Entertainment
ಮಾಟ ಮಂತ್ರದ ಬಗ್ಗೆ ಆಸಕ್ತಿಯಿರುವವರಿಗೆ ಖಂಡಿತವಾಗಿ ಇಷ್ಟವಾಗುವ ಬುಕ್. ಪಟ್ಟುಬಿಡದಂತೆ ಓದಿಸಿಕೊಂಡು ಹೋಗುವ ರಘು ವೆಂಕಟಾಚಲಯ್ಯ ಅವರ ಕಾದಂಬರಿ.
ವಜ್ರೋಲಿ, ವಿಶೂಚಿ, ಪ್ರಹರಿ, ಖೇಚರಿ, ವರ್ಣ ವಿದ್ಯಾ ಪ್ರಯೋಗ, ಕರ್ಣ ಪಿಶಾಚಿ ಮತ್ತು ಅಘೋರ ಲೋಕದ ಹಲವಾರು ಅಂಶಗಳು ಇದರಲ್ಲಿ ಸಿಗುತ್ತದೆ. ರವಿ ಬೆಳಗೆರೆ ಅವರ ಪುಸ್ತಕ.
ಒಟ್ಟಾರೆಯಾಗಿ ಒಂದು ಚಿಕ್ಕ-ಚೊಕ್ಕ ಹಾರರ್ ಸಿನಿಮಾ ನೋಡಿದ ಅನುಭವ. ಓದಿ ಮಲಗಿದರೆ ಕನಸಲ್ಲಿ ಕರಡಿ ಬರೋದು ಗ್ಯಾರಂಟಿ. ಗುರುರಾಜ ಕೊಡ್ಕಣಿ ಅವರ ಕಾದಂಬರಿ.
ಇಲ್ಲಿ ಬರುವ ಎಲ್ಲಾ ಕಥೆಗಳು ಪತ್ತೇದಾರಿ ಕಥೆಗಳು ಅನ್ನುವ ಬದಲು, ಥ್ರಿಲ್ಲರ್ ಕಥೆಗಳು ಎನ್ನಬಹುದು. ವಾಸುದೇವ್ ಮೂರ್ತಿ ಅವರ ಕೃತಿ.
ಸರ್ಪದ ಮೇಲೆ ಚ್ಯುತಿ ಬರದಂತೆ ಇಂಚಿಂಚು ಸಾರಾ ಸಗಟಾಗಿ ವಿವರಿಸಿ, ಪುಸ್ತಕದ ಪುಟ ಪುಟದಲ್ಲೂ ತಿರುವು ಹೊಂದಿರುವ ಕಾದಂಬರಿ. ಅಗ್ನಿನಾಥನಂತಹ ಅಘೋರಿ ಸಾಧಕನನ್ನು ರವಿ ಬೆಳಗೆರೆ ಅದ್ಭುತವಾಗಿ ಚಿತ್ರಿಸಿದ್ದಾರೆ.
ತಾನೇನೂ ಮಾಡದಿದ್ದರೂ, ಪರರ ಮೋಜಿಗಾಗಿ ಪ್ರಾಣ ಕಳೆದುಕೊಂಡು ಪ್ರತೀಕಾರದ ಜಿದ್ದಿಗೆ ಬಿದ್ದ ಆತ್ಮದ ಕತೆ ಇದು. ಧೀರಜ್ ಪೊಯ್ಯೆಕಂಡ ಕಾದಂಬರಿ.
ಅತಿರೇಕವನ್ನು ಮುಖಕ್ಕೆ ಎರಚದೆ, ರೋಚಕತೆಗೆ ಒಂದೊಳ್ಳೆ ಓದಿಗೆ ಏನೇನು ಬೇಕೋ ಎಲ್ಲವನ್ನೂ ಈ ಬುಕ್ ನೀಡುತ್ತದೆ. ಗೌತಮ್ ಬೆಂಗಳೆ ಅವರ ಕಾದಂಬರಿ.
ಚಿಕ್ಕ ಹುಡುಗಿಯ ಮೇಲೆ ಕ್ಷುದ್ರವಿದ್ಯೆ ಪ್ರಯೋಗವಾಗಿದೆಯೆಂದು ಉಳಿಸಿಕೊಳ್ಳುವ ಹೋರಾಟ, ವೈಜ್ಞಾನಿಕ ಪರಿಹಾರದ ಪ್ರಯತ್ನದ ಕಥೆ. ಯಂಡಮೂರಿ ವೀರೇಂದ್ರನಾಥ್ ಕಾದಂಬರಿಯನ್ನು ಕನ್ನಡಕ್ಕೆ ವಂಶಿ ಅನುವಾದ ಮಾಡಿದ್ದಾರೆ.
ಹಾರರ್ ಅನುಭವಗಳು, ಪ್ಯಾರಾನಾರ್ಮಲ್ ಶಕ್ತಿಗಳು, ಮನಸ್ಸನ್ನು ಆವರಿಸಿಕೊಳ್ಳುವ ಪಾತ್ರಗಳಿರುವ ಕಾದಂಬರಿ. ರಮೇಶ್ ಶೆಟ್ಟಿಗಾರ್ ಮಂಜೇಶ್ವರ ಅವರ ಪುಸ್ತಕ
ಆರೇಳು ದೆವ್ವದ ಕತೆಗಳು, ಒಂದೆರಡು ಬೇಟೆಯ ಕತೆಗಳು, ಹಾಗೆ ಒಂದಿಷ್ಟು ಕತೆಗಳು ಸೇರಿ ಆಗಿರುವ ಪುಸ್ತಕ. ಜೋಗಿ ಅವರ ಹಾರರ್ ಕಥೆಗಳು ಇಷ್ಟವಾಗದಿದ್ದರೆ ಕೇಳಿ.
ಈಗ ನಿಮಗೆ ದೆವ್ವ ಪಿಶಾಚಿಗಳು ಸಿಗುವುದು ಈ ಪುಸ್ತಕದಲ್ಲಿ ಮಾತ್ರ ಬೆನ್ನುಡಿಯಲ್ಲಿ ಜೋಗಿ ಬರೆದ ಹಾಗೆ ಪುಸ್ತಕದ ಅಂಶಗಳಿವೆ. ಓದಿಸಿಕೊಂಡು ಹೋಗುವ ಕೃತಿ.