ಟೀಂ ಇಂಡಿಯಾ ವೇಗಿ ಕಳೆದ ಅಕ್ಟೋಬರ್‌ನಲ್ಲಿ ತೆಲಂಗಾಣ DSP ಆಗಿ ಅಧಿಕಾರ ಸ್ವೀಕರಿಸಿದ್ದಾರೆ.
cricket-sports Feb 01 2025
Author: Naveen Kodase Image Credits:instagram own
Kannada
ದೀಪ್ತಿ ಶರ್ಮಾ ಹೊಸ ಡಿಎಸ್‌ಪಿ
ಸಿರಾಜ್ ಬಳಿಕ ಇದೀಗ ಭಾರತದ ಅನುಭವಿ ಮಹಿಳಾ ಕ್ರಿಕೆಟರ್ ದೀಪ್ತಿ ಶರ್ಮಾ ಅವರಿಗೆ ಉತ್ತರ ಪ್ರದೇಶ ಪೊಲೀಸ್‌ನಲ್ಲಿ ಮಹತ್ವದ ಹುದ್ದೆ ಹೆಗಲೇರಿದೆ.
Image credits: Social media
Kannada
DSP ಯೂನಿಫಾರಂನಲ್ಲಿ ದೀಪ್ತಿ
ದೀಪ್ತಿ ಶರ್ಮಾ ಯುಪಿ ಪೊಲೀಸ್‌ನಲ್ಲಿ DSP ಆಗಿ ಅಧಿಕಾರ ಸ್ವೀಕರಿಸಿದ್ದಾರೆ. DSP ಯೂನಿಫಾರಂ ತೊಟ್ಟಿರುವ ಫೋಟೋಗಳನ್ನು ದೀಪ್ತಿ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.
Image credits: Social Media
Kannada
ಕುಟುಂಬಕ್ಕೆ ಧನ್ಯವಾದ
ನನಗೆ ಈ ಹುದ್ದೆ ನೀಡಿದ್ದಕ್ಕೆ ನಾನು ಆಭಾರಿಯಾಗಿದ್ದೇನೆ. ನನ್ನ ಕುಟುಂಬಕ್ಕೆ ತುಂಬು ಹೃದಯದ ಧನ್ಯವಾದಗಳನ್ನು ಹೇಳುತ್ತೇನೆ ಅವರ ಸಹಕಾರದಿಂದಲೇ ನಾನು ಈ ಹಂತಕ್ಕೇರಿದ್ದೇನೆ ಎಂದಿದ್ದಾರೆ.
Image credits: Social media
Kannada
ಯುಪಿ ಸರ್ಕಾರಕ್ಕೆ ಆಭಾರಿ
ಈ ಅವಕಾಶ ನೀಡಿದ ಉತ್ತರಪ್ರದೇಶ ಸರ್ಕಾರಕ್ಕೂ ನಾನು ಆಭಾರಿಯಾಗಿದ್ದೇನೆ. ಯುಪಿ ಪೊಲೀಸ್‌ನಲ್ಲಿ DSP ಆಗಿ ಸಮರ್ಪಣ ಭಾವದಿಂದ ಕರ್ತವ್ಯ ನಿಭಾಯಿಸುತ್ತೇನೆ ಎಂದು ಶಪಥ ಮಾಡಿದ್ದಾರೆ.
Image credits: Social Media
Kannada
ಸ್ಟಾರ್ ಆಲ್ರೌಂಡರ್ ದೀಪ್ತಿ
ದೀಪ್ತಿ ಶರ್ಮಾ ಭಾರತ ಮಹಿಳಾ ತಂಡದ ಪರ ಇದುವರೆಗೂ 5 ಟೆಸ್ಟ್ 101 ಏಕದಿನ ಹಾಗೂ 124 ಟಿ20 ಪಂದ್ಯಗಳನ್ನಾಡಿದ್ದಾರೆ.
Image credits: Social Media
Kannada
5 ಟೆಸ್ಟ್ ಆಡಿರುವ ದೀಪ್ತಿ
ಮಹಿಳಾ ಟೆಸ್ಟ್‌ನಲ್ಲಿ ದೀಪ್ತಿ ಶರ್ಮಾ 63.80ರ ಬ್ಯಾಟಿಂಗ್ ಸರಾಸರಿಯಲ್ಲಿ 319 ರನ್ ಗಳಿಸಿದ್ದಾರೆ. ಜತೆಗೆ 20 ವಿಕೆಟ್ ಕೂಡಾ ಕಬಳಿಸಿದ್ದಾರೆ.
Image credits: Getty
Kannada
ಏಕದಿನ ಮಾದರಿಯಲ್ಲೂ ಶೈನ್
ಮಹಿಳಾ ಏಕದಿನ ಕ್ರಿಕೆಟ್‌ನಲ್ಲಿ 34.74ರ ಬ್ಯಾಟಿಂಗ್ ಸರಾಸರಿಯಲ್ಲಿ 2,154 ರನ್ ಹಾಗೂ 130 ವಿಕೆಟ್ ಕಬಳಿಸಿದ್ದಾರೆ.
Image credits: Getty
Kannada
ಟಿ20 ಕ್ರಿಕೆಟ್‌ನಲ್ಲಿ ದೀಪ್ತಿ ಖದರ್
ಇನ್ನು ಮಹಿಳಾ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ 23.60ರ ಬ್ಯಾಟಿಂಗ್ ಸರಾಸರಿಯಲ್ಲಿ 1086 ರನ್ ಹಾಗೂ 138 ವಿಕೆಟ್ ಕಬಳಿಸಿದ್ದಾರೆ.
Image credits: Getty
Kannada
ಆಗ್ರಾದಲ್ಲಿ ಜನನ
1997ರ ಆಗಸ್ಟ್ 24ರಂದು ಆಗ್ರಾದಲ್ಲಿ ಜನಿಸಿದ ದೀಪ್ತಿ, WPL ಟೂರ್ನಿಯಲ್ಲಿ ಯುಪಿ ವಾರಿಯರ್ಸ್ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ.