Fashion

ದೀಪಿಕಾ ಪಡುಕೋಣೆ ಸಲ್ವಾರ್ ಸೂಟ್ ಗಳು

ದೀಪಿಕಾ ಪಡುಕೋಣೆ ಸಲ್ವಾರ್ ಸೂಟ್

ದೀಪಿಕಾ ಪಡುಕೋಣೆ ಸೀರೆಯನ್ನು ಎಷ್ಟು ಅಂದವಾಗಿ ಧರಿಸುತ್ತಾರೋ ಅಷ್ಟೇ ಅದ್ಭುತವಾಗಿ ಸಲ್ವಾರ್ ಸೂಟ್ ಅನ್ನು ಸಹ ಧರಿಸುತ್ತಾರೆ. ನೀವು 1500 ರೂಗಳಲ್ಲಿ ರಾಣಿಯಂತೆ ಕಾಣಲು ಬಯಸಿದರೆ, ನಟಿಯ ವಾರ್ಡ್ರೋಬ್ ಸಂಗ್ರಹವನ್ನು ನೋಡಿ.

ಎಂಬ್ರಾಯ್ಡರಿ ಸಲ್ವಾರ್ ಸೂಟ್

ಪಾರ್ಟಿ ಲುಕ್‌ಗೆ ದೀಪಿಕಾ ಪಡುಕೋಣೆಯವರ ಈ ಎಂಬ್ರಾಯ್ಡರಿ ಸಲ್ವಾರ್ ಸೂಟ್ ಪರಿಪೂರ್ಣ ಆಯ್ಕೆ. ಇದು ವಿಶಿಷ್ಟ ಲುಕ್‌ನಿಂದ ಕ್ಲಾಸಿಯಾಗಿ ಕಾಣುವಂತೆ ಮಾಡುತ್ತದೆ. 

ಅನಾರ್ಕಲಿ ಕುರ್ತಾ

ದೀಪಿಕಾರಂತೆ ಅನಾರ್ಕಲಿ ಕುರ್ತಾ ಆಯ್ಕೆ ಮಾಡಿ. ನಟಿ  ಇದಕ್ಕೆ ಮ್ಯಾಚಿಂಗ್ ಶ್ರಗ್ ಮತ್ತು ಭಾರವಾದ ಕಿವಿಯೋಲೆ ಧರಿಸಿದ್ದಾರೆ. ಆನ್‌ಲೈನ್‌ನಲ್ಲಿ ಇಂತಹ ಸೂಟ್‌ಗಳು 1 ಸಾವಿರಕ್ಕೆ ಸಿಗುತ್ತದೆ.

ಚಂದೇರಿ ರೇಷ್ಮೆ ಸಲ್ವಾರ್ ಸೂಟ್

ರಾಯಲ್ ಲುಕ್ ಬಗ್ಗೆ ಮಾತನಾಡುವಾಗ, ಚಂದೇರಿ ರೇಷ್ಮೆ ಸಲ್ವಾರ್ ಸೂಟ್‌ಗೆ ಸರಿಸಾಟಿಯಿಲ್ಲ. ನೀವು ಪಾರ್ಟಿ-ಕಾರ್ಯಕ್ರಮಗಳಿಗೆ ಇದನ್ನು ಆರಿಸಿಕೊಳ್ಳಬಹುದು. ಬಜೆಟ್ ಪ್ರಕಾರ 2-3 ಸಾವಿರದಲ್ಲಿ ಇದು ಲಭ್ಯ

ಬನಾರಸಿ ಸಲ್ವಾರ್ ಸೂಟ್

ರೇಷ್ಮೆ ಕುರ್ತಿಯೊಂದಿಗೆ ದೀಪಿಕಾ ಪಡುಕೋಣೆ ಕಾಂಟ್ರಾಸ್ಟ್ ಹೆವಿ ಬನಾರಸಿ ದುಪಟ್ಟಾ ಧರಿಸಿದ್ದಾರೆ. ನೀವು ಹೆಚ್ಚು ಖರ್ಚು ಮಾಡಲು ಬಯಸದಿದ್ದರೆ, ಯಾವುದೇ ಸರಳ ಕುರ್ತಿಯೊಂದಿಗೆ ಈ ಲುಕ್ ಅನ್ನು ಮರುಸೃಷ್ಟಿಸಬಹುದು.

ವೆಲ್ವೆಟ್ ಸಲ್ವಾರ್ ಸೂಟ್

ಚಳಿಗಾಲದಲ್ಲಿ ಸ್ಟೈಲ್ ಅನ್ನು ಕಾಪಾಡಿಕೊಳ್ಳಲು ವೆಲ್ವೆಟ್ ಸಲ್ವಾರ್ ಸೂಟ್‌ಗಿಂತ ಉತ್ತಮ ಆಯ್ಕೆ ಇಲ್ಲ. ದೀಪಿಕಾ ಗಾಢ ಬಣ್ಣ ಆರಿಸಿಕೊಂಡಿದ್ದಾರೆ, ನೀವು 3 ಸಾವಿರದಲ್ಲಿ ಬಗೆ ಬಗೆ ಬಣ್ಣಗಳಲ್ಲಿ ಇದನ್ನು ಆರಿಸಿಕೊಳ್ಳಬಹುದು. 

ಸೀಕ್ವಿನ್ ಸಲ್ವಾರ್ ಸೂಟ್

ದೀಪಿಕಾರಂತೆ ಸೀಕ್ವಿನ್ ಸಲ್ವಾರ್ ಸೂಟ್ ನಿಮ್ಮ ವಾರ್ಡ್ರೋಬ್‌ನಲ್ಲಿ ಸೇರಿಸಿಕೊಳ್ಳಿ. ಇದು ಭಾರವಾಗಿರದೆ ಆಕರ್ಷಕ ಲುಕ್ ನೀಡುತ್ತದೆ. ಕನಿಷ್ಠ ಆಭರಣಗಳು ಮತ್ತು ಹ್ಯಾಂಡ್‌ಬ್ಯಾಗ್‌ನೊಂದಿಗೆ ಮ್ಯಾಚ್ ಮಾಡಬಹುದು.

ಲಕ್ಷ್ಮೀ ಬಾರಮ್ಮ ವೀಕ್ಷಕರ ಫೇವರಿಟ್ ಸುಪ್ರೀತ ಈ ಲುಕ್ ಹೆಂಗಿದೆ?

ಬೋಲ್ಡ್ ಲುಕ್ ಮೂಲಕ ಚಳಿಗಾಲದಲ್ಲೂ ಟೆಂಪ್ರೇಚರ್ ಹೆಚ್ಚಿಸಿದ ಚೈತ್ರಾ ಆಚಾರ್

ಮದುವೆಯಲ್ಲಿ ವಧು ಧರಿಸುವ ಸಾಂಪ್ರದಾಯಿಕ ಶೈಲಿಯ ಕಾಲುಂಗರುಗಳು

ಬಳೆ ಬದಲಾಗಿ ಈ ರೀತಿಯ ಬ್ರಾಸ್ಲೈಟ್ ಧರಿಸಿ ಸ್ಟೈಲ್ ಐಕಾನ್ ಆಗಿರಿ