತ್ತವೆ. ಅಧಿಕ ಕೊಲೆಸ್ಟ್ರಾಲ್‌ಗೆ ಕಾರಣವಾಗುವ ಆಹಾರಗಳು ಇಲ್ಲಿವೆ..
ರೆಡ್ ಮೀಟ್ ಎಲ್‌ಡಿಎಲ್ (ಕೆಟ್ಟ) ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುತ್ತದೆ. ಇದು ಹೃದ್ರೋಗದ ಅಪಾಯವನ್ನು ಹೆಚ್ಚಿಸುತ್ತದೆ.
ಕೊಬ್ಬಿನಂಶ ಹೆಚ್ಚಿರುವ ಹಾಲಿನ ಉತ್ಪನ್ನಗಳಲ್ಲಿ ಕಂಡುಬರುವ ಸ್ಯಾಚುರೇಟೆಡ್ ಕೊಬ್ಬುಗಳು ಎಲ್‌ಡಿಎಲ್ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುತ್ತವೆ ಎಂದು ಅಧ್ಯಯನಗಳು ಹೇಳುತ್ತವೆ.
ಸಿಹಿತಿಂಡಿಗಳು, ಕುಕೀಸ್‌ಗಳಲ್ಲಿ ಸ್ಯಾಚುರೇಟೆಡ್ ಕೊಬ್ಬುಗಳು ಮತ್ತು ಸಕ್ಕರೆ ಅಧಿಕವಾಗಿರುತ್ತದೆ. ಇದು ಎಲ್‌ಡಿಎಲ್ ಕೊಲೆಸ್ಟ್ರಾಲ್ ಹೆಚ್ಚಿಸಲು ಕಾರಣವಾಗುತ್ತದೆ.
ಎಣ್ಣೆಯಲ್ಲಿ ಕರಿದ ಪದಾರ್ಥಗಳು ಎಲ್‌ಡಿಎಲ್ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುತ್ತವೆ.
ಫಾಸ್ಟ್ ಫುಡ್‌ನಲ್ಲಿ ಕೊಬ್ಬಿನಂಶ ಹೆಚ್ಚಾಗಿರುತ್ತದೆ. ಫಾಸ್ಟ್ ಫುಡ್‌ಗಳನ್ನು ನಿಯಮಿತವಾಗಿ ಸೇವಿಸುವುದರಿಂದ ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಾಗುತ್ತದೆ ಎಂದು ಅಧ್ಯಯನಗಳು ಹೇಳುತ್ತವೆ.
ಬಳುಕುವ ಬಳ್ಳಿ ನೋರಾ ಫತೇಹಿ ತರ ಕಾಣಬೇಕಾ? ಹಾಗಿದ್ರೆ ಈ 6 ಬೀಜಗಳನ್ನು ಸೇವಿಸಿ!
Snacks Recipe: ಸ್ವಲ್ಪ ಉಪ್ಪು-ಖಾರ, ಮಸಾಲೆ ಹಾಕಿ ಇಡ್ಲಿಗೆ ಕೊಡಿ ಸ್ಪೈಸಿ ಟಚ್
ಅನ್ನಕ್ಕೆ ರುಚಿಯಾಗಿರುವ 5 ನಿಮಿಷದಲ್ಲಿ ಸುಲಭವಾಗಿ ಮಾಡುವ ಮೊಸರಿನ ಸಾರಿನ ರೆಸಿಪಿ
ಇದೊಂದೇ ಹಣ್ಣು ಸಾಕು ತೂಕ ಇಳಿಸೋಕೆ: ಇಲ್ಲಿದೆ ಸ್ಟ್ರಾಬೆರಿ ಸೇವನೆಯ 6 ಪ್ರಯೋಜನಗಳು