Cine World

ಮಾಜಿ ಮಿಸ್ ವರ್ಲ್ಡ್ ಇಶಿಕಾ ತನೇಜಾ

ಗ್ಲಾಮರ್ ಜಗತ್ತು ತೊರೆದು ಸನ್ಯಾಸತ್ವದತ್ತ ಮುಖ ಮಾಡಿದ 'ಮಾಜಿ ಮಿಸ್ ವರ್ಲ್ಡ್ ಟೂರಿಸಂ' ಇಶಿಕಾ ತನೇಜಾ

ಹೊಸ ಹಾದಿಯಲ್ಲಿ ಮಿಸ್ ವರ್ಲ್ಡ್ ಇಶಿಕಾ ತನೇಜಾ

ಇಶಿಕಾ ತನೇಜಾ  ಗ್ಲಾಮರ್ ಜಗತ್ತು ತೊರೆದು ಆಧ್ಯಾತ್ಮದತ್ತ ಮುಖ ಮಾಡಿದ್ದು, ಜಬಲ್ಪುರದಲ್ಲಿರುವ ದ್ವಾರಕಾ ಶಾರದಾ ಪೀಠದ ಶಂಕರಾಚಾರ್ಯ ಸ್ವಾಮಿ ಸದಾನಂದ ಸರಸ್ವತಿ ಮಹಾರಾಜರಿಂದ ಗುರು ದೀಕ್ಷೆ ಪಡೆದಿದ್ದಾರೆ. 

ಆಧ್ಯಾತ್ಮದತ್ತ ತಿರುಗುವ ನಿರ್ಧಾರ

ಇಶಿಕಾ ತನೇಜಾ ಹೇಳುವಂತೆ ಹೆಸರು,  ಖ್ಯಾತಿಯ ಹೊರತಾಗಿಯೂ ಅವರಿಗೆ  ನೆಮ್ಮದಿ ಸಿಕ್ಕಿಲ್ಲ. ಹೀಗಾಗಿ ಅವರು ತಮ್ಮ ಜೀವನವನ್ನು ಸನಾತನ ಧರ್ಮ ಮತ್ತು ಮಾನವ ಸೇವೆಗೆ ಅರ್ಪಿಸಿಕೊಳ್ಳಲು ಬಯಸಿದ್ದಾರೆ.

ಗುರು ದೀಕ್ಷೆ

ಗುರು ದೀಕ್ಷೆಗೆ ಮುನ್ನ ಶಂಕರಾಚಾರ್ಯ ಸ್ವಾಮಿ ಸದಾನಂದ ಸರಸ್ವತಿ ಇಶಿಕಾ ತನೇಜಾ ಅವರಿಗೆ ಶಾಸ್ತ್ರಾರ್ಥ ಮಾಡಿ ಅವರ ಸಂಶಯಗಳನ್ನು ಪರಿಹರಿಸಿ, ನಂತರ ಗುರುಮಂತ್ರ ನೀಡಿ ತಮ್ಮ ಶಿಷ್ಯೆಯನ್ನಾಗಿ ಮಾಡಿಕೊಂಡರು.

ದೀಕ್ಷೆಯ ಕಾರಣ ತಿಳಿಸಿದ ಇಶಿಕಾ

ನಾನು ನನಗಾಗಿ ಬಹಳಷ್ಟು ಮಾಡಿದ್ದೇನೆ, ಹಲವು ಪ್ರಶಸ್ತಿಗಳನ್ನು ಗೆದ್ದಿದ್ದೇನೆ, ಆದರೆ ಶಾಂತಿ ಮತ್ತು ಆತ್ಮತೃಪ್ತಿಯ ಕೊರತೆ ಇತ್ತು. ಈಗ ನಾನು ಆಧ್ಯಾತ್ಮಿಕ ಮಾರ್ಗದಲ್ಲಿ ನಡೆಯಲು ನಿರ್ಧರಿಸಿದ್ದೇನೆ ಎಂದಿದ್ದಾರೆ ಇಶಿಕಾ

ಇಶಿಕಾ ಸನ್ಯಾಸತ್ವ

ದೀಕ್ಷೆ ಪಡೆದ ನಂತರ, ಇಶಿಕಾ ಕೇಸರಿ ವಸ್ತ್ರ ಧರಿಸಿ ಆಧ್ಯಾತ್ಮಿಕ ಜೀವನ ಆರಂಭಿಸಿದ್ದಾರೆ. ಶಂಕರಾಚಾರ್ಯರು ಅವರಿಗೆ ಜಬಲ್ಪುರಕ್ಕೆ ಬಂದು ದೀಕ್ಷೆ ಪಡೆಯುವಂತೆ ಆದೇಶಿಸಿದ್ದರು.

ಮಿಸ್ ವರ್ಲ್ಡ್ ಟೂರಿಸಂ ಪ್ರಶಸ್ತಿ

ಇಶಿಕಾ ತನೇಜಾ 2017 ರಲ್ಲಿ ಮಿಸ್ ವರ್ಲ್ಡ್ ಟೂರಿಸಂ ಇಂಡಿಯಾ ಪ್ರಶಸ್ತಿ ಗೆದಿದ್ದರು. 2018 ರಲ್ಲಿ ಮಲೇಷ್ಯಾದ ಮೆಲಕಾದಲ್ಲಿ ಬಿಸಿನೆಸ್ ವುಮನ್ ಆಫ್ ದಿ ವರ್ಲ್ಡ್ ಪ್ರಶಸ್ತಿಯನ್ನೂ ಪಡೆದಿದ್ದರು.

ರಾಷ್ಟ್ರಪತಿ ಪ್ರಶಸ್ತಿ

ಇಶಿಕಾ 'ಇಂದು ಸರ್ಕಾರ್‌'' 'ಹದ್' ಮತ್ತು 'ದಿಲ್ ಮಂಗ್ದಿ' ಚಿತ್ರಗಳಲ್ಲಿ ನಟಿಸಿದ್ದಾರೆ. 2016 ರ ಜನವರಿ 26 ರಂದು ಅವರಿಗೆ 'ಭಾರತದ 100 ಯಶಸ್ವಿ ಮಹಿಳೆಯರು' ಪ್ರಶಸ್ತಿ ಲಭಿಸಿದೆ. 

KGF ಸ್ಟಾರ್ ನಟ ಯಶ್‌ ಫಿಟ್ನೆಸ್ ರಹಸ್ಯ ಇಲ್ಲಿದೆ ನೋಡಿ!

ಚಲನಚಿತ್ರ ನಿರ್ಮಾಣದಿಂದ ನಿರ್ಮಾಪಕರು ಕೋಟಿ ಕೋಟಿ ಹಣ ಹೇಗೆ ಗಳಿಸುತ್ತಾರೆ ಗೊತ್ತಾ?

ನಿರ್ಮಾಪಕರು ಸಿನಿಮಾಗೆ ಹಾಕಿದ ಹಣ ಹೇಗೆ ಡಬಲ್-ತ್ರಿಬಲ್ ಮಾಡ್ಕೊತಾರೆ?

55ರಲ್ಲೂ ಫಿಟ್ & ಫೈನ್ ಆಗಿರುವ ಅಜಯ್ ದೇವಗನ್ ಫಿಟ್‌ನೆಸ್ ಸೀಕ್ರೆಟ್