Cricket
ಭಾರತೀಯ ಮಹಿಳಾ ತಂಡದ ಆಟಗಾರ್ತಿ ಹರ್ಲೀನ್ ಡಿಯೋಲ್ ವೆಸ್ಟ್ ಇಂಡೀಸ್ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಅಬ್ಬರದ ಶತಕ ಸಿಡಿಸಿದರು.
ಹರ್ಲೀನ್ ಡಿಯೋಲ್ ಕೇವಲ 103 ಎಸೆತಗಳಲ್ಲಿ 115 ರನ್‌ಗಳ ಭರ್ಜರಿ ಇನ್ನಿಂಗ್ಸ್ ಆಡಿದರು. ಈ ವೇಳೆ ಅವರು 16 ಬೌಂಡರಿ ಬಾರಿಸಿದ್ದಾರೆ.
ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದ ಹರ್ಲೀನ್ ಡಿಯೋಲ್, ಜೆಮಿಮಾ ರೋಡ್ರಿಗಸ್ ಜೊತೆ ಉತ್ತಮ ಜೊತೆಯಾಟ ನೀಡಿದರು. ಜೆಮಿಮಾ ಕೇವಲ 36 ಎಸೆತಗಳಲ್ಲಿ 52 ರನ್ ಗಳಿಸಿದರು.
ಹರ್ಲೀನ್ ಅವರ ಅದ್ಭುತ ಇನ್ನಿಂಗ್ಸ್‌ನಿಂದಾಗಿ ಟೀಂ ಇಂಡಿಯಾ 50 ಓವರ್‌ಗಳಲ್ಲಿ 358 ರನ್ ಗಳಿಸಿತು. ಪ್ರತೀಕಾ ರಾವಲ್ 76, ಸ್ಮೃತಿ ಮಂಧಾನ 53 ರನ್ ಕೊಡುಗೆ ನೀಡಿದರು.
ಹರ್ಲೀನ್ ಕೌರ್ ಮಹಿಳಾ ತಂಡದ ಪ್ರಮುಖ ಆಟಗಾರ್ತಿ. ಅವರು ತಮ್ಮ ಏಕದಿನ ವೃತ್ತಿಜೀವನದಲ್ಲಿ ಇಲ್ಲಿಯವರೆಗೆ 15 ಪಂದ್ಯಗಳಲ್ಲಿ 436 ರನ್ ಗಳಿಸಿದ್ದಾರೆ.
ಇದೇ ಪಂದ್ಯದಲ್ಲಿ ಕ್ಯಾಪ್ಟನ್ ಹರ್ಮನ್‌ಪ್ರೀತ್ ಕೌರ್ 22 ರನ್ ಗಳಿಸಿದರೆ, ರಿಚಾ ಘೋಷ್ ತಂಡಕ್ಕೆ 13 ರನ್‌ಗಳ ಕೊಡುಗೆ ನೀಡಿದರು.
ವೆಸ್ಟ್ ಇಂಡೀಸ್ ವಿರುದ್ಧದ ಶತಕಕ್ಕೂ ಮೊದಲು ಹರ್ಲೀನ್ ದೇವಲ್ ಅವರ ಏಕದಿನದಲ್ಲಿ ಅತ್ಯಧಿಕ ಸ್ಕೋರ್ 77 ರನ್ ಆಗಿತ್ತು. ಅಂದರೆ ಇದು ಅವರ ಏಕದಿನ ವೃತ್ತಿಜೀವನದ ಮೊದಲ ಶತಕ.
ಹರ್ಲೀನ್ ದೇವಲ್ ಇಲ್ಲಿಯವರೆಗೆ 24 ಟಿ20 ಪಂದ್ಯಗಳನ್ನು ಆಡಿದ್ದಾರೆ, ಇದರಲ್ಲಿ ಅವರು 251 ರನ್ ಗಳಿಸಿದ್ದಾರೆ.
ಆಸ್ಟ್ರೇಲಿಯಾ ಪ್ರವಾಸದಲ್ಲಿ ಸನ್‌ಸ್ಟಿಂಗ್‌ಗೆ ತುತ್ತಾದ ಸಾರಾ ತೆಂಡೂಲ್ಕರ್!
ಸಚಿನ್ ದೊಡ್ಡ ರೆಕಾರ್ಡ್ ಮುರಿಯಲು ವಿರಾಟ್ ಕೊಹ್ಲಿಗೆ ಬೇಕಿದೆ ಜಸ್ಟ್ 134 ರನ್!
ಐಪಿಎಲ್ ನೃತ್ಯಕ್ಕೆ 10 ನಿಮಿಷಕ್ಕೆ ತಮನ್ನಾ ₹50 ಲಕ್ಷ ಡಿಮ್ಯಾಂಡ್!
ಕ್ರಿಕೆಟ್‌ನಿಂದ ರಾಜಕೀಯಕ್ಕೆ ಧುಮುಕಿ ವಿವಾದ ಮೈಮೇಲೆ ಎಳೆದುಕೊಂಡಿದ್ದ ಕಾಂಬ್ಳಿ!