Kannada

ಪರಿಣೀತಿ ಚೋಪ್ರಾ 28 ಕೆಜಿ ತೂಕ ಇಳಿಸಿಕೊಂಡಿದ್ದು ಹೇಗೆ?

86 ಕೆಜಿ ತೂಗುತ್ತಿದ್ದ ಪರಿಣೀತಿಯ ವೈಯ್ಡ್ ಲಾಸ್ ಜರ್ನಿಯೇ ರೋಚಕ.

Kannada

86 ಕೆಜಿ ಇದ್ದ ಪರಿಣೀತಿ

36 ವರ್ಷದ ಪರಿಣೀತಿಬಾಲಿವುಡ್‌ಗೆ ಕಾಲಿಟ್ಟಾಗ 86 ಕೆಜಿ ತೂಕವಿತ್ತು. ಪ್ರಮುಖ ಪಾತ್ರಗಳು ಸಿಗುವುದು ಕಷ್ಟಕರವಾಗಿತ್ತು. ನಂತರ ತೂಕ ಇಳಿಸಿಕೊಳ್ಳಲು ನಿರ್ಧರಿಸಿದರು.

Kannada

ಹಾರ್ಡ್ ವರ್ಕ್ ಔಟ್ ಮಾಡಿದ ನಟಿ

ಟ್ರೋಲ್‌ಗಳಿಂದ ಬೇಸತ್ತು ಪರಿಣೀತಿ ಸುಮಾರು 28 ಕೆಜಿ ತೂಕ ಇಳಿಸಿಕೊಂಡರು. ಅವರ ತೂಕ ಇಳಿಕೆ ತಂತ್ರಗಳ ಬಗ್ಗೆ ತಿಳಿಯೋಣ.

Kannada

ಜೀವನಶೈಲಿ ಬದಲಾವಣೆ

ತೂಕ ಇಳಿಸಿಕೊಳ್ಳಲು ಪರಿಣೀತಿ ತಮ್ಮ ಜೀವನಶೈಲಿಯನ್ನೇ ಬದಲಾಯಿಸಿದರು. ದಿನಚರಿ ಮತ್ತು ಆಹಾರ ಪದ್ಧತಿಯನ್ನು ಬದಲಿಸಿ ಕಟ್ಟುನಿಟ್ಟಿನ ನಿಯಮಗಳನ್ನು ಪಾಲಿಸಿದರು.

Kannada

ನಡಿಗೆ ಮತ್ತು ವ್ಯಾಯಾಮ

ಪರಿಣೀತಿ ಜಿಮ್‌ನಲ್ಲಿ ಕಷ್ಟಪಟ್ಟು ವರ್ಕೌಟ್ ಮಾಡಿದರು. ಯೋಗವನ್ನೂ ಬಿಡಲಿಲ್ಲ. ಆದಷ್ಟು ವಾಕಿಂಗ್ ಸಹ ಮಾಡಿದರು.

Kannada

ಇಷ್ಟಪಟ್ಟಿದನ್ನು ತಿನ್ನಲಿಲ್ಲ

ತೂಕ ಇಳಿಸಿಕೊಳ್ಳಲು ಪರಿಣೀತಿ ತಮ್ಮ ಪ್ರಿಯ ಆಹಾರ ಪಿಜ್ಜಾವನ್ನೂ ತ್ಯಜಿಸಿದರು. ಪಿಜ್ಜಾ ಈ ನಟಿಯ ನೆಚ್ಚಿನ ಫಾಸ್ಟ್ ಫುಡ್.

Kannada

ಆಹಾರ ಪದ್ಧತಿಯಲ್ಲಿ ಬದಲಾವಣೆ

ತೂಕ ಇಳಿಸಿಕೊಳ್ಳಲು ಪರಿಣೀತಿ ಆಹಾರ ಪದ್ಧತಿ ಬದಲಿಸಿದರು. ಹಾಲು, ಬ್ರೌನ್ ಬ್ರೆಡ್, ಮೊಟ್ಟೆ, ದಾಲ್-ರೊಟ್ಟಿ, ತರಕಾರಿ, ಸಲಾಡ್ ಸೇವಿಸ ತೊಡಗಿದರು.

Kannada

ಮಲಗುವ 2 ಗಂಟೆ ಮುನ್ನವೇ ಊಟ

ಮಲಗುವ ಮುನ್ನ ಹಾಲು ಅಥವಾ ಚಾಕೊಲೇಟ್ ಶೇಕ್ ಕುಡಿಯುತ್ತಿದ್ದ ಪರಿಣೀತಿ ಈಗ ಮಲಗುವ ಎರಡು ಗಂಟೆಗಳ ಮೊದಲು ಊಟ ಮಾಡುವುದನ್ನು ನಿಲ್ಲಿಸಿದ್ದಾರೆ.

Kannada

ಪರಿಣೀತಿ ಫಿಟ್

ಪರಿಣೀತಿ ಚೋಪ್ರಾ ಈಗ ಸಂಪೂರ್ಣವಾಗಿ ಫಿಟ್ ಆಗಿದ್ದಾರೆ. ತೂಕ ಹೆಚ್ಚಾಗದಂತೆ ಎಚ್ಚರಿಕೆ ವಹಿಸುತ್ತಾರೆ. ವ್ಯಾಯಾಮ, ಯೋಗ ಮತ್ತು ಆಹಾರದ ಮೇಲೆ ನಿಯಂತ್ರಣ ಹೊಂದಿದ್ದಾರೆ.

ಲಾರೆನ್ಸ್ ಬಿಷ್ಣೋಯ್ ಭಯದಲ್ಲಿ ಭಾಯಿಜಾನ್; 'ಸಿಂಘಂ ಅಗೇನ್'ನಿಂದ ಸಲ್ಮಾನ್ ಔಟ್?

ವಿಚ್ಛೇದನ ಹಿಂಪಡೆಯುವ ನಿರ್ಧಾರದ ಬೆನ್ನಲ್ಲೇ ಜೈಲರ್ 2 ರಲ್ಲಿ ರಜನಿ ಜೊತೆ ಧನುಷ್?

ಉದ್ಯಮಿ ಅಹುಜಾ ಜತೆ ಸಲ್ಮಾನ್ ಮಾಜಿ ಅತ್ತಿಗೆ ಡೇಟಿಂಗ್,ತಾಯಿ ಪ್ರೀತಿಗೆ ಮಗ ಒಪ್ಪಿಗೆ

ಕರ್ವಾಚೌತ್ ಸೆಲೆಬ್ರೇಟ್ ಮಾಡದ ಬಾಲಿವುಡ್ ನಟಿಯರಿವರು