Cine World
ಈ ಬಾಲಿವುಡ್ ಸ್ಟಾರ್ ನಟರು ದೇಶದ ವಿವಿಧೆಡೆ ಡೈರಿ ಫಾರ್ಮಿಂಗ್ ಹೊಂದಿದ್ದು, ಹಾಲು ಬ್ಯುಸಿನೆಸ್ ಸಹ ಹೊಂದಿದ್ದಾರೆ.
ಬಾಲಿವುಡ್‌ನಲ್ಲಿ ನಟನೆಯಿಂದ ತಮ್ಮದೇ ಆದ ಛಾಪು ಮೂಡಿಸಿರುವ ಈ ನಟರಿಗೆ ಕೃಷಿಯಲ್ಲಿಯೂ ಬಹಳ ಆಸಕ್ತಿ ಇದೆ.
ಬಾಲಿವುಡ್ ನಟ ಧರ್ಮೇಂದ್ರ ಚಿತ್ರಗಳಲ್ಲಿ ನಟಿಸೋದು ವಿರಳ. ಪಂಜಾಬಲ್ಲಿ ಇವರಿಗೆ ಕೃಷಿ ಭೂಮಿ ಇದ್ದು, ಡೈರಿ ಫಾರ್ಮಿಂಗ್ ಸಹ ಮಾಡುತ್ತಿದ್ದಾರೆ. ಇದರಿಂದ ಕೋಟಿಗಟ್ಟಲೆ ಸಂಪಾದಿಸುತ್ತಾರೆ.
ಧರ್ಮೇಂದ್ರ ಪುತ್ರ ಮತ್ತು ಬಾಲಿವುಡ್ ನಾಯಕ ಸನ್ನಿ ಡಿಯೋಲ್ ಕೂಡ ಡೈರಿ ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಅವರು ಪಂಜಾಬ್‌ನಲ್ಲಿ ಡೈರಿ ಫಾರ್ಮ್ ಹೊಂದಿದ್ದು, ಹಾಲು ಮತ್ತು ಇತರೆ ಡೈರಿ ಉತ್ಪನ್ನಗಳನ್ನು ಮಾರುತ್ತಾರೆ.
ಸನ್ನಿ ಡಿಯೋಲ್ ತಮ್ಮ ಮತ್ತು ನಟ ಬಾಬಿ ಡಿಯೋಲ್ ಕೂಡ ಸಿನಿಮಾಗಳ ಜೊತೆಗೆ ಡೈರಿ ವ್ಯವಹಾರದಲ್ಲಿ ಹೂಡಿಕೆ ಮಾಡಿದ್ದಾರೆ. ಪಂಜಾಬ್‌ನಲ್ಲಿ ಒಂದು ಡೈರಿ ಫಾರ್ಮ್ ಹೊಂದಿದ್ದು, ಉತ್ತಮ ಆದಾಯವನ್ನೂ ಗಳಿಸುತ್ತಿದ್ದಾರೆ.
ಬಾಲಿವುಡ್‌ನ ಮಿಸ್ಟರ್ ಪರ್ಫೆಕ್ಷನಿಸ್ಟ್ ಆಮಿರ್ ಖಾನ್ ಅವರ ಸಂಭಾವನೆಯೇ ಕೋಟಿಗಟ್ಟಲೆ. ಅವರು ಡೈರಿ ಉತ್ಪನ್ನಗಳನ್ನು ಮಾರುವ 'ಪ್ರತಾಪ್ ಸ್ನ್ಯಾಕ್ಸ್' ಎಂಬ ಡೈರಿ ಸ್ಟಾರ್ಟ್‌ಅಪ್‌ನಲ್ಲಿ ಹೂಡಿಕೆ ಮಾಡಿದ್ದಾರೆ.
ನಟ ರೀತೇಶ್ ದೇಶಮುಖ್ ರಾಜಕೀಯ ಹಾಗೂ ಕೃಷಿ ಕುಟುಂಬದ ಹಿನ್ನೆಲೆಯುಳ್ಳವರು. ಅವರು ಮಹಾರಾಷ್ಟ್ರದಲ್ಲಿ ಡೈರಿ ವ್ಯವಹಾರದಲ್ಲಿ ಹೂಡಿಕೆ ಮಾಡಿದ್ದಾರೆ, ಅಲ್ಲಿಂದ ಕೋಟಿಗಟ್ಟಲೆ ಗಳಿಸುತ್ತಾರೆ.
ಸುನಿಲ್ ಶೆಟ್ಟಿ ಆದಾಯಕ್ಕೆ ಒಂದಲ್ಲ ಹಲವು ಮೂಲಗಳಿವೆ.ಅವರು ಮಹಾರಾಷ್ಟ್ರದಲ್ಲಿ ಒಂದು ಡೈರಿ ಫಾರ್ಮ್ ಅನ್ನು ಹೊಂದಿದ್ದು, ಅತ್ಯುತ್ತಮ ಆದಾಯ ಗಳಿಸುತ್ತಾರೆ.
ಪ್ರಸಿದ್ಧ ನಟ ನಾನಾ ಪಾಟೇಕರ್ ರೈತರಿಗೆ ಬಹಳ ಹತ್ತಿರವಾಗಿದ್ದಾರೆ. ಅವರಿಗೆ ಮಹಾರಾಷ್ಟ್ರದಲ್ಲಿ ಒಂದು ಡೈರಿ ಫಾರ್ಮ್ ಇದ್ದು, ಅಲ್ಲಿ ಹಾಲು ಮತ್ತು ಇತರ ಡೈರಿ ಉತ್ಪನ್ನಗಳನ್ನು ಮಾರುತ್ತಾರೆ.