ಆಚಾರ್ಯ ಚಾಣಕ್ಯರ ಸೂತ್ರಗಳು ಇಂದಿಗೂ ನಮಗೆ ಬಹಳ ಉಪಯುಕ್ತವಾಗಿವೆ. ಇವರ ಪ್ರಕಾರ ಅದೃಷ್ಟವಂತರಿಗೆ ಮಾತ್ರ ದೊರಕುವ ಕೆಲವು ಸುಖಗಳಾವುವೆಂದು ತಿಳಿದುಕೊಳ್ಳೋಣ.
Image credits: adobe stock
ಉತ್ತಮ ಆರೋಗ್ಯ
ಏನೇ ಇದ್ದರೂ ಇಲ್ಲದಿದ್ದರೂ ಆರೋಗ್ಯ ಮಾತ್ರ ಖಂಡಿತ ಇರಬೇಕು. ಏಕೆಂದರೆ ಆರೋಗ್ಯವಿಲ್ಲದಿದ್ದರೆ ನೀವು ಏನೂ ಮಾಡಲಾಗುವುದಿಲ್ಲ. ಏನನ್ನೂ ಸಾಧಿಸಲಾಗುವುದಿಲ್ಲ. ಆದರೆ ಈ ಆರೋಗ್ಯ ಎಲ್ಲರಿಗೂ ಇರುವುದಿಲ್ಲ,
ಸಂಪತ್ತು
ಆರೋಗ್ಯದ ನಂತರ ಪ್ರತಿಯೊಬ್ಬರಿಗೂ ಸಾಕಷ್ಟು ಸಂಪತ್ತು ಅಗತ್ಯ. ಸಂಪತ್ತು ಇದ್ದರೆ ಮಾತ್ರ ನಮ್ಮ ಅವಶ್ಯಕತೆಗಳನ್ನು ಪೂರೈಸಿಕೊಳ್ಳಬಹುದು. ಆದರೆ ಈ ಸಂಪತ್ತು ಎಲ್ಲರ ಬಳಿ ಇರುವುದಿಲ್ಲ.
ಪ್ರೀತಿಸುವ ಪತ್ನಿ
ನಿಜವಾಗಿಯೂ ಗಂಡನನ್ನು ಪ್ರೀತಿಸುವ ಪತ್ನಿ ಸಿಗುವುದು ಬಹಳ ಅದೃಷ್ಟ. ಗಂಡನನ್ನು ಪ್ರೀತಿಸುವವರು, ಮಾತು ಕೇಳುವವರು ಬಹಳ ಕಡಿಮೆ ಜನ ಇರುತ್ತಾರೆ. ಇಂತಹ ಪತ್ನಿ ಸಿಕ್ಕ ಗಂಡಂದಿರು ಬಹಳ ಅದೃಷ್ಟವಂತರು.
ಮಾತು ಕೇಳುವ ಮಕ್ಕಳು
ಈ ಕಾಲದ ಮಕ್ಕಳಿಗೆ ತಾಳ್ಮೆಯೇ ಇಲ್ಲ. ಆದರೆ ಈ ಪೀಳಿಗೆಯಲ್ಲೂ ನಿಮ್ಮ ಮಕ್ಕಳು ವಿಧೇಯರಾಗಿದ್ದು, ತಂದೆ-ತಾಯಿಯನ್ನು ಗೌರವಿಸಿದರೆ ನೀವು ಬಹಳ ಅದೃಷ್ಟವಂತರು ಇಂತಹ ಮಕ್ಕಳಿರುವುದು ಇಂದು ಬಹಳ ಅಪರೂಪ.
ಗೌರವ
ಮೇಲೆ ಹೇಳಿದವುಗಳ ಜೊತೆಗೆ ನಿಮ್ಮ ಮನೆಯಲ್ಲಿ, ಸಮಾಜದಲ್ಲಿ, ದೇಶದಲ್ಲಿ ನಿಮಗೊಂದು ಗೌರವ, ಗುರುತಿಸುವಿಕೆ ಇದ್ದರೆ ನೀವು ಬಹಳ ಅದೃಷ್ಟವಂತರು.