Entertainment

ಭಿತ್ತಿ

ಎಸ್‌ಎಲ್‌ ಭೈರಪ್ಪ ಅವರ ಬಾಲ್ಯ, ಓದುವುದಕ್ಕಾಗಿ ಸಹಿಸಿದ ಕಷ್ಟಗಳು, ಅಧ್ಯಯನಶೀಲತೆ, ಸಾಹಿತ್ಯದ ತುಡಿತ, ಸಂಗೀತದ ಆಸಕ್ತಿ, ಅವರ ಜೀವನವನ್ನು ಆಧರಿಸಿದ ಪುಸ್ತಕ.
 

Image credits: our own

ಪರ್ವ

ವ್ಯಾಸ ಮಹರ್ಷಿಗಳ ‘ಮಹಾಭಾರತ’ವನ್ನು ಆಧಾರವಾಗಿಟ್ಟುಕೊಂಡು  ರಚಿತವಾಗಿರುವ ಕಾದಂಬರಿ ‘ಪರ್ವ’. ಯಾವುದೋ ಕಾಲದ ವ್ಯಕ್ತಿಗಳು ನಮ್ಮ ತೀರಾ ಹತ್ತಿರದವರಾಗಿ ಕಾಣುವ ಶ್ರೇಷ್ಠ ಕೃತಿ.

Image credits: our own

ದೂರ ಸರಿದರು

ಮೈಸೂರಿನ ಒಂದು ಕಾಲೇಜಿನ ಸಾಹಿತ್ಯ ಹಾಗೂ ತತ್ವಶಾಸ್ತ್ರ ವಿದ್ಯಾರ್ಥಿಗಳ ಪ್ರೇಮಕಥೆಗಳನ್ನು ಒಳಗೊಂಡ ಕಾದಂಬರಿ. ಓದಿದಾಗ ಖುಷಿ ಸಿಗುವ ಕಾದಂಬರಿ.
 

Image credits: our own

ಯಾನ

ಇಬ್ಬರು ಗಗನಯಾತ್ರಿಗಳು ಬಾಹ್ಯಾಕಾಶ ನೌಕೆಯಲ್ಲಿ ಭೂಮಿಗೆ ಸಮೀಪವಿರುವ ನಕ್ಷತ್ರವಾದ ಪ್ರಾಕ್ಸಿಮಾ ಸೆಂಟೌರಿಗೆ ಪ್ರಯಾಣಿಸುವ ಕಥೆಯನ್ನು ಹೊಂದಿದೆ. ವೈಜ್ಞಾನಿಕ ಮಾದರಿಯ ಕಾದಂಬರಿ.

Image credits: our own

ಜಲಪಾತ

ಬುದ್ಧಿವಂತಿಕೆ ಮತ್ತು ತಾತ್ವಿಕ ಚಿಂತನೆಗಳಿಂದ ತುಂಬಿರುವ ಕೃತಿ.ಜನ್ಮ, ಮದುವೆ ಮತ್ತು ಸಂತಾನದಂತಹ ವಿಷಯಗಳ ಚರ್ಚೆಯನ್ನು ಹುಟ್ಟುಹಾಕುತ್ತದೆ.

Image credits: our own

ತಬ್ಬಲಿಯು ನೀನಾದೆ ಮಗನೆ

ಗೋವನ್ನು ಸರ್ವದೇವತೆಗಳ ಸ್ವರೂಪವೆಂದು ಪೂಜಿಸುವ ಕಾಳಿಂಗಜ್ಜ, ಅದು ಹಾಲು ಮಾಂಸ ಎಂದಷ್ಟೇ ಭಾವಿಸುವ ಮೊಮ್ಮಗನ ನಡುವಿನ ಸಂವೇದನೆಯ ತಿಕ್ಕಾಟದ ಕಥೆ.

Image credits: our own

ಸಾರ್ಥ

ಕ್ರಿ .ಶ. ಎಂಟನೆಯ  ಶತಮಾನದ  ಭರತಖಂಡದಲ್ಲಿ ನಡೆಯಿತೆಂದು  ಕಲ್ಪಿಸಿಕೊಳ್ಳಬೇಕಾದ  ಸಂಗತಿಗಳನ್ನಾಧರಿಸಿದ  ಕಾದಂಬರಿ.ದೇಶದ ಸ್ಥಿತ್ಯಂತರ  ಅವಧಿಯ ಅಪೂರ್ವ ಅನುಭವ ಮತ್ತು ಪಾತ್ರಗಳು ಒಡಮೂಡಿವೆ.
 

Image credits: our own

ನಾನೇಕೆ ಬರೆಯುತ್ತೇನೆ

ಎಸ್.ಎಲ್. ಭೈರಪ್ಪನವರ ಲೇಖನ ಹಾಗೂ ಭಾಷಣಗಳ ಸಂಕಲನ. ಭೈರಪ್ಪನವರ ಕಾದಂಬರಿಗಳ ಬಗ್ಗೆ ಅನಿಸಿಕೆಗಳು ಮೂಡುವ ಮುನ್ನ ಈ ಪುಸ್ತಕವನ್ನು ಓದಲೇಬೇಕು.

Image credits: our own

ನಾಯಿ ನೆರಳು

ದೇವರು ದಿಂಡರು, ಸಾಧು ಸಂತರು ನಿಜವೋ ಸುಳ್ಳು ಅನ್ನೋದು ನಿಮ್ಮನ್ನ ನೀವೇ ಪ್ರಶ್ನಸಿಕೊಳ್ಳೋ ಹಾಗೆ ಮಾಡುವ ಕಾದಂಬರಿ. ಸಿನಿಮಾವಾಗಿಯೂ ಗಮನಸೆಳೆದಿದೆ.

Image credits: our own

ಕಥೆ ಮತ್ತು ಕಥಾವಸ್ತು

ಸಾಹಿತ್ಯದಲ್ಲಿ ಐತಿಹಾಸಿಕ ಮತ್ತು ಸಮಕಾಲೀನತೆ, ಮೌಲ್ಯ ಸ್ವರೂಪ ಮತ್ತು ಸಾಹಿತ್ಯ ಹಾಗೂ ಕತೆ ಮತ್ತು ಕಥಾವಸ್ತು ಎಂಬ ಮೂರು ಮುಖ್ಯ ವಿಚಾರಗಳನ್ನು ಈ ಪುಸ್ತಕದಲ್ಲಿ ವಿವರಿಸಿದ್ದಾರೆ.

Image credits: our own
Find Next One