Cine World
ಭೂತಗಳ ಜೊತೆ ಹಲವು ಸಂಶೋಧನೆ ನಡೆಸಿ, ಟಿವ ಕಾರ್ಯಕ್ರಮಗಳಲ್ಲಿಯೂ ಭಾಗಿಯಾಗುತ್ತಿದ್ದ ಗೌರವ್ ಸತ್ತಿದ್ದು ಪ್ರೇತಾತ್ಮಗಳ ಕಾಟದಿಂದಲೇ?
ಭೂತ-ಪ್ರೇತಗಳೊಂದಿಗೆ ಸದಾ ಮಾತುಕತೆ ನಡೆಸುತ್ತಿದ್ದ ಗೌರವ್ ತಿವಾರಿಯನ್ನು ಕೊಂದಿದ್ದು ಅತೃಪ್ತ ಆತ್ಮಗಳೇ?
ಅತೃಪ್ತ ಆತ್ಮಗಳೊಂದಿಗೆ ಸಂವಾದ ನಡೆಸುತ್ತಿದ್ದ ಗೌರವ್, ಆತ್ಮಹತ್ಯೆ ಮಾಡಿಕೊಂಡಂತೆ ಕಾಣಿಸುತ್ತಿದೆ.
'16 ಡಿಸೆಂಬರ್' ಮತ್ತು 'ಟ್ಯಾಂಗೋ ಚಾರ್ಲಿ' ನಂತಹ ಚಲನಚಿತ್ರಗಳಲ್ಲಿ ನಟಿಸಿದ್ದು ಇವರು, ಪ್ಯಾರನಾರ್ಮಲ್ ತಜ್ಞರಾದಗಿದ್ದರು.
ಗೌರವ್ ತಿವಾರಿ 21ನೇ ವಯಸ್ಸಿನಲ್ಲಿಯೇ ವಾಣಿಜ್ಯ ವಿಮಾನಯಾನದಲ್ಲಿ ಕೆಲಸಕ್ಕೆ ಸೇರಿದ್ದರು. ನಂತರ ಆಸಕ್ತಿ ಹುಟ್ಟಿದ್ದು ಪ್ಯಾರನಾರ್ಮಲ್ ಮತ್ತು ಪ್ಯಾರಸೈಕಾಲಜಿಯಲ್ಲಿ.
2009 ರಲ್ಲಿ ಗೌರವ್ ತಿವಾರಿ ಭಾರತೀಯ ಪ್ಯಾರನಾರ್ಮಲ್ ಸೊಸೈಟಿಯನ್ನು ಸ್ಥಾಪಿಸಿದರು. ಇದರ ಅಡಿಯಲ್ಲಿ ಅವರು ಪ್ಯಾರನಾರ್ಮಲ್ ಚಟುವಟಿಕೆ ಕುರಿತು ಸಂಶೋಧನೆ ನಡೆಸಿದರು.
ಕೆಲವು ನಿಗೂಢ ಸ್ಥಳಗಳ ಸತ್ಯಾಸತ್ಯತೆ ಅರಿಯಲು ಎಲ್ಲಿಲ್ಲದ ಪ್ರಯತ್ನ ನಡೆಸಿದ್ದರು ಗೌರವ್. ರಾಜಸ್ಥಾನದ ಬಂಘಾಡ್ ಕೋಟೆ ರಹಸ್ಯ ಭೇದಿಸಲೂ ಯತ್ನಿಸಿದ್ದು.
ಆಸ್ಟ್ರೇಲಿಯಾದ ಅರಡೇಲ್ ಲುನಾಟಿಕ್ ಆಶ್ರಮದಲ್ಲಿ ಭೂತದ ಸಂಪೂರ್ಣ ದೇಹವನ್ನು ನೋಡಿದ್ದಾಗಿ ಗೌರವ್ ತಿವಾರಿ ಹೇಳಿಕೊಂಡಿದ್ದರು.
'ಭೂತ್ ಆಯಾ', 'ಹಂಟಿಂಗ್: ಆಸ್ಟ್ರೇಲಿಯಾ', 'ಎಂಟಿವಿ ಹಿ ಟಿಕೆಟ್' 'ಹಾಂಟೆಂಡ್ ವೀಕೆಂಡ್' ಮತ್ತು ಎಂಟಿವಿಯ 'ಗರ್ಲ್ಸ್ ನೈಟ್ ಔಟ್' ನಂತಹ ಟಿವಿ ಕಾರ್ಯಕ್ರಮಗಳಲ್ಲಿ ಕೆಲಸ ಮಾಡಿದ್ದಾರೆ.
ಸೆಪ್ಟೆಂಬರ್ 2, 1984 ರಂದು ಬಿಹಾರದ ಪಾಟ್ನಾದಲ್ಲಿ ಜನಿಸಿದ ಗೌರವ್ ತಿವಾರಿ ತಮ್ಮ 32 ನೇ ಹುಟ್ಟುಹಬ್ಬಕ್ಕೆ 2 ತಿಂಗಳ ಮೊದಲು ಜುಲೈ 7, 2016 ರಂದು ದೆಹಲಿಯ ದ್ವಾರಕಾದಲ್ಲಿರುವ ತಮ್ಮ ಮನೆಯಲ್ಲಿ ನಿಗೂಢವಾಗಿ ಅಸುನೀಗಿದರು
ಗೌರವ್ ತಿವಾರಿ ಸಾವನ್ನು ಪೊಲೀಸರು ಆತ್ಮಹತ್ಯೆ ಎಂದು ಹೇಳಿದ್ದಾರೆ. ತನಿಖೆಯ ನಂತರ ಗೌರವ್ ತಮ್ಮ ಹೆಂಡತಿಯ ಸೀರೆಯಿಂದ ಸ್ನಾನಗೃಹದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ತಿಳಿದು ಬಂದಿದೆ.