Astrology

ಗ್ರಹಣಸಮಯದಲ್ಲಿ ಈ 6 ಕೆಲಸಗಳನ್ನು ಮಾಡಬೇಡಿ

Lunar eclipse 2024 ಖಗೋಳ ವಿಸ್ಮಯ ಇದೇ ತಿಂಗಳು ಘಟಿಸುತ್ತಿದ್ದು, ವಿಶೇಷವೆಂದರೆ ಈ ಬಾರಿ ಭಾಗಶಃ ಚಂದ್ರಗ್ರಹಣ ಪಿತೃಪಕ್ಷದಲ್ಲೇ ನಡೆಯುತ್ತಿರುವುದು 

ಸೆಪ್ಟೆಂಬರ್ 2024 ರಲ್ಲಿ ಚಂದ್ರಗ್ರಹಣ ಯಾವಾಗ?

2024 ರ ಎರಡನೇ ಚಂದ್ರಗ್ರಹಣ ಸೆಪ್ಟೆಂಬರ್ 18 ರಂದು ಬುಧವಾರ ನಡೆಯಲಿದೆ. ಭಾರತೀಯ ಕಾಲಮಾನದ ಪ್ರಕಾರ, ಈ ಚಂದ್ರಗ್ರಹಣ ಬೆಳಿಗ್ಗೆ 06:11 ರಿಂದ 10:17 ರವರೆಗೆ ಇರುತ್ತದೆ. ಅಂದರೆ ಇದರ ಒಟ್ಟು ಅವಧಿ 04 ಗಂಟೆ 06 ನಿಮಿಷಗಳು.

ಈ ಚಂದ್ರಗ್ರಹಣ ಭಾರತದಲ್ಲಿ ಗೋಚರಿಸುತ್ತದೆಯೇ?

ಸೆಪ್ಟೆಂಬರ್ 18 ರಂದು ಸಂಭವಿಸುವ ಚಂದ್ರಗ್ರಹಣವು ಭಾರತದಲ್ಲಿ ಗೋಚರಿಸುವುದಿಲ್ಲ, ಆದ್ದರಿಂದ ಇಲ್ಲಿ ಅದರ ಸೂತಕವು ಮಾನ್ಯವಾಗಿರುವುದಿಲ್ಲ. ಎಲ್ಲಿ ಲ್ಲಿನ ಜನರು ಈ ಸಮಯದಲ್ಲಿ ಯಾವ ಕೆಲಸಗಳನ್ನು ಮಾಡಬಾರದು ಎಂದು ತಿಳಿಯಿರಿ.

ಚಂದ್ರಗ್ರಹಣದ ಸಮಯದಲ್ಲಿ ಪೂಜೆ ಮಾಡಬೇಡಿ

ಧರ್ಮಗ್ರಂಥಗಳ ಪ್ರಕಾರ, ಗ್ರಹಣದ ಸಮಯದಲ್ಲಿ ದೇವರ ಪೂಜೆಯನ್ನು ಮಾಡಬಾರದು. ಜೊತೆಗೆ ದೇವರ ದೇವಸ್ಥಾನದ ಮೇಲೆ ಪರದೆಯನ್ನು ಹಾಕಬೇಕು. ಗ್ರಹಣದ ಸಮಯದಲ್ಲಿ ಪೂಜೆ ಮಾಡುವುದು ಶುಭವಲ್ಲ ಎಂದು ಪರಿಗಣಿಸಲಾಗಿದೆ.

ಗ್ರಹಣದ ಸಮಯದಲ್ಲಿ ಊಟ ಮಾಡಬೇಡಿ

ವಿದ್ವಾಂಸರ ಪ್ರಕಾರ, ಗ್ರಹಣದ ಸಮಯದಲ್ಲಿ ಊಟವನ್ನೂ ಮಾಡಬಾರದು, ಹಾಗೆ ಮಾಡುವುದರಿಂದ ಆರೋಗ್ಯ ಹದಗೆಡುವ ಅಪಾಯವಿದೆ. ತುಂಬಾ ಅಗತ್ಯವಿದ್ದರೆ ಮಕ್ಕಳು ಮತ್ತು ವೃದ್ಧರು ಸ್ವಲ್ಪ ತಿನ್ನಬಹುದು.

ಗ್ರಹಣದ ಸಮಯದಲ್ಲಿ ಮಲಗಬೇಡಿ

ಧರ್ಮಗ್ರಂಥಗಳಲ್ಲಿ ಹೇಳಲಾದ ನಿಯಮಗಳ ಪ್ರಕಾರ, ಗ್ರಹಣದ ಸಮಯದಲ್ಲಿ ಮಲಗಬಾರದು. ಹಾಗೆ ಮಾಡುವುದರಿಂದ ಅಶುಭ ಫಲಗಳು ಸಿಗುತ್ತವೆ. ಮಕ್ಕಳು ಮತ್ತು ವೃದ್ಧರಿಗೆ ಈ ನಿಯಮ ಅನ್ವಯಿಸುವುದಿಲ್ಲ.

ಸ್ತ್ರೀ ಸಂಗ ಮಾಡಬೇಡಿ

ಗ್ರಹಣದ ಸಮಯದಲ್ಲಿ ಸ್ತ್ರೀ ಸಂಗವನ್ನು ಎಂದಿಗೂ ಮಾಡಬಾರದು. ಹಾಗೆ ಮಾಡುವುದು ತುಂಬಾ ಅಶುಭ ಫಲಗಳನ್ನು ನೀಡುತ್ತದೆ ಎಂದು ಪರಿಗಣಿಸಲಾಗಿದೆ. ಅಂತಹ ಆಲೋಚನೆಗಳು ಸಹ ಮನಸ್ಸಿನಲ್ಲಿ ಬರಬಾರದು. ಇದನ್ನು ನೆನಪಿನಲ್ಲಿಡಿ.

ಚೂಪಾದ ವಸ್ತುಗಳನ್ನು ಬಳಸಬೇಡಿ

ಗ್ರಹಣದ ಸಮಯದಲ್ಲಿ ಚಾಕು, ಕತ್ತರಿ ಮತ್ತು ಸೂಜಿ ಮುಂತಾದ ಚೂಪಾದ ವಸ್ತುಗಳನ್ನು ಬಳಸಬಾರದು. ವಿದ್ವಾಂಸರ ಪ್ರಕಾರ, ಈ ಕೆಲಸವನ್ನು ಮಾಡುವುದರಿಂದ ಭವಿಷ್ಯದಲ್ಲಿ ತೊಂದರೆಗಳನ್ನು ಎದುರಿಸಬೇಕಾಗುತ್ತದೆ.

ಚಂದ್ರಗ್ರಹಣವನ್ನು ನೇರವಾಗಿ ನೋಡಬೇಡಿ

ವಿದ್ವಾಂಸರ ಪ್ರಕಾರ, ಚಂದ್ರ ಗ್ರಹಣವನ್ನು ಎಂದಿಗೂ ಬರಿಗಣ್ಣಿನಿಂದ ನೋಡಬಾರದು. ಚಂದ್ರ ಗ್ರಹಣದ ಕಿರಣಗಳ ಸಂಪರ್ಕಕ್ಕೆ ನೇರವಾಗಿ ಬರಬಾರದು. ಇದು ಆರೋಗ್ಯವನ್ನು ಹಾಳುಮಾಡುತ್ತದೆ.

ಗಣೇಶ ಚತುರ್ಥಿ 2024: ನಿಮ್ಮ ರಾಶಿಗನುಗುಣವಾಗಿ ಪರಿಹಾರಗಳು ಇಲ್ಲಿವೆ

ಬಾಳೆಹಣ್ಣು ಫೇಸ್‌ಪ್ಯಾಕ್ ಹಚ್ಚಿದರೆ ಸಾಕು, ಪಾರ್ಲರ್ ಗೆ ಹೋಗುವ ಅಗತ್ಯವಿಲ್ಲ!

ಗಣೇಶನಿಗೆ ಪ್ರಿಯವಾದ 7 ಹೂವುಗಳು, ಸಸ್ಯಗಳು ಇದ್ದರೆ ಸಿರಿ ಸಂಪತ್ತು ನಿಮ್ಮದೇ!

ಕೃಷ್ಣ ಜನ್ಮಾಷ್ಟಮಿ 2024: ಬಾಲ ಗೋಪಾಲನ ಸ್ವಚ್ಛಗೊಳಿಸಲು 5 ಸರಳ ವಿಧಾನಗಳು ಇಲ್ಲಿವೆ