Cricket
ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ಹಲವು ಕಾರಣಗಳಿಂದ ಈಗ ಟಾಕ್ ಆಫ್ ದಿ ಟೌನ್ ಎನಿಸಿಕೊಂಡಿದ್ದಾರೆ.
ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ಅವರ ಆರೋಗ್ಯ ಸ್ಥಿತಿ ಪ್ರಸ್ತುತ ಚೆನ್ನಾಗಿಲ್ಲ. ಅವರು ಹಲವು ಕಾಯಿಲೆಗಳಿಂದ ಹೋರಾಡುತ್ತಿದ್ದಾರೆ.
ಸಚಿನ್ ತೆಂಡೂಲ್ಕರ್ ಬಾಲ್ಯದ ಗೆಳೆಯ ವಿನೋದ್ ಕಾಂಬ್ಳಿ ಭೇಟಿ ವೇಳೆ ವೈರಲ್ ಆದ ವಿಡಿಯೋ ಚರ್ಚೆಗೆ ಗ್ರಾಸವಾಗಿದೆ.
ಮಾಜಿ ಕ್ರಿಕೆಟಿಗನ ಜೀವನವು ಏರಿಳಿತಗಳಿಂದ ಕೂಡಿದೆ. ಅವರು ರಾಜಕೀಯದಲ್ಲೂ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದರು.
ಕ್ರಿಕೆಟ್ ವೃತ್ತಿಜೀವನ ಒಂದು ದಶಕಕ್ಕೂ ಮುನ್ನವೇ ಮುಗಿದ ನಂತರ, 2009 ರಲ್ಲಿ ಕಾಂಬ್ಳಿ ರಾಜಕೀಯಕ್ಕೆ ಇಳಿದರು.
2009 ರಲ್ಲಿ ಮುಂಬೈನ ಬ್ರಿಕೋಲಿ ಕ್ಷೇತ್ರದಿಂದ ಲೋಕಭಾರತಿ ಪಕ್ಷದಿಂದ ಕಾಂಬ್ಳಿ ಸ್ಪರ್ಧಿಸಿದ್ದರು.
ಚುನಾವಣಾ ಪ್ರಚಾರದ ವೇಳೆ, ಮಕ್ಕಳಿಂದ ಪ್ರಚಾರ ಕರಪತ್ರ ಹಂಚಿಸಿದ ಆರೋಪ ಕಾಂಬ್ಳಿ ಮೇಲೆ ಕೇಳಿಬಂದಿತ್ತು.
2011 ರಲ್ಲಿ ಅಣ್ಣಾ ಹಜಾರೆ ಭ್ರಷ್ಟಾಚಾರ ವಿರೋಧಿ ಆಂದೋಲನಕ್ಕೆ ಕಾಂಬ್ಳಿ ಬೆಂಬಲ ನೀಡಿದ್ದರು.