BUSINESS
ಮುಕೇಶ್ ಅಂಬಾನಿ ಅವರ ಪುತ್ರಿ ಇಶಾ ಅಂಬಾನಿ ಅವರ ನಾದಿನಿ ಅಂದ್ರ ಪತಿ ಉದ್ಯಮಿ ಆನಂದ್ ಪಿರಮಲ್ ಅವರ ಸೋದರಿ, ನಂದಿನಿ ಪಿರಮಲ್ ಅವರು ಉದ್ಯಮ ಲೋಕದಲ್ಲಿ ಗುರುತಿಸಲ್ಪಟ್ಟ ಹೆಸರು
ನಂದಿನಿ ಪಿರಮಲ್. ತಮ್ಮ ವ್ಯಾಪಾರ ಕೌಶಲ್ಯ ಮತ್ತು ನಾಯಕತ್ವಕ್ಕೆ ಹೆಸರುವಾಸಿಯಾಗಿದ್ದಾರೆ. ಇಂದು ಅವರು 9087 ಕೋಟಿ ರೂಪಾಯಿ ಮೌಲ್ಯದ ಕಂಪನಿ ನಡೆಸುತ್ತಿದ್ದಾರೆ.
ನಂದಿನಿ ಪಿರಮಲ್, ಪಿರಮಲ್ ಎಂಟರ್‌ಪ್ರೈಸಸ್ ಲಿಮಿಟೆಡ್‌ನ ಕಾರ್ಯನಿರ್ವಾಹಕ ನಿರ್ದೇಶಕಿ. ಕಂಪನಿಯ ವ್ಯವಹಾರ, ಮಾನವ ಸಂಪನ್ಮೂಲ, ಗುಣಮಟ್ಟ ಮತ್ತು ಅಪಾಯ ನಿರ್ವಹಣೆ ಮುಂತಾದ ಕ್ಷೇತ್ರಗಳನ್ನು ನೋಡಿಕೊಳ್ಳುತ್ತಾರೆ.
ನಂದಿನಿ ಪಿರಮಲ್ ಆಕ್ಸ್‌ಫರ್ಡ್ ವಿವಿಯಿಂದ ರಾಜಕೀಯ, ತತ್ವಶಾಸ್ತ್ರ ಮತ್ತು ಅರ್ಥಶಾಸ್ತ್ರದಲ್ಲಿ ಪದವಿ . ನಂತರ ಸ್ಟ್ಯಾನ್‌ಫೋರ್ಡ್ ವಿವಿಯಿಂದ MBA ಪಡೆದರು. ನಂತರ McKinsey & Companyಯಲ್ಲಿ ಕೆಲಸ ಮಾಡಿದ್ದಾರೆ
2010 ರಲ್ಲಿ ನಂದಿನಿ ಪಿರಮಲ್ ಗ್ರೂಪ್‌ನ ದೇಶೀಯ ಫಾರ್ಮುಲೇಶನ್ ವ್ಯವಹಾರವನ್ನು Abbott Laboratoriesಗೆ ಮಾರಾಟ ಮಾಡಿದರು. ಈ ಒಪ್ಪಂದ ಕಂಪನಿಗೆ ಭಾರಿ ಲಾಭ ನೀಡಿ ಹೆಚ್ಚಿನ ಅವಕಾಶಗಳಿಗೆ ದಾರಿ ಮಾಡಿತು
ಪಿರಮಲ್ ಗ್ಲೋಬಲ್ ಫಾರ್ಮಾದ CEO ಆಗಿರುವ ಪೀಟರ್ ಡಿ ಯಂಗ್ ಅವರನ್ನು ನಂದಿನಿ ವಿವಾಹವಾಗಿದ್ದು ಇಬ್ಬರೂ ಸ್ಟ್ಯಾನ್‌ಫೋರ್ಡ್‌ನಲ್ಲಿ ಓದಿದ್ದಾರೆ. ಪೀಟರ್ ಪ್ರಿನ್ಸ್‌ಟನ್ ವಿವಿಯಿಂದ ಎಂಜಿನಿಯರಿಂಗ್ ಪದವಿ ಪಡೆದಿದ್ದಾರೆ.
ನಂದಿನಿ 2020 ಮತ್ತು 2022 ರಲ್ಲಿ ಬಿಸಿನೆಸ್ ಟುಡೇ 'ಭಾರತದ ಅತ್ಯಂತ ಶಕ್ತಿಶಾಲಿ ಮಹಿಳೆಯರ' ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. 2014 ರಲ್ಲಿ ವಿಶ್ವ ಆರ್ಥಿಕ ವೇದಿಕೆಯ ಯಂಗ್ ಗ್ಲೋಬಲ್ ಲೀಡರ್ ಬಿರುದು ಸಿಕ್ಕಿದೆ.
ನಂದಿನಿ ಪಿರಮಲ್ ಅವರ ವೈಯಕ್ತಿಕ ನಿವ್ವಳ ಮೌಲ್ಯದ ಮಾಹಿತಿ ಲಭ್ಯವಿಲ್ಲ, ಆದರೆ ಅವರ ತಂದೆ ಅಜಯ್ ಪಿರಮಲ್ ಅವರ ಆಸ್ತಿ ಸುಮಾರು 2.8 ಬಿಲಿಯನ್ USD (ಸುಮಾರು 23,307 ಕೋಟಿ ರೂಪಾಯಿ).