ಚಿನ್ನದ ಬೆಲೆ ಏರಿಕೆಯಿಂದಾಗಿ, ಕಡಿಮೆ ತೂಕದ ಆಭರಣಗಳಿಗೆ ಬೇಡಿಕೆ ಹೆಚ್ಚಾಗಿದೆ. ಅದರಲ್ಲೂ 1.5 ಗ್ರಾಂ ಒಳಗೆ ಸಿಗುವ ಟ್ವಿಸ್ಟೆಡ್ ಉಂಗುರಗಳು ಸಖತ್ ಟ್ರೆಂಡಿಂಗ್‌ನಲ್ಲಿವೆ.
fashion May 07 2026
Author: Ashwini HR Image Credits:chat GPT
Kannada
1.5 ಗ್ರಾಂ ಟ್ವಿಸ್ಟೆಡ್ ಗೋಲ್ಡ್ ರಿಂಗ್
18 ಕ್ಯಾರೆಟ್ ಚಿನ್ನದಲ್ಲಿ 1-1.5 ಗ್ರಾಂ ತೂಕದ ಟ್ವಿಸ್ಟೆಡ್ ಗೋಲ್ಡ್ ರಿಂಗ್‌ಗಳನ್ನು ಸುಲಭವಾಗಿ ಮಾಡಬಹುದು. ಇಲ್ಲಿ ಎರಡು ತೆಳುವಾದ ಚಿನ್ನದ ಎಳೆಯನ್ನ ಒಂದಕ್ಕೊಂದು ಹೆಣೆದು ಸುಂದರ ವಿನ್ಯಾಸ ರೂಪಿಸಲಾಗಿದೆ.
Image credits: Instagram
Kannada
ಡೈಲಿ ವೇರ್‌ಗೆ ಟ್ವಿಸ್ಟೆಡ್ ರಿಂಗ್
ದೈನಂದಿನ ಬಳಕೆಗೆ, ನೀವು ಗೋಲ್ಡ್ ಬ್ಯಾಂಡ್ ಇರುವ ಟ್ವಿಸ್ಟೆಡ್ ರಿಂಗ್ ಆಯ್ಕೆ ಮಾಡಬಹುದು. ಇದರಲ್ಲಿ ಎರಡು ಗೋಲ್ಡ್ ಬ್ಯಾಂಡ್‌ಗಳನ್ನು ಕ್ರಿಸ್-ಕ್ರಾಸ್ ಆಗಿ ಹೆಣೆದು ಕ್ಲಾಸಿ ಲುಕ್ ನೀಡಲಾಗುತ್ತದೆ.
Image credits: Pinterest
Kannada
ಜಿಗ್‌ಜಾಗ್ ರಿಂಗ್ ಡಿಸೈನ್
ಜಿಗ್‌ಜಾಗ್ ರಿಂಗ್ ಡಿಸೈನ್ ಟ್ರೆಂಡ್‌ನಲ್ಲಿದೆ. ಇದರಲ್ಲಿ ಚಿನ್ನದ ವೈರ್ ಅಂಕುಡೊಂಕಾಗಿ ಬಾಗಿಸಿ ಜಿಗ್‌ಜಾಗ್ ಪ್ಯಾಟರ್ನ್ ಮಾಡಲಾಗುತ್ತದೆ. ಈ ವಿನ್ಯಾಸ ಕೈಗಳಿಗೆ ತುಂಬಾ ಸ್ಟೈಲಿಶ್ ಮತ್ತು ಮಾಡರ್ನ್ ಲುಕ್ ಕೊಡುತ್ತೆ.
Image credits: Pinterest
Kannada
ಹಗುರವಾದ ಕ್ರಿಸ್ ಕ್ರಾಸ್ ರಿಂಗ್
ನೀವು ಹಗುರವಾದ ಉಂಗುರದ ವಿನ್ಯಾಸ ಇಷ್ಟಪಡುತ್ತಿದ್ದರೆ ತೆಳುವಾದ ಚಿನ್ನದ ಎಳೆಗಳಿರುವ ಕ್ರಿಸ್ ಕ್ರಾಸ್ ರಿಂಗ್ ಆಯ್ಕೆ ಮಾಡಬಹುದು. ಇದು ನೋಡಲು ಭಾರವಾಗಿ ಕಂಡರೂ ಸುಲಭವಾಗಿ 1.5-2 ಗ್ರಾಂ ಚಿನ್ನದಲ್ಲಿ ರೆಡಿಯಾಗುತ್ತದೆ.
Image credits: Instagram
Kannada
ಲಾಂಗ್ ಟ್ವಿಸ್ಟೆಡ್ ರಿಂಗ್
ಲಾಂಗ್ ಟ್ವಿಸ್ಟೆಡ್ ರಿಂಗ್ ಉದ್ದನೆ ಬೆರಳಿಗೆ ಸುಂದರವಾಗಿ ಕಾಣುತ್ತೆ. ಇಲ್ಲಿ ಸ್ಪೈರಲ್ ಪ್ಯಾಟರ್ನ್ ನೀಡಿ, ಮೇಲೆ ಮತ್ತು ಕೆಳಗೆ ಅಮೆರಿಕನ್ ಡೈಮಂಡ್ ಸ್ಟೋನ್ ಅಳವಡಿಸಲಾಗುತ್ತದೆ. ಇದು ರಾಯಲ್ ಲುಕ್ ನೀಡುತ್ತೆ.
Image credits: Instagram
Kannada
ಅಮೆರಿಕನ್ ಡೈಮಂಡ್ ಟ್ವಿಸ್ಟೆಡ್ ರಿಂಗ್
ಜನ ಡೈಮಂಡ್ ಡೀಟೇಲಿಂಗ್ ಹೆಚ್ಚು ಇಷ್ಟಪಡುತ್ತಾರೆ. ಇದರಲ್ಲಿ ಮುಂಭಾಗದಲ್ಲಿ ಚಿನ್ನವನ್ನ ಕ್ರಿಸ್ ಕ್ರಾಸ್ ಮಾದರಿಯಲ್ಲಿ ವಿನ್ಯಾಸಗೊಳಿಸಿ, ಅದರ ಮೇಲೆ ಅಮೆರಿಕನ್ ಡೈಮಂಡ್ ಸ್ಟೋನ್ ಕೂರಿಸಲಾಗುತ್ತೆ.
Image credits: Pinterest
Kannada
ಇನ್ಫಿನಿಟಿ ಸೈನ್ ಟ್ವಿಸ್ಟೆಡ್ ರಿಂಗ್
ಇನ್ಫಿನಿಟಿ ಚಿಹ್ನೆ ಇರುವ ಟ್ವಿಸ್ಟೆಡ್ ರಿಂಗ್ ಕೂಡ ಕ್ಲಾಸಿಯಾಗಿದೆ. ಇದರಲ್ಲಿ ಒಂದು ಇನ್ಫಿನಿಟಿ ಚಿಹ್ನೆಯನ್ನು ವೈಟ್ ಗೋಲ್ಡ್‌ನಲ್ಲಿ ಮತ್ತು ಇನ್ನೊಂದನ್ನು ಅಮೆರಿಕನ್ ಡೈಮಂಡ್ ಸ್ಟೋನ್‌ನೊಂದಿಗೆ ಮಾಡಲಾಗುತ್ತದೆ.