ಆಲ್ ಟೈಮ್ ಅತಿ ಹೆಚ್ಚು ಗಳಿಕೆ ಕಂಡ ದಕ್ಷಿಣ ಭಾರತ, ಬಾಲಿವುಡ್ ಸಿನಿಮಾಗಳಿವು
cine-world Dec 27 2025
Author: Padmashree Bhat Image Credits:instagram
Kannada
KGF Chapter 2
ಪ್ರಶಾಂತ್ ನೀಲ್ ನಿರ್ದೇಶನದ KGF Chapter 1000 ಕೋಟಿ ಗಳಿಸಿದ ಮೊದಲ ಸಿನಿಮಾವಾಗಿದೆ. ರಾಕಿ ಭಾಯ್ ಆಗಿ ನಟ ಯಶ್, ಶ್ರೀನಿಧಿ ಶೆಟ್ಟಿ ಅಭಿನಯಯಿಸಿದ ಸಿನಿಮಾವಿದು. 1,200 ಕೋಟಿ ರೂಪಾಯಿಗೂ ಅಧಿಕ ಹಣವನ್ನು ಸಂಗ್ರಹಿಸಿತ್ತು.
Image credits: instagram
Kannada
ದಂಗಲ್
ಆಮೀರ್ ಖಾನ್ ನಟಿಸಿದ ಸಿನಿಮಾವಿದು. ಕುಸ್ತಿಪಟು ಮಹಾವೀರ್ ಸಿಂಗ್ ಫೋಗಟ್ ಜೀವನದ ಕಥೆ ಇಲ್ಲಿದೆ. ಚೀನಾದಲ್ಲಿ ಯಶಸ್ಸು ಕಂಡ ಈ ಸಿನಿಮಾವು ಒಟ್ಟು 2,000 ಕೋಟಿ ರೂಪಾಯಿ ಗಳಿಕೆ ಕಂಡಿದೆ.
Image credits: instagram
Kannada
Baahubali 2: The Conclusion
SS ರಾಜಮೌಳಿ ನಿರ್ದೇಶನದ ಈ ಸಿನಿಮಾವು ಭಾರತೀಯ ಚಿತ್ರರಂಗದ ಬಾಕ್ಸ್ ಆಫೀಸ್ ಇತಿಹಾಸವನ್ನೇ ಬದಲಿಸಿತು. 1,810 ಕೋಟಿ ರೂಪಾಯಿಗಳಿಗೂ ಅಧಿಕ ಹಣ ಸಂಗ್ರಹಿಸಿದೆ. ಪ್ರಭಾಸ್, ರಾಣಾ ದಗ್ಗುಬಾಟಿ, ಅನುಷ್ಕಾ ಶೆಟ್ಟಿ ನಟಿಸಿದ್ದರು.
Image credits: instagram
Kannada
RRR (ತೆಲುಗು/ಹಿಂದಿ)
ಜೂನಿಯರ್ ಎನ್‌ಟಿಆರ್, ರಾಮ್ ಚರಣ್ ನಟನೆಯ ಈ ಸಿನಿಮಾವು ಸುಮಾರು 1,300 ಕೋಟಿ ರೂಪಾಯಿಗಳ ಕಲೆಕ್ಷನ್ ಮಾಡಿದೆ. ಈ ಸಿನಿಮಾದ 'ನಾಟು ನಾಟು' ಹಾಡು ಆಸ್ಕರ್ ಪ್ರಶಸ್ತಿಯನ್ನು ಗೆದ್ದಿತು.
Image credits: instagram
Kannada
Pushpa 2: The Rule (ತೆಲುಗು/ಹಿಂದಿ)
ಅಲ್ಲು ಅರ್ಜುನ್ ನಟನೆಯ ಈ ಸಿನಿಮಾವು ಬಿಡುಗಡೆಯಾದ ಕೆಲವೇ ದಿನಗಳಲ್ಲಿ 1000 ಕೋಟಿ ಕ್ಲಬ್ ಸೇರಿದೆ. ಪುಷ್ಪರಾಜ್ ಪಾತ್ರದ ಮ್ಯಾನರಿಸಂ, ಸುಕುಮಾರ್ ನಿರ್ದೇಶನಕ್ಕೆ ಸಖತ್ ಮೋಡಿ ಮಾಡಿತು.
Image credits: instagram
Kannada
Kalki 2898 AD
ಪ್ರಭಾಸ್, ಅಮಿತಾಭ್ ಬಚ್ಚನ್, ಕಮಲ್ ಹಾಸನ್ ನಟನೆಯ ಚಿತ್ರವಿದು. ಈ ಸೈನ್ಸ್ ಫಿಕ್ಷನ್ ಸಿನಿಮಾವು ವಿಶ್ವಮಟ್ಟದಲ್ಲಿ ಸದ್ದು ಮಾಡಿದೆ. ಈ ಸಿನಿಮಾವು 1,040 ಕೋಟಿ ರೂಪಾಯಿಗೂ ಹೆಚ್ಚು ಗಳಿಕೆ ಕಂಡಿದೆ.
Image credits: instagram
Kannada
Jawan ( ಜವಾನ್ )
ಶಾರುಖ್ ಖಾನ್, ಅಟ್ಲಿ ಕಾಂಬಿನೇಷನ್‌ನ ಈ ಸಿನಿಮಾವು 1,150 ಕೋಟಿಗೂ ಅಧಿಕ ಗಳಿಕೆ ಕಂಡಿದೆ. ತಂದೆ-ಮಗನ ಪಾತ್ರದಲ್ಲಿ ಶಾರುಖ್ ಖಾನ್ ನಟಿಸಿದ್ದರು.
Image credits: instagram
Kannada
Dhurandhar
2025ರಲ್ಲಿ ರಣವೀರ್ ಸಿಂಗ್, ಸಾರಾ ಅರ್ಜುನ್ ಅಭಿನಯದ ಈ ಸಿನಿಮಾವು 1000 ಕೋಟಿ ಗಳಿಕೆ ಕಂಡಿದೆ. ಬಿಡುಗಡೆಯಾದ ಕೇವಲ 21 ದಿನಗಳಲ್ಲಿ ಈ ದೊಡ್ಡ ಮೈಲಿಗಲ್ಲು ಸೃಷ್ಟಿಸಿದೆ. ಆದಿತ್ಯ ಧರ್ ನಿರ್ದೇಶನದ ಸಿನಿಮಾವಿದು.