Cricket

ಭಾರತ-ವೆಸ್ಟ್ ಇಂಡೀಸ್ ಸರಣಿ

ಜುಲೈ 12ರಿಂದ ಭಾರತ ತಂಡವು ವೆಸ್ಟ್ ಇಂಡೀಸ್ ಎದುರು ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನಾಡಲಿದೆ.

Image credits: Getty

ಶತಕದ ಬರ ಎದುರಿಸುತ್ತಿರುವ ಕೊಹ್ಲಿ

ಈ ಸರಣಿಯು ವಿರಾಟ್ ಕೊಹ್ಲಿ ಪಾಲಿಗೆ ವಿದೇಶಿ ನೆಲದಲ್ಲಿ ಶತಕದ ಬರ ನೀಗಿಸಿಕೊಳ್ಳಲು ಸಿಕ್ಕ ಸುವರ್ಣಾವಕಾಶವಾಗಿದೆ.
 

Image credits: Getty

2018ರ ಕೊನೆಯ ಟೆಸ್ಟ್ ಶತಕ

2018ರ ಡಿಸೆಂಬರ್‌ನಿಂದೀಚೆಗೆ ವಿರಾಟ್ ಕೊಹ್ಲಿ, ವಿದೇಶಿ ಪಿಚ್‌ನಲ್ಲಿ ಟೆಸ್ಟ್ ಶತಕ ಸಿಡಿಸಲು ವಿಫಲವಾಗುತ್ತಲೇ ಬಂದಿದ್ದಾರೆ.

Image credits: Getty

ಪರ್ತ್‌ನಲ್ಲಿ ಲಾಸ್ಟ್ ಸೆಂಚುರಿ

2018ರ ಡಿಸೆಂಬರ್‌ನಲ್ಲಿ ಆಸ್ಟ್ರೇಲಿಯಾ ಎದುರು ಪರ್ತ್‌ನಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ 123 ರನ್ ಸಿಡಿಸಿದ್ದರು.

Image credits: Getty

ಮೂರಂಕಿ ದಾಖಲಿಸಲು ಫೇಲ್

ಇದಾದ ಬಳಿಕ ವಿರಾಟ್ ಕೊಹ್ಲಿ 70 ರನ್‌ಗೆ ಮೂರು ಬಾರಿ ಹಾಗೂ 80 ರನ್‌ಗೆ ಒಂದು ಬಾರಿ ಟೆಸ್ಟ್ ಕ್ರಿಕೆಟ್‌ನಲ್ಲಿ ವಿಕೆಟ್ ಒಪ್ಪಿಸಿದ್ದಾರೆ.

Image credits: Getty

ಕೇಪ್‌ಟೌನ್‌ನಲ್ಲಿ ಲಾಸ್ಟ್‌ ಫಿಫ್ಟಿ

ಇನ್ನು ವಿರಾಟ್ ಕೊಹ್ಲಿ 2022ರ ಜನವರಿಯಲ್ಲಿ ಕೇಪ್‌ಟೌಟ್‌ನಲ್ಲಿ ದಕ್ಷಿಣ ಆಫ್ರಿಕಾ ಎದುರು 79 ರನ್ ಬಾರಿಸಿದ್ದರು.
 

Image credits: Getty

ಟೆಸ್ಟ್‌ ವಿಶ್ವಕಪ್‌ನಲ್ಲೂ ಫೇಲ್

ವಿರಾಟ್ ಕೊಹ್ಲಿ ಕೊನೆಯದಾಗಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ ಪಂದ್ಯವನ್ನಾಡಲು ವಿದೇಶಿ ಪ್ರವಾಸ ಮಾಡಿದ್ದರು.
 

Image credits: Getty

ಟೆಸ್ಟ್ ವಿಶ್ವಕಪ್‌

ಲಂಡನ್‌ನ ದಿ ಓವಲ್‌ ಮೈದಾನದಲ್ಲಿ ಆಸ್ಟ್ರೇಲಿಯಾ ಎದುರು ಟೆಸ್ಟ್ ವಿಶ್ವಕಪ್ ಫೈನಲ್‌ನಲ್ಲಿ ಕೊಹ್ಲಿ, ಕ್ರಮವಾಗಿ 14 ಹಾಗೂ 49 ರನ್ ಬಾರಿಸಿ ವಿಕೆಟ್ ಒಪ್ಪಿಸಿದ್ದರು.

Image credits: Getty
Find Next One