ಖ್ಯಾತ ನಟಿ ಸುಧಾ ಬೆಳವಾಡಿ ಜನ್ಮದಿನಕ್ಕೆ ಮಗಳು ಸಂಯುಕ್ತಾ ಹೊರನಾಡ್ ಮರೆಯಲಾರದ ಗಿಫ್ಟ್ ನೀಡಿದ್ದಾರೆ.
Image credits: samyuktha hornad instagram
ತಂದೆ-ತಾಯಿ ಯಾರು?
ನಟಿ ಭಾರ್ಗವಿ ಹಾಗೂ ಬೆಳವಾಡಿ ನಂಜುಂಡಯ್ಯ ನಾರಾಯಣನ್ ಅವರ ಪುತ್ರಿ ಸುಧಾ ಈಗಾಗಲೇ ಎಪ್ಪತ್ತಕ್ಕೂ ಅಧಿಕ ಸಿನಿಮಾಗಳು, ಧಾರಾವಾಹಿಗಳಲ್ಲಿ ನಟಿಸಿದ್ದಾರೆ.
Image credits: samyuktha hornad instagram
ಪತಿ ಯಾರು?
ಸುಧಾ ಬೆಳವಾಡಿ ಅವರು ಎಂಜಿ ಸತ್ಯ ರಾವ್ ಅವರನ್ನು ಮದುವೆಯಾಗಿದ್ದಾರೆ. ಈ ಜೋಡಿಗೆ ಶಂತನು, ಸಂಯುಕ್ತಾ ಎಂಬ ಮಕ್ಕಳಿದ್ದಾರೆ.
Image credits: samyuktha hornad instagram
ಜನ್ಮದಿನದ ವಿಶೇಷ
ಸಂಯುಕ್ತಾ ಹೊರನಾಡ್ ಅವರು ಸಿನಿ ರಂಗದಲ್ಲಿ ತಾಯಿ ಜೊತೆಗೆ ಕೆಲಸ ಮಾಡಿದ ಗಣ್ಯರ ಕಾಂಟ್ಯಾಕ್ಟ್ ಮಾಡಿ ವಿಶೇಷ ವಿಡಿಯೋ ಮಾಡಿ ತಾಯಿಗೆ ಜನ್ಮದಿನದ ಶುಭಾಶಯ ತಿಳಿಸಿದ್ದಾರೆ.
Image credits: samyuktha hornad instagram
ಕಪಿಲ್ ದೇವ್
ಅಂದಹಾಗೆ ಮಾಜಿ ಕ್ರಿಕೆಟಿಗ ಕಪಿಲ್‌ದೇವ್ ಅವರು ಸುಧಾ ಬೆಳವಾಡಿಗೆ ಶುಭಾಶಯ ತಿಳಿಸಿದ್ದಾರೆ. ಅಷ್ಟೇ ಅಲ್ಲದೆ ಈ ಸಂದರ್ಭದಲ್ಲಿ ದಕ್ಷಿಣ ಭಾರತದ ಕಾಫಿ, ಇಡ್ಲಿ, ದೋಸೆಯನ್ನು ಕೂಡ ನೆನಪು ಮಾಡಿಕೊಂಡಿದ್ದಾರೆ.
Image credits: samyuktha hornad instagram
ಚಿತ್ರರಂಗದ ಗಣ್ಯರು
ನಿರ್ದೇಶಕ ಆಶುತೋಷ್ ಗೋವಾರಿಕರ್, ನಿರ್ದೇಶಕ ಯೋಗರಾಜ್ ಭಟ್, ಗೋಲ್ಡನ್‌ಸ್ಟಾರ್ ಗಣೇಶ್, ತೇಜಸ್ವಿ ಸೂರ್ಯ, ಪ್ರಿಯಾ ಸುದೀಪ್, ಡಾರ್ಲಿಂಗ್ ಕೃಷ್ಣ, ಪ್ರಕಾಶ್ ರಾಜ್ ಶುಭಾಶಯ ತಿಳಿಸಿದ್ದಾರೆ.
Image credits: samyuktha hornad instagram
ಕಿಚ್ಚ ಸುದೀಪ್
ನಟ ಕಿಚ್ಚ ಸುದೀಪ್ ಅವರು ಮಾತನಾಡಿ, "ಈ ವಿಡಿಯೋ ಮಾಡಲು ನಿಮ್ಮ ಮಗಳ ಪ್ರಯತ್ನವೇ ಕಾರಣ. ನೀವು ಯಾವಾಗಲೂ ಚೆಂದದ ನಗು ಇಟ್ಟುಕೊಂಡಿರ್ತೀರಿ. ಇದು ನಮಗೆ ಸ್ಫೂರ್ತಿ ಕೊಡುತ್ತದೆ" ಎಂದಿದ್ದಾರೆ.