Kannada

ಕೊಹ್ಲಿ ಫಾರ್ಮ್ ಚಿಂತೆ

ಟೀಂ ಇಂಡಿಯಾ ರನ್ ಮಷೀನ್ ವಿರಾಟ್ ಕೊಹ್ಲಿ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ 4ನೇ ಪಂದ್ಯದಲ್ಲಿ ಫಾರ್ಮ್‌ಗೆ ಮರಳಲು ಸಜ್ಜಾಗಿದ್ದಾರೆ.
 

Kannada

ಬಾಕ್ಸಿಂಗ್ ಡೇ ಟೆಸ್ಟ್

ಡಿಸೆಂಬರ್ 26ರಿಂದ ಮೆಲ್ಬರ್ನ್ ಕ್ರಿಕೆಟ್ ಮೈದಾನದಲ್ಲಿ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯ ಆರಂಭವಾಗಲಿದ್ದು, ಎಲ್ಲರ ಚಿತ್ತ ವಿರಾಟ್ ಕೊಹ್ಲಿ ಅವರ ಮೇಲೆ ನೆಟ್ಟಿದೆ.

Image credits: Getty
Kannada

ಸಚಿನ್ ರೆಕಾರ್ಡ್ ಮೇಲೆ ಕೊಹ್ಲಿ ಕಣ್ಣು

ಇನ್ನು ಇದೇ ಟೆಸ್ಟ್ ಪಂದ್ಯದಲ್ಲಿ ಸಚಿನ್ ತೆಂಡುಲ್ಕರ್ ಹೆಸರಿನಲ್ಲಿರುವ ದೊಡ್ಡ ರೆಕಾರ್ಡ್ ಬ್ರೇಕ್ ಮಾಡಲು ಕೊಹ್ಲಿ ಸಜ್ಜಾಗಿದ್ದಾರೆ.

Image credits: pinterest
Kannada

ಎಂಸಿಬಿಯಲ್ಲಿ ಬೇಕಿದೆ 134 ರನ್

ಒಂದು ವೇಳೆ ನಾಲ್ಕನೇ ಟೆಸ್ಟ್‌ನಲ್ಲಿ ಕೊಹ್ಲಿ 134 ರನ್ ಸಿಡಿಸಿದರೆ, ಎಂಸಿಜಿ ಮೈದಾನದಲ್ಲಿ ಅತಿಹೆಚ್ಚು ರನ್ ಬಾರಿಸಿದ ಬ್ಯಾಟರ್ ಎನ್ನುವ ದಾಖಲೆ ವಿರಾಟ್ ಪಾಲಾಗಲಿದೆ.

Image credits: Getty
Kannada

ಮೂರನೇ ಸ್ಥಾನದಲ್ಲಿರುವ ಕೊಹ್ಲಿ

ಸದ್ಯ ವಿರಾಟ್ ಕೊಹ್ಲಿ ಎಂಸಿಜಿ ಮೈದಾನದಲ್ಲಿ 3 ಟೆಸ್ಟ್ ಪಂದ್ಯಗಳನ್ನಾಡಿ 316 ರನ್ ಬಾರಿಸಿದ್ದಾರೆ. ಈ ಮೂಲಕ 3ನೇ ಸ್ಥಾನದಲ್ಲಿದ್ದಾರೆ.

Image credits: Twitter
Kannada

ಸಚಿನ್‌ ದಾಖಲೆ

ಇನ್ನು ಸಚಿನ್ ತೆಂಡುಲ್ಕರ್ ಎಂಸಿಜಿ ಮೈದಾನದಲ್ಲಿ 5 ಟೆಸ್ಟ್ ಪಂದ್ಯಗಳನ್ನಾಡಿ 449 ರನ್ ಸಿಡಿಸಿ ಮೊದಲ ಸ್ಥಾನದಲ್ಲಿದ್ದಾರೆ. ಅಜಿಂಕ್ಯ ರಹಾನೆ 3 ಪಂದ್ಯಗಳಿಂದ 369 ರನ್ ಬಾರಿಸಿ 2ನೇ ಸ್ಥಾನದಲ್ಲಿದ್ದಾರೆ

Image credits: Pinterest
Kannada

ಎಂಸಿಜಿಯಲ್ಲಿ ಕೊಹ್ಲಿ ರೆಕಾರ್ಡ್

ಕೊಹ್ಲಿ ಎಂಸಿಜಿ ಮೈದಾನದಲ್ಲಿ ಈವರೆಗೆ ಒಂದು ಶತಕ ಹಾಗೂ 2 ಅರ್ಧಶತಕ ಸಿಡಿಸಿದ್ದಾರೆ. ಇನ್ನು ಎರಡು ಬಾರಿ ಕೊಹ್ಲಿ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ್ದಾರೆ.

Image credits: Getty

ಐಪಿಎಲ್ ನೃತ್ಯಕ್ಕೆ 10 ನಿಮಿಷಕ್ಕೆ ತಮನ್ನಾ ₹50 ಲಕ್ಷ ಡಿಮ್ಯಾಂಡ್‌!

ಕ್ರಿಕೆಟ್‌ನಿಂದ ರಾಜಕೀಯಕ್ಕೆ ಧುಮುಕಿ ವಿವಾದ ಮೈಮೇಲೆ ಎಳೆದುಕೊಂಡಿದ್ದ ಕಾಂಬ್ಳಿ!

ಕ್ರಿಕೆಟಿಗ ಪೃಥ್ವಿ ಶಾ ಗೆಳತಿ ನಿಧಿ ತಪಾಡಿಯಾ ಅವರ ಕ್ಯೂಟ್ ಫೋಟೋಗಳು ಇಲ್ಲಿವೆ

ಈ 5 ಸ್ಟಾರ್ ಆಟಗಾರರ ಪಾಲಿಗೆ ಇದೇ ಕಟ್ಟ ಕಡೆಯ ಐಪಿಎಲ್?