ಬಾಲಿವುಡ್‌ನ ಕೆಲ ಸೆಲೆಬ್ರಿಟಿಗಳು ಕರ್ವಾಚೌತ್ ಆಚರಿಸುವುದಿಲ್ಲ, ಆ ನಟಿಯರು ಯಾರು ಎಂಬ ಮಾಹಿತಿ ಇಲ್ಲಿದೆ.
ಟ್ವಿಂಕಲ್ ಖನ್ನಾ
ಟ್ವಿಂಕಲ್ ಖನ್ನಾ ಕರ್ವಾಚೌತ್ ಆಚರಿಸುವುದಿಲ್ಲ. ಹೆಂಡತಿ ಉಪವಾಸ ಮಾಡುವುದರಿಂದ ಗಂಡನ ಆಯಸ್ಸು ಹೆಚ್ಚಾಗುವುದಿಲ್ಲ ಎಂದು ಅವರು ಹೇಳುತ್ತಾರೆ.
ಹೇಮಾ ಮಾಲಿನಿ
ಹೇಮಾ ಮಾಲಿನಿ ಕೂಡ ಪತಿ ಧರ್ಮೇಂದ್ರರಿಗಾಗಿ ಕರ್ವಾಚೌತ್ ಆಚರಿಸುವುದಿಲ್ಲ. ಪ್ರೀತಿ ಹೃದಯದಿಂದ ಬರಬೇಕು ಎಂದು ಹೇಮಾ ನಂಬುತ್ತಾರೆ. ಅವರ ದಕ್ಷಿಣ ಭಾರತದ ಹಿನ್ನೆಲೆಯೂ ಇದಕ್ಕೆ ಕಾರಣ ಇರಬಹುದು
3. ದೀಪಿಕಾ ಪಡುಕೋಣೆ
ದೀಪಿಕಾ ಪಡುಕೋಣೆ ಮೂಲತಃ ದಕ್ಷಿಣದವರು ಹೀಗಾಗಿಯೇ ಕರ್ವಾಚೌತ್ ಮೇಲೆ ಅವರಿಗೆ ಅಂತ ನಂಬಿಕೆ ಇಲ್ಲ, ಉಪವಾಸಕ್ಕಿಂತ ಪರಸ್ಪರರ ಜೊತೆಗಿರುವುದು ಮುಖ್ಯ ಎಂದು ಅವರು ನಂಬುತ್ತಾರೆ.
. ಕರೀನಾ ಕಪೂರ್
ಕರೀನಾ ಕಪೂರ್ ಕೂಡ ಪತಿ ಸೈಫ್ ಅಲಿ ಖಾನ್‌ಗಾಗಿ ಕಾರ್ವಾಚೌತ್ ಉಪವಾಸ ಮಾಡಿಲ್ಲ. ಉಪವಾಸ ಮಾಡಿ ಹಸಿವಿನಿಂದ ತಮ್ಮ ಪ್ರೀತಿಯನ್ನು ಸಾಬೀತುಪಡಿಸುವ ಅಗತ್ಯವಿಲ್ಲ ಎಂದು ಅವರು ಹೇಳುತ್ತಾರೆ.
5. ಸೋನಂ ಕಪೂರ್
ನಟಿ ಸೋನಂ ಕಪೂರ್ ಕೂಡ ಪತಿ ಆನಂದ್ ಅಹುಜಾ ಅವರಿಗಾಗಿ ಕರ್ವಾಚೌತ್ ಉಪವಾಸ ಮಾಡುವುದಿಲ್ಲ. ಅವರು ಈ ರೀತಿಯ ಪದ್ಧತಿಗಳನ್ನು ನಂಬುವುದಿಲ್ಲ ಎಂದು ಹೇಳಿದ್ದಾರೆ.
6. ತಾಹಿರಾ ಕಶ್ಯಪ್
ಆಯುಷ್ಮಾನ್ ಖುರಾನಾ ಅವರ ಪತ್ನಿ ತಾಹಿರಾ ಕಶ್ಯಪ್ ಕೂಡ ಕರವಾಚೌತ್ ಆಚರಿಸುವುದಿಲ್ಲ. ಅವರು ಈ ರೀತಿಯ ವಿಷಯಗಳನ್ನು ನಂಬುವುದಿಲ್ಲ ಎಂದು ಹೇಳುತ್ತಾರೆ.
7. ರತ್ನಾ ಪಾಠಕ್
ಹಿರಿಯ ನಟಿ ರತ್ನಾ ಪಾಠಕ್ ಕೂಡ ಕಾರ್ವಾಚೌತ್ ಆಚರಿಸುವುದಿಲ್ಲ. ನಮ್ಮ ಸಮಾಜ ರೂಢಿಗತವಾಗುತ್ತಿದೆ. ವಿದ್ಯಾವಂತ ಮಹಿಳೆಯರು ಸಹ ಗಂಡನ ದೀರ್ಘಾಯುಷ್ಯಕ್ಕಾಗಿ ಉಪವಾಸ ಮಾಡುತ್ತಾರೆ ಎಂದು ಅವರು ಹೇಳುತ್ತಾರೆ.