Education

ಅರವಿಂದ್ ಕೇಜ್ರಿವಾಲ್ ಪುತ್ರಿ ಹರ್ಷಿತಾ ಪ್ರತಿಭಾವಂತೆ

ಡೆಲ್ಲಿ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮಗಳು ಹರ್ಷಿತಾ ತುಂಬಾ ಪ್ರತಿಭಾವಂತೆ

ವಿದ್ಯಾಭ್ಯಾಸದಿಂದ ವೃತ್ತಿಪರ ಜೀವನದವರೆಗೆ

ಅರವಿಂದ್ ಕೇಜ್ರಿವಾಲ್ & ಸುನೀತಾ ಕೇಜ್ರಿವಾಲ್ ಅವರ ಪುತ್ರಿ ಹರ್ಷಿತಾ ವಿದ್ಯಾಭ್ಯಾಸದಿಂದ ವೃತ್ತಿಪರ ಜೀವನದವರೆಗೆ ಪ್ರತಿ ಹಂತದಲ್ಲೂ ಕುಟುಂಬದ ಹೆಸರನ್ನು ಉಜ್ವಲಗೊಳಿಸಿದ್ದಾರೆ. 

ಹರ್ಷಿತಾ ಕೇಜ್ರಿವಾಲ್ 10ನೇ, 12ನೇ ತರಗತಿಯ ಅಂಕಗಳು

ಹರ್ಷಿತಾ ದೆಹಲಿ ಪಬ್ಲಿಕ್ ಸ್ಕೂಲ್, ನೋಯ್ಡಾದಲ್ಲಿ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದರು. 10ನೇ ತರಗತಿಯಲ್ಲಿ 98% ಅಂಕ ಹಾಗೂ 12ನೇ ತರಗತಿಯಲ್ಲಿಯೂ 96% ಅಂಕಗಳೊಂದಿಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ.

ಹರ್ಷಿತಾ ಪಿಯು ಸಾಧನೆ

12ನೇ ತರಗತಿಯಲ್ಲಿ ಭೌತಶಾಸ್ತ್ರದಲ್ಲಿ 99%, ರಸಾಯನಶಾಸ್ತ್ರ & ಇಂಗ್ಲಿಷ್‌ನಲ್ಲಿ 96%, ಗಣಿತದಲ್ಲಿ 95% ಮತ್ತು ಕಂಪ್ಯೂಟರ್ ಸೈನ್ಸ್‌  94% ಅಂಕಗಳನ್ನು ಗಳಿಸಿದರು.

ಐಐಟಿ ದೆಹಲಿಯಿಂದ ಬಿ.ಟೆಕ್ ಪದವಿ ಪಡೆದ ಹರ್ಷಿತಾ

ಹರ್ಷಿತಾ ರಾಸಾಯನಿಕ ಎಂಜಿನಿಯರಿಂಗ್‌ನಲ್ಲಿ ಬಿ.ಟೆಕ್ ಪದವಿಯನ್ನು ಐಐಟಿ ದೆಹಲಿಯಿಂದ ಪಡೆದರು. ಹರ್ಷಿತಾ ತಮ್ಮ ಬ್ಯಾಚ್‌ನ ಪ್ರತಿಭಾವಂತ ವಿದ್ಯಾರ್ಥಿಗಳಲ್ಲಿ ಒಬ್ಬರಾಗಿದ್ದರು ಅಲ್ಲದೇ ಟಾಪರ್ ಆಗಿ ಹೊರಹೊಮ್ಮಿದರು.

ಹರ್ಷಿತಾ ಕೇಜ್ರಿವಾಲ್ ವೃತ್ತಿಜೀವನ

ತಮ್ಮ ವಿದ್ಯಾಭ್ಯಾಸದ ಸಮಯದಲ್ಲಿಯೇ ಹರ್ಷಿತಾ ಅವರಿಗೆ ಹಲವಾರು ಬಹುರಾಷ್ಟ್ರೀಯ ಕಂಪನಿಗಳಿಂದ ಉದ್ಯೋಗದ ಪ್ರಸ್ತಾಪಗಳು ಬಂದವು. ಅವರು ತಮ್ಮ ಪ್ರತಿಭೆಯಿಂದ ಒಂದು ಪ್ರತಿಷ್ಠಿತ ಕಂಪನಿಯಲ್ಲಿ ಎಂಜಿನಿಯರ್ ಆಗಿ ಸ್ಥಾನ ಪಡೆದರು.

ಹರ್ಷಿತಾ ಕೇಜ್ರಿವಾಲ್ ಆರೋಗ್ಯ ಬ್ರ್ಯಾಂಡ್ ಬೇಸಿಲ್‌ನ ಸಹ-ಸಂಸ್ಥಾಪಕಿ

ಹರ್ಷಿತಾ ಕೇಜ್ರಿವಾಲ್ ಪ್ರಸ್ತುತ ಗುರುಗ್ರಾಮದಲ್ಲಿ ಬೋಸ್ಟನ್ ಕನ್ಸಲ್ಟಿಂಗ್ ಗ್ರೂಪ್‌ನಲ್ಲಿ ಸಹಾಯಕ ಸಲಹೆಗಾರ್ತಿಯಾಗಿದ್ದಾರೆ. ಜೊತೆಗೆ ಆರೋಗ್ಯ ಬ್ರ್ಯಾಂಡ್ ಬೇಸಿಲ್‌ನ ಸಹ-ಸಂಸ್ಥಾಪಕಿಯೂ ಆಗಿದ್ದಾರೆ.

ಹರ್ಷಿತಾ ಕೇಜ್ರಿವಾಲ್‌ಗೆ ನೃತ್ಯದ ಹವ್ಯಾಸ

ವಿದ್ಯಾಭ್ಯಾಸದ ಜೊತೆಗೆ ಹರ್ಷಿತಾ ನೃತ್ಯದಲ್ಲೂ ಆಸಕ್ತಿ ಹೊಂದಿದ್ದಾರೆ. ಅವರು ಹಲವಾರು ನೃತ್ಯ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಅವರು ಒಡಿಸ್ಸಿ ನರ್ತಕಿಯಾಗಿ ತರಬೇತಿ ಪಡೆದುಕೊಂಡಿದ್ದಾರೆ .

ಫ್ರೆಂಚ್ ಭಾಷೆ ಮಾತನಾಡುವ ಹರ್ಷಿತಾ ಕೇಜ್ರಿವಾಲ್

ಹರ್ಷಿತಾ ಕೇಜ್ರಿವಾಲ್ ನಿರರ್ಗಳವಾಗಿ ಫ್ರೆಂಚ್ ಭಾಷೆ ಮಾತನಾಡಬಲ್ಲರು. ಎಲ್ಲಾ ಸಾಧನೆಗಳ ಹೊರತಾಗಿಯೂ ಅವರು ಕುಟುಂಬದೊಂದಿಗೆ ಆಳವಾದ ಸಂಬಂಧವನ್ನು ಹೊಂದಿದ್ದಾರೆ.

ಪುತ್ರಿಯ ಬಗ್ಗೆ ಹೆಮ್ಮೆಪಡುವ ಅರವಿಂದ್ ಕೇಜ್ರಿವಾಲ್

ಅರವಿಂದ್ ಕೇಜ್ರಿವಾಲ್ ಒಂದು ಸಂದರ್ಶನದಲ್ಲಿ ಹರ್ಷಿತಾ ಅವರ ಶ್ರಮ ಮತ್ತು ಯಶಸ್ಸು ಯಾವಾಗಲೂ ತಮಗೆ ಸ್ಫೂರ್ತಿ ನೀಡುತ್ತದೆ ಎಂದು ಹೇಳಿದ್ದರು. ಅವರು ತಮ್ಮ ಪುತ್ರಿಯ ಸರಳತೆ ಮತ್ತು ಸ್ವಾವಲಂಬನೆಯ ಬಗ್ಗೆ ಹೆಮ್ಮೆಪಡುತ್ತಾರೆ.

ಶಿಕ್ಷಣ ಕಡಿಮೆ ಇದ್ರೂ ಬಾಲಿವುಡ್ ಆಳಿದ ನಟ ನಟಿಯರಿವರು

ಭಾರತದಲ್ಲಿರುವ ಮುಸ್ಲಿಂ ವಿಶ್ವವಿದ್ಯಾಲಯಗಳು ಇವು

ಈ ಪ್ರಶ್ನೆಗಳಿಗೆ ಉತ್ತರಿಸಿದರೆ ನೀವು ಬುದ್ಧೀವಂತೆರೆಂದೇ ಅರ್ಥ

ಗ್ರಾಮದ ಹೆಮ್ಮೆ ಪ್ರಿಯಾ ರಾಣಿ: UPSC ಯಶೋಗಾಥೆ