Festivals
ಎಲ್ಲರಿಗೂ ಪ್ರಿಯವಾಗುವ ದೇವರು ಎಂದರೆ ಗಣಪತಿ, ಮಕ್ಕಳಿಂದ ಮುದುಕರವರೆಗೂ ಗಣಪತಿ ದೇವರು ಎಂದರೆ ಭಕ್ತಿ, ಪ್ರೀತಿ!
ಮೊದಲ ಸಲ ಗಣೇಶ ಚತುರ್ಥಿ ಛತ್ರಪತಿ ಶಿವಾಜಿ ಮಹಾರಾಜರ ಕಾಲದಲ್ಲಿ ಆಚರಿಸಿದ ಬಗ್ಗೆ ದಾಖಲೆಯಲ್ಲಿದೆ. ಶಿವಾಜಿ ಮಹಾರಾಜರು ಗಣಪತಿಯ ಭಕ್ತರಾಗಿದ್ದು ಅದ್ದೂರಿಯಾಗಿ ಆಚರಿಸುತ್ತಿದ್ದರು.
ಗಣಪತಿ ಹಬ್ಬ ಭಾರತದಲ್ಲಿ ಮಾತ್ರವಲ್ಲ,ಕಾಂಬೋಡಿಯಾ, ಥೈಲ್ಯಾಂಡ್, ನೇಪಾಳ ಮತ್ತು ಚೀನಾದಲ್ಲಿ ಗಣೇಶನನ್ನು ಪೂಜಿಸಲಾಗುತ್ತದೆ. ವಿದೇಶದಲ್ಲೂ ಗಣಪತಿ ಭಕ್ತರಿದ್ದಾರೆಂದರೆ ಅಚ್ಚರಿಯಾಗುತ್ತಲ್ಲವೇ?
ಗಣಪತಿ ವಿದೇಶದಲ್ಲಿ ಪೂಜೆಸುತ್ತಾರೆ ಅಷ್ಟೇ ಅಲ್ಲ ಇಂಡೋನೇಷ್ಯಾದ 20,000 ರೂಪಾಯಿ ನೋಟಿನ ಮೇಲೆ ಗಣೇಶನ ಚಿತ್ರ ಮುದ್ರಿಸಲಾಗಿದೆ.
ಚೀನಾದ ಗಣಪತಿ ಮೂರ್ತಿ ವಿಭಿನ್ನವಾಗಿದೆ. ಇಲ್ಲಿನ ಗಣೇಶನಿಗೆ ಎರಡು ಆನೆಯ ತಲೆಗಳಿದ್ದು, ಭಕ್ತಿಯಿಂದ ಪೂಜಿಸಲಾಗುತ್ತದೆ.
ಚಂದ್ರನನ್ನು ನೋಡುವುದನ್ನು ತಪ್ಪಿಸಿ. ಗಣೇಶ ಚತುರ್ಥಿಯ ಸಂದರ್ಭದಲ್ಲಿ ಚಂದ್ರನನ್ನು ನೋಡುವುದು ಅಶುಭವೆಂದು ಪರಿಗಣಿಸಲಾಗಿದೆ.