ಥ್ರೆಡ್ ಮಂಗಳಸೂತ್ರದ ದೊಡ್ಡ ವಿಶೇಷತೆಯೆಂದರೆ ಅದರ ಹಗುರವಾದ ತೂಕ ಮತ್ತು ಬಜೆಟ್ ಫ್ರೆಂಡ್ಲಿ ಆಗಿರುವುದು. ಇದರಲ್ಲಿ ಭಾರವಾದ ಚಿನ್ನದ ಚೈನ್ ಬದಲು ರೇಷ್ಮೆ, ಹತ್ತಿ ಅಥವಾ ಕಪ್ಪು ಮಣಿಗಳ ದಾರಗಳನ್ನು ಬಳಸಲಾಗುತ್ತದೆ.
fashion May 21 2026
Author: Naveen Kodase Image Credits:Pinterest
Kannada
ಲೇಟೆಸ್ಟ್ ಥ್ರೆಡ್ ಮಂಗಳಸೂತ್ರ ಡಿಸೈನ್
ಕಪ್ಪು ದಾರಗಳನ್ನು ಹೆಣೆದು ತಯಾರಿಸಿದ ಥ್ರೆಡ್ ಮಂಗಳಸೂತ್ರದ ಡಿಸೈನ್‌ಗಳು ಹೆಚ್ಚು ಜನಪ್ರಿಯವಾಗಿವೆ. ಇವುಗಳಲ್ಲಿ ಗೋಲ್ಡನ್ ದಾರಗಳ ಡಿಟೇಲಿಂಗ್ ಇದ್ದು, ಮುಂದೆ ಹಕ್ಕಿ ಆಕಾರದ ಸಣ್ಣ ಪೆಂಡೆಂಟ್‌ಗಳನ್ನು ಅಳವಡಿಸಲಾಗಿರುತ್ತದೆ
Image credits: Instagram
Kannada
ಚೋಕರ್ ಸ್ಟೈಲ್ ಥ್ರೆಡ್ ಮಂಗಳಸೂತ್ರ
ಚೋಕರ್ ಸ್ಟೈಲ್ ಥ್ರೆಡ್ ಮಂಗಳಸೂತ್ರದಲ್ಲಿ, ದಪ್ಪ ದಾರಗಳನ್ನು ಟ್ವಿಸ್ಟ್ ಮಾಡಿ ಮಧ್ಯದಲ್ಲಿ ಗೋಲ್ಡನ್ ಮೀನಾಕಾರಿ ವರ್ಕ್ ಇರುವ ಪೆಂಡೆಂಟ್ ಹಾಕಲಾಗಿರುತ್ತದೆ. ಹಿಂಭಾಗದಲ್ಲಿ ಅಡ್ಜಸ್ಟಬಲ್ ಪ್ಯಾಟರ್ನ್ ನೀಡಲಾಗಿದೆ.
Image credits: Pinterest
Kannada
ಟೆಂಪಲ್ ಜ್ಯುವೆಲ್ಲರಿ ಥ್ರೆಡ್ ಮಂಗಳಸೂತ್ರ
ನೀವು ಸಾಂಪ್ರದಾಯಿಕ ಆಭರಣಗಳನ್ನು ಇಷ್ಟಪಡುವವರಾದರೆ, ಟೆಂಪಲ್ ಜ್ಯುವೆಲ್ಲರಿ ಶೈಲಿಯ ಥ್ರೆಡ್ ಮಂಗಳಸೂತ್ರವನ್ನು ಆಯ್ಕೆ ಮಾಡಿ. ಇದರಲ್ಲಿ ಗೋಲ್ಡ್ ಬೀಡ್ಸ್ ಜತೆಗೆ ದೇವರ ವಿನ್ಯಾಸವಿರುವ ಪೆಂಡೆಂಟ್ ಅಳವಡಿಸಲಾಗುತ್ತದೆ.
Image credits: Pinterest
Kannada
ಹ್ಯಾಂಗಿಂಗ್ ಥ್ರೆಡ್ ಮಂಗಳಸೂತ್ರ
ತೆಳುವಾದ ದಾರಗಳಲ್ಲಿ ಹೂವಿನ ಅಥವಾ ಹ್ಯಾಂಗಿಂಗ್ ಡಿಸೈನ್ ಇರುವ ಮಂಗಳಸೂತ್ರಗಳು ಕೂಡಾ ತುಂಬಾ ಸುಂದರವಾಗಿ ಕಾಣಿಸುತ್ತವೆ. ಗಾತ್ರದಲ್ಲಿ ಚಿಕ್ಕದಾಗಿದ್ದರೂ, ಇವು ರಾಯಲ್ ಮತ್ತು ಎಲಿಗೆಂಟ್ ಲುಕ್ ನೀಡುತ್ತವೆ.
Image credits: Instagram
Kannada
ಪಾನ್ ಶೇಪ್ ಥ್ರೆಡ್ ಮಂಗಳಸೂತ್ರ
ಥ್ರೆಡ್ ಮಂಗಳಸೂತ್ರದಲ್ಲಿ ಪಾನ್ ಶೇಪ್ ಪೆಂಡೆಂಟ್ ಇರುವ ಡಿಸೈನ್‌ಗಳು ಕೂಡಾ ಸಾಕಷ್ಟು ಟ್ರೆಂಡ್‌ನಲ್ಲಿವೆ. ಇದರಲ್ಲಿ ಎರಡೂ ಬದಿಗಳಲ್ಲಿ ಸಣ್ಣ ಪಾನ್ ಶೇಪ್ ಪೆಂಡೆಂಟ್‌ಗಳನ್ನು ನೀಡಿ, ಪೆಂಡೆಂಟ್ ಹಾಕಲಾಗುತ್ತದೆ.
Image credits: Pinterest
Kannada
ಹೆಣೆದ ದಾರಗಳ ಡಿಸೈನ್
ಥ್ರೆಡ್ ಮಂಗಳಸೂತ್ರದಲ್ಲಿ ಹೆಣೆದ ದಪ್ಪ ಕಪ್ಪು ದಾರಗಳ ಡಿಸೈನ್ ಕೂಡಾ ಹೆಚ್ಚು ಇಷ್ಟವಾಗುವಂಥದ್ದು. ಇದರಲ್ಲಿ ಮೂರು ಅಥವಾ ನಾಲ್ಕು ದಪ್ಪ ದಾರಗಳನ್ನು ಟ್ವಿಸ್ಟ್ ಮಾಡಿ ಮಧ್ಯದಲ್ಲಿ ಗೋಲ್ಡ್ ಪೆಂಡೆಂಟ್ ಹಾಕಲಾಗುತ್ತದೆ.
Image credits: Instagram
Kannada
ಮೀನಾಕಾರಿ ವರ್ಕ್ ಥ್ರೆಡ್ ಮಂಗಳಸೂತ್ರ
ಕಪ್ಪು ಥ್ರೆಡ್ ಮಂಗಳಸೂತ್ರದಲ್ಲಿ ಬಣ್ಣಬಣ್ಣದ ಮೀನಾಕಾರಿ ಪೆಂಡೆಂಟ್‌ಗಳು ತುಂಬಾ ಸುಂದರವಾಗಿ ಕಾಣಿಸುತ್ತವೆ. ಇವುಗಳಲ್ಲಿ ಮುತ್ತು, ರೂಬಿ, ಗೋಲ್ಡ್ ಸ್ಟ್ರಿಪ್‌ಗಳೊಂದಿಗೆ ಹೂವಿನ ಡಿಸೈನ್‌ಗಳನ್ನು ಮಾಡಲಾಗುತ್ತದೆ.