Cine World

ಬಾಲಿವುಡ್‌ನಲ್ಲಿ ಈಗಷ್ಟೇ ಅರಳುತ್ತಿರುವ ನಟಿ ಖುಷಿ ಕಪೂರ್ ಐಷಾರಾಮಿ ಕಾರು ಖರೀದಿ

ಖುಷಿ ಕಪೂರ್ ಹೊಸ ಕಾರು ಹೀಗಿದೆ

ಬೋನಿ ಕಪೂರ್ ಅವರ ಕಿರಿಯ ಪುತ್ರಿ ಖುಷಿ ಕಪೂರ್ ಇತ್ತೀಚೆಗೆ ಚೆರ್ರಿ ರೆಡ್ ಬಣ್ಣದ ಐಷಾರಾಮಿ ಕಾರನ್ನು ಖರೀದಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ವೈರಲ್ ಆಗುತ್ತಿದೆ..

ಕಾರಿನಿಂದ ಖುಷಿ ಲುಕ್ ಹೀಗಿತ್ತು

ಈ ವೀಡಿಯೊವನ್ನು ನೋಡಿದ ನಂತರ ಅಭಿಮಾನಿಗಳು ಖುಷಿ ಅವರ ಈ ಕಾರಿನ ಬೆಲೆಯನ್ನು ಊಹಿಸುತ್ತಿದ್ದಾರೆ. ಖುಷಿ ಬ್ರಾಂಡ್ ನ್ಯೂ ಮರ್ಸಿಡಿಸ್ ಬೆನ್ಜ್ ಜಿ 400 ಡಿ ಡೀಸೆಲ್ ಆವೃತ್ತಿಯನ್ನು ಖರೀದಿಸಿದ್ದಾರೆ.

ಖುಷಿ ಕಾರಿನ ಬೆಲೆ ಏನು?

ಈ ಐಷಾರಾಮಿ ಕಾರಿನ ಬೆಲೆ 2.55 ಕೋಟಿ ರೂ ಎಂದು ಹೇಳಲಾಗುತ್ತಿದೆ. ಮಾಡಿರುವುದು ಒಂದೇ ಸಿನಿಮಾ ಆದರೂ ಇಷ್ಟೋಂದು ಹಣ ಎಲ್ಲಿಂದ ಬಂತು ಅನ್ನೋದು ನೆಟ್ಟಿಗರ ಪ್ರಶ್ನೆ.

ಕಾರಿನ ವಿಶೇಷತೆಗಳು ಏನು?

ಎಸ್‌ಯುವಿ 2 ರೂಪಾಂತರಗಳಲ್ಲಿ ಬರುತ್ತದೆ - ಅಡ್ವೆಂಚರ್ ಆವೃತ್ತಿ ಮತ್ತು ಎಎಮ್‌ಜಿ ಲೈನ್ ಟ್ರಿಮ್ಸ್, ಮುಖ್ಯವಾಗಿ ಈ ಕಾರನನ್ನು ಭಾರತೀಯ ಮಾರುಕಟ್ಟೆಗಾಗಿ ಕಾನ್ಫಿಗರ್ ಮಾಡಲಾಗಿದೆ.

ಮೊದಲ ಚಿತ್ರ ಇದೇ.....

ಖುಷಿ, ಶ್ರೀದೇವಿ ಮತ್ತು ಬೋನಿ ಕಪೂರ್ ಅವರ ಪುತ್ರಿ. ಖುಷಿ ಜೋಯಾ 'ಅಖ್ತರ್ ಅವರ ದಿ ಆರ್ಚೀಸ್' ನಿಂದ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಆದಾಗ್ಯೂ, ಈ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಹೆಚ್ಚಿನ ಸದ್ದು ಮಾಡಲಿಲ್ಲ.

ಖುಷಿ ಮುಂಬರುವ ಚಿತ್ರಗಳು

ಇದಲ್ಲದೆ ಖುಷಿ ಶೀಘ್ರದಲ್ಲಿ ಹಿಂದಿ ರಿಮೇಕ್‌ನಲ್ಲಿ ಆಮಿರ್ ಖಾನ್ ಅವರ ಪುತ್ರ ಜುನೈದ್ ಖಾನ್ ಅವರೊಂದಿಗೆ ಕೆಲಸ ಮಾಡಲಿದ್ದಾರೆ. ಇಬ್ರಾಹಿಂ ಅಲಿ ಖಾನ್ ಅವರೊಂದಿಗೆ ಒಂದು ಚಿತ್ರದಲ್ಲಿ ಕೆಲಸ ಮಾಡಲಿದ್ದಾರೆ ಎಂಬ ವದಂತಿ ಇದೆ.

ಬಾತ್‌ರೂಮ್‌ನಲ್ಲಿ ಸಿಕ್ಸ್ ಪ್ಯಾಕ್ ತೋರಿಸಿದ ಡಬಲ್ ಇಸ್ಮಾರ್ಟ್ ನಟ ರಾಮ್ ಪೋತಿನೇನಿ!

ಜಾಕ್ವೆಲಿನ್ ಫರ್ನಾಂಡೀಸ್ ಐಷಾರಾಮಿ ಜೀವನ, ಖಾಸಗಿ ದ್ವೀಪವನ್ನೇ ಹೊಂದಿದ್ದಾರೆ ನಟಿ!

ನಾಗ ಚೈತನ್ಯ-ಶೋಭಿತಾ ನಿಶ್ಚಿತಾರ್ಥದಲ್ಲಿ ಭಾಗಿಯಾದ ಫ್ಯಾಮಿಲಿಯ ಫೋಟೋಗಳು ಬಹಿರಂಗ

Bigg Boss: ಈ ಬಾರಿ ಧೂಳೆಬ್ಬಿಸಲು ಬರ್ತಿದ್ದಾರೆ ಎಂಟು ಮಹಿಳಾ ಸ್ಪರ್ಧಿಗಳು!