ಹೃತಿಕ್ ರೋಷನ್, ಶಾರುಖ್ ಖಾನ್, ಸೈಫ್ ಅಲಿ ಖಾನ್ ಮೊದಲಾದವರು ಬಾಲಿವುಡ್‌ನ 90 ರ ದಶಕದಿಂದ 2000ದವರೆಗಿನ ಹೀರೋಗಳಾಗಿದ್ದು, ಈಗ ಅವರ ಮಕ್ಕಳು ಕೂಡ ತೆರೆಗೆ ಕಾಲಿಡಲು ಸಜ್ಜಾಗಿದ್ದಾರೆ.
Kannada
ರಿತಿಕ್ ರೋಷನ್ ಪುತ್ರ ರಿಹಾನ್
2000ದಲ್ಲಿ ಕಹೋ ನಾ ಪ್ಯಾರ್ ಹೈ ಚಿತ್ರದ ಮೂಲಕ ಬಾಲಿವುಡ್‌ಗೆ ಬಂದ ಹೃತಿಕ್ ರೋಷನ್ (50) ಹಿರಿಯ ಪುತ್ರ ರಿಹಾನ್‌ಗೆ 18 ತುಂಬಿದ್ದು, ಕಿರಿಯ ಪುತ್ರ ರಿಧಾನ್ 16 ವರ್ಷ ಇಬ್ಬರು ತುಂಬಾ ಮುದ್ದಾಗಿ ಕಾಣಿಸುತ್ತಿದ್ದಾರೆ.
Kannada
ಸೈಫ್ ಅಲಿ ಖಾನ್ ಪುತ್ರ ಇಬ್ರಾಹಿಂ
1993 ರಲ್ಲಿ 'ಪರಂಪರ' ಸಿನಿಮಾ ಮೂಲಕ ಬಾಲಿವುಡ್‌ಗೆ ಬಂದ ಸೈಫ್ ಅಲಿ ಖಾನ್‌ಗೆ. 54 ವರ್ಷ, ಸೈಫ್ ಮೊದಲ ಪತ್ನಿ ಅಮೃತಾ ಸಿಂಗ್ ಪುತ್ರ ಇಬ್ರಾಹಿಂಗೆ 23 ವರ್ಷ ತುಂಬಿದ್ದು, ಬಾಲಿವುಡ್ ಪ್ರವೇಶಿಸಲು ಸಜ್ಜಾಗಿದ್ದಾರೆ.
Kannada
ಬಾಬಿ ಡಿಯೋಲ್ ಪುತ್ರ ಆರ್ಯಮನ್
55 ವರ್ಷದ ಬಾಬಿ ಡಿಯೋಲ್ 1995 ರಲ್ಲಿ 'ಬರ್ಸಾತ್' ಚಿತ್ರದ ಮೂಲಕ ಬಾಲಿವುಡ್ ಪ್ರವೇಶಿಸಿದರು. ಅವರ ಪುತ್ರ ಆರ್ಯಮನ್‌ಗೆ ಈಗ 23 ವರ್ಷ, ಎರಡನೇ ಪುತ್ರ ಧರಮ್‌ಗೂ 20 ತುಂಬಿದೆ.
Kannada
ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್
59 ವರ್ಷದ ಶಾರುಖ್ ಖಾನ್ 1992ರಲ್ಲಿ 'ದೀವಾನ' ಮೂಲಕ ಬಾಲಿವುಡ್‌ಗೆ ಬಂದರು. ಅವರ ಪುತ್ರ ಆರ್ಯನ್ ಖಾನ್‌ಗೆ 27 ವರ್ಷ ವಯಸ್ಸಿನವರಾಗಿದ್ದು, ಚಿತ್ರರಂಗ ಪ್ರವೇಶಿಸಲು ಸಜ್ಜಾಗಿದ್ದಾರೆ.
Kannada
ಅಕ್ಷಯ್ ಕುಮಾರ್ ಪುತ್ರ ಆರವ್
57 ವರ್ಷದ ಅಕ್ಷಯ್ ಕುಮಾರ್ 1991 ರಲ್ಲಿ ಸೌಗಂಧ್ ಚಿತ್ರದ ಮೂಲಕ ಚಿತ್ರರಂಗಕ್ಕೆ ಬಂದರು. ಅವರ ಪುತ್ರ ಆರವ್‌ಗೆ ಈಗ 22 ರ ಹರೆಯ,. ಆದರೆ ಅಕ್ಷಯ್ ಹೇಳುವ ಪ್ರಕಾರ ಪುತ್ರನಿಗೆ ಸಿನಿಮಾದಲ್ಲಿ ಆಸಕ್ತಿ ಇಲ್ಲ.
Kannada
ಅರ್ಷದ್ ವಾರ್ಸಿ ಪುತ್ರ ಜೆಕ್
56 ವರ್ಷದ ಅರ್ಷದ್ ವಾರ್ಸಿ 1996 ರಲ್ಲಿ 'ತೇರೆ ಮೇರೆ ಸಪ್ನೆ' ಚಿತ್ರದ ಮೂಲಕ ಬಾಲಿವುಡ್ ಪ್ರವೇಶಿಸಿದರು.ಅವರ ಪುತ್ರ ಜೆಕ್ ವಾರ್ಸಿಗೆ 20 ತುಂಬಿದ್ದು, ಚಿತ್ರರಂಗ ಪ್ರವೇಶಿಸಲು ಸಜ್ಜಗಿದ್ದಾರೆ.
Kannada
ಅರ್ಬಾಜ್ ಖಾನ್ ಪುತ್ರ ಅರ್ಹಾನ್
1996 ರಲ್ಲಿ 'ದರಾರ್' ಚಿತ್ರದ ಮೂಲಕ ಬಾಲಿವುಡ್‌ಗೆ ಬಂದ ಅರ್ಬಾಜ್ ಖಾನ್ (57) ಮತ್ತು ಮಲೈಕಾ ಅರೋರಾ ಪುತ್ರ ಅರ್ಹಾನ್ ಖಾನ್ 22 ವರ್ಷ ವಯಸ್ಸಿನವರಾಗಿದ್ದು, ಯಾವುದೇ ಸಮಯದಲ್ಲಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಬಹುದು.