Cars
ಗುಜರಾತ್‌ನ ಅಮ್ರೇಲಿ ರೈತ ಸಂಜಯ್ ಪೋರ್ಲಾ ತಮ್ಮ 'ಅದೃಷ್ಟದ' ಕಾರನ್ನು ಸ್ಕ್ರ್ಯಾಪ್‌ಗೆ ಕೊಡುವ ಬದಲು 10 ಅಡಿ ಆಳದ ಗುಂಡಿಯಲ್ಲಿ ಹೂತಿದ್ದಾರೆ.
ಕಾರಿನ ವಿದಾಯದ ವೇಳೆ ಹೂವುಗಳಿಂದ ಅಲಂಕರಿಸಿದ ಕಾರಿಗೆ ಅಂತಿಮ ಯಾತ್ರೆ ನಡೆಸಿದ್ದಾರೆ.
ನವೆಂಬರ್ 7 ರಂದು, ಸಂಜಯ್ ಪೋರ್ಲಾ ತಮ್ಮ ಹಳೆಯ ಕಾರನ್ನು ಸ್ಕ್ರ್ಯಾಪ್‌ಗೆ ಮಾರಾಟ ಮಾಡುವ ಬದಲು 10 ಅಡಿ ಆಳದ ಗುಂಡಿಯಲ್ಲಿ ಹೂಳಲು ನಿರ್ಧರಿಸಿದರು.
ವಿದಾಯಕ್ಕಾಗಿ ಹೂವುಗಳಿಂದ ಅಲಂಕರಿಸಿದ ಕಾರಿಗೆ ಅಂತಿಮ ಯಾತ್ರೆ ನಡೆಸಲಾಯಿತು, ಇದರಲ್ಲಿ ಡಿಜೆ, ವಾದ್ಯಗಳು ಮತ್ತು ಗ್ರಾಮಸ್ಥರು ಭಾಗವಹಿಸಿದ್ದರು.
2004 ರಲ್ಲಿ ಸೆಕೆಂಡ್ ಹ್ಯಾಂಡ್ ಆಗಿ ಖರೀದಿಸಿದ ಈ ಕಾರು ತಮ್ಮ ಜೀವನದಲ್ಲಿ ಸಂತೋಷ ಮತ್ತು ಪ್ರಗತಿ ತರಲು ಪ್ರಮುಖ ಪಾತ್ರ ವಹಿಸಿದೆ ಎಂದ ರೈತ
ಈ ಕಾರು ಖರೀದಿ ಬಳಿಕ ಸಂಜಯ್ ಆರ್ಥಿಕ ಸ್ಥಿತಿ ಸುಧಾರಿಸಿದೆ. ಪ್ರತಿ ಕ್ಷೇತ್ರದಲ್ಲೂ ಯಶಸ್ಸನ್ನು ಗಳಿಸಿದ್ದಾರೆ. ಇದನ್ನು ಕಾರಿನ ಆಶೀರ್ವಾದ ಎಂದು ಭಾವಿಸುತ್ತಾರೆ.
ಕಾರಿನ ವಿದಾಯದ ವೇಳೆ ಇಡೀ ಗ್ರಾಮಕ್ಕೆ ಭೋಜನ ಕೂಟ ಏರ್ಪಡಿಸಿದ್ದರು. ಈ ಭೋಜನ ಕೂಟದಲ್ಲಿ ಸುಮಾರು 1500 ಜನರು ಭಾಗವಹಿಸಿದ್ದರು.
ಸೂರತ್‌ನಿಂದ ಬಂದಿದ್ದ ಅತಿಥಿ ಹರೇಶ್ ಕಾರ್ಕರ್, "ನಾನು ನನ್ನ ಜೀವನದಲ್ಲಿ ಇಂತಹದ್ದನ್ನು ಮೊದಲು ಎಂದೂ ನೋಡಿಲ್ಲ" ಎಂದು ಹೇಳಿದರು.
ಅಂತ್ಯಕ್ರಿಯೆಯ ಸ್ಥಳ ಸ್ಮರಣೀಯಗೊಳಿಸಲು ಮರವನ್ನು ನೆಟ್ಟು ಅದೃಷ್ಠ ಕಾರಿನ ನೆನಪು ಜೀವಂತವಾಗಿರಿಸಿದ್ದಾರೆ.
ಕಾರು ಉತ್ಪಾದನೆಯಲ್ಲೇಕೆ ಬೆಳ್ಳಿ ಬಳಸ್ತಾರೆ?
ಕೇವಲ ₹10 ಲಕ್ಷದೊಳಗೆ ಉತ್ತಮ ಮೈಲೇಜ್ ಡೀಸೆಲ್ ಕಾರುಗಳು ಇಲ್ಲಿವೆ
ಚಲಿಸುತ್ತಿರುವಾಗ ಕಾರಿನ ಬ್ರೇಕ್ ಫೇಲ್ ಆದರೆ ಏನು ಮಾಡಬೇಕು? ನಿರ್ವಹಿಸಲು ಇಲ್ಲಿದೆ
ಶ್ರೀಮಂತ ಉದ್ಯಮಿ ಅದಾನಿ ಬಳಿ ಇರುವ ಐಷಾರಾಮಿ ಕಾರುಗಳೆಷ್ಟು? ಇಲ್ಲಿದೆ ಲಿಸ್ಟ್!